ವಸಂತ ಪಂಚಮಿ ಪ್ರಯುಕ್ತ ಶಾರದಾ ದೇಗುಲದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು.

ಗಂಗಾವತಿ. ವಸಂತ ಪಂಚಮಿ ಪ್ರಯುಕ್ತ ಸೋಮವಾರದಂದು ಶೃಂಗೇರಿಯ ಶಾರದಾ ಪೀಠದ ಗಂಗಾವತಿ ಶಂಕರ ಮಠದ ಶಾರದಾ ದೇಗುಲದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ದೇವಸ್ಥಾನದ ಪ್ರಧಾನ ಅರ್ಚಕ ಕುಮಾರ್ ಭಟ್ ನೇತೃತ್ವದಲ್ಲಿ ಜರುಗಿದವು.
ಶ್ರೀ ಶಾರದಾ ಮಾತೆ ಸೇರಿದಂತೆ ಪರಿವಾರ ದೇವರುಗಳಿಗೆ ಪಂಚಾಮೃತ ಅಭಿಷೇಕ, ಅಷ್ಟೋತ್ತರ ಶತನಾಮಾವಳಿ ಪಾರಾಯಣ ಇವುಗಳ ಜೊತೆಗೆ 14 ಅಧಿಕ ಚಿಕ್ಕ ಮಕ್ಕಳ ವಿದ್ಯಾಭ್ಯಾಸಕ್ಕೆ ಅಕ್ಷರ ಅಭ್ಯಾಸವನ್ನು ನೆರವೇರಿಸಲಾಯಿತು.
ಜೊತೆಗೆ ವಿವಿಧ ಶಾಲಾ ಕಾಲೇಜುಗಳ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಸಂಕಲ್ಪವನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಕುಮಾರ್ ಮಾತನಾಡಿ, ಮಾಘ ಮಾಸದ ಸೋಮವಾರ ದಿನವಾದ ಇಂದು ರೇವತಿ ನಕ್ಷತ್ರದ ಈ ಶುಭದಿನ ಮಕ್ಕಳ ಶೈಕ್ಷಣಿಕ ವ್ಯಾಸಂಗಕ್ಕಾಗಿ ಶ್ರೀ ಶಾರದಾ ಮಾತೆಯನ್ನು ಪೂಜಿಸುವ ಮಹತ್ವ ದಿನವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಕಲ್ಪ, ಅಕ್ಷರ ಅಭ್ಯಾಸ ವಿದ್ಯಾರ್ಥಿಗಳಿಗೆ ನೆರವೇರಿಸಲಾಯಿತು. ಪಾಲಕರು ಹಾಗೂ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

Leave a Reply

Discover more from VISHWAROOPA NEWS BLOG

Subscribe now to keep reading and get access to the full archive.

Continue reading