
ಶ್ರೀ ಶಾರದಾ ಶರನ್ನ ನವರಾತ್ರಿ. ಚಂಡಿ ಹವನ ಸಂಪನ್ನ
ಗಂಗಾವತಿ. ನಗರದ ಶಂಕರಮಠದ ಶ್ರೀ ಶಾರದಾದೇ ಗುಳದಲ್ಲಿ ಬುಧವಾರ ರಂದು ನವ ಚಂಡಿ ಹವನ ಸಂಪನ್ನಗೊಂಡಿತು. ವೇದಮೂರ್ತಿ ಮಹೇಶ್ ಭಟ್ ಜೋಶಿ ಹಾಗೂ ತಂಡ ದವರಿಂದ ಸೇವಾಕರ್ತರಿಗೆ ಮಹಾಸಂಕಲ್ಪ ಹಾಗೂ ವೈದ್ಯ ನೇತೃತ್ವದಲ್ಲಿ ಪೂರ್ಣಾಹುತಿಯನ್ನು ಸಂಪನ್ನಗೊಳಿಸಲಾಯಿತು. ಈ ಸಂದರ್ಭದಲ್ಲಿ ಧರ್ಮದರ್ಶಿ ನಾರಾಯಣರಾವ್ ವೈದ್ಯ ಮಾತನಾಡಿ ಶೃಂಗೇರಿಯ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ 75ನೇ ವರ್ಧಂತಿ ಮಹೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ನವಚಂಡಿ ಹವನವನ್ನು ಆಯೋಜಿಸಲಾಗಿದ್ದು. ಇದರೊಂದಿಗೆ ದಂಪತಿ ಪೂಜೆ ಹಾಗೂ ಕನ್ನಿಕಾ ಪೂಜೆಯನ್ನು ಭಕ್ತರಿಂದ ನೆರವೇರಿಸಲಾಯಿತು….