ಹಿರೇಕೊಳಚಿ ಶಾಲೆಯಲ್ಲಿ ಹೈದ್ರಾಬಾದ ಕನಾ೯ಟಕ ವಿಮೋಚನಾ ದಿನಾಚರಣೆ

ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಕೊಳಚಿಯಲ್ಲಿ ಸೆಪ್ಟೆಂಬರ್‌-17 ರಂದು ಹೈದ್ರಾಬಾದ್ ಕರ್ನಾಟಕ ವಿಮೋಚನ ದಿನಾಚರಣೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಧ್ವಜಾರೋಹಣವನ್ನು ಗ್ರಾಮದ ಮಾಜಿ ಅಧ್ಯಕ್ಷರು ಶ್ರೀಮತಿ ಆಲೂರು ಗಂಗಮ್ಮ ಹಾಗೂ ಗ್ರಾಮಪಂಚಾಯತಿ ಸದಸ್ಯೆ ಶ್ರೀಮತಿ ಓಬಳ್ದಾರ್ ರೇಖಾ ರವರು ನೆರವೇರಿಸಿದರು. ಜೊತೆಗೆ ಇಂದು ವಿಶ್ವಕರ್ಮ ಜಯಂತಿಯನ್ನು ಇದೇ ಸಂದಭ೯ದಲ್ಲಿ ಪೂಜಾ.ಕಾರ್ಯಕ್ರಮದ ಮೂಲಕ ನೆರವೇರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಹಿರಿಯ ಮುಖ್ಯ ಗುರುಗಳು ಶ್ರೀ ಮಧುನಾಯ್ಕ ಎಲ್ ರವರು ವಹಿಸಿದ್ದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಈ ಶಾಲೆಯ ಎಲ್ಲಾ ಶಿಕ್ಷಕರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Discover more from VISHWAROOPA NEWS BLOG

Subscribe now to keep reading and get access to the full archive.

Continue reading