Headlines
ಲೇಖಿಕಾ ಸಾಹಿತ್ಯ ವೇದಿಕೆ ವತಿಯಿಂದ ಲೇಖಕಾ ಶ್ರೀ ಪ್ರಶಸ್ತಿ ಪ್ರಧಾನ

ಲೇಖಿಕಾ ಸಾಹಿತ್ಯ ವೇದಿಕೆ ವತಿಯಿಂದ ಲೇಖಕಾ ಶ್ರೀ ಪ್ರಶಸ್ತಿ ಪ್ರಧಾನ

ಬೆಂಗಳೂರು: ಬೆಂಗಳೂರಿನ ಲೇಖಿಕಾ ಸಾಹಿತ್ಯಗೆ 25 ವರ್ಷ ತುಂಬಿದ ಪ್ರಯುಕ್ತ ವೇದಿಕೆಯು ತನ್ನ 25ನೇ ವಾರ್ಷಿಕೊತ್ಸವ ರಜತ ಮಹೋತ್ಸವ ಲೇಖಿಕಾ ಸಾಹಿತ್ಯ ಸಂಭ್ರಮದ ಅಂಗವಾಗಿ 25 ಸಾಹಿತ್ಯ ಕ್ಷೇತ್ರದ ಸಾಧಕ ಲೇಖಕ ಲೇಖಕಿಯರಿಗೆ ದಿನಾಂಕ 9- 11-2025ರ ಭಾನುವಾರ ಹಾಸನದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಲೇಖಿಕಾ ಶ್ರಿ 2025 ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಹಾಸನದ ಸಾಹಿತಿ ಗೊರೂರು ಅನಂತರಾಜು, ಎನ್.ಎಲ್. ಚನ್ನೇಗೌಡ, ಉದಯರವಿ, ಲೀಲಾವತಿ, ಸುಕನ್ಯ ಮುಕುಂದ, ಸುಮಾ ವೀಣಾ, ಪ್ರಭಾ…

Read More
ಶಾಹೀನ್ ಲರ್ನ್ ಅಕಾಡೆಮಿ ಶಾಲೆಯಿಂದ ಸಾಹಿತಿ ಪ್ರತಿಮಾ ಹಾಸನ್ ಗೆ ಸನ್ಮಾನ

ಶಾಹೀನ್ ಲರ್ನ್ ಅಕಾಡೆಮಿ ಶಾಲೆಯಿಂದ ಸಾಹಿತಿ ಪ್ರತಿಮಾ ಹಾಸನ್ ಗೆ ಸನ್ಮಾನ

ಹಾಸನ: ನವೆಂಬರ್‌-1 ರಂದು ಹಾಸನದ ಹಳೆ ಈದ್ಗಾ ಮೈದಾನ, ಹೊಸ ಲೈನ್ ರಸ್ತೆಯಲ್ಲಿರುವ “ಶಾಹೀನ್ ಲರ್ನ್ ಅಕಾಡೆಮಿ ಶಾಲೆ” ಯಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಸಾಹಿತಿ, ಶಿಕ್ಷಕಿ,ಸಾಮಾಜಿಕ ಚಿಂತಕಿ, ಪತ್ರಕರ್ತೆ ಹಾಗೂ ಸಂಸ್ಥಾಪಕ ಅಧ್ಯಕ್ಷರು, ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಹೆಚ್.ಎಸ್. ಪ್ರತಿಮಾ ಹಾಸನ್ ರವರನ್ನು ಆಹ್ವಾನಿಸಿ ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರನ್ನಾಗಿ ಮಾಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಡಲಾಗಿತ್ತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕನ್ನಡವನ್ನು ಉಳಿಸುವುದೇ…

Read More
ಮಧು ನಾಯ್ಕ್ ಲಂಬಾಣಿ ರಚನೆಯ ಸಿಂಗಾರ ಹಾಡು ಬಿಡುಗಡೆ

ಮಧು ನಾಯ್ಕ್ ಲಂಬಾಣಿ ರಚನೆಯ ಸಿಂಗಾರ ಹಾಡು ಬಿಡುಗಡೆ

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದ ಕರ್ನಾಟಕ ಧ್ವನಿ ಸಂಚಿಕೆ ಒಂದರ ಅಂತಿಮ ಹಂತದ (Final Stage) ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಮಧುನಾಯ್ಕಲಂಬಾಣಿಯವರ ರಚನೆಯ ಸಿಂಗಾರ ಹಾಡನ್ನು ಹೊಸಪೇಟೆಯ ಖ್ಯಾತ ಗಾಯಕಿ ಶ್ರೀಮತಿ ಕಮಲಾ ಕುಲಕರ್ಣಿಯವರು ಬಿಡುಗಡೆಗೊಳಿಸಿದರು. ಈ ಹಾಡಿಗೆ ರಾಗ ಸಂಯೋಜನೆ ಮಾಡಿ ಹಾಡಿದ ಗಾಯಕಿ ಶ್ರೀಮತಿ ಲಲಿತ ಸಿದ್ದಿ ಹಾಗೂ ಈ ಹಾಡಿಗೆ ಸಂಗೀತ ಸಂಯೋಜನೆ ಶ್ರೀನಿವಾಸನಾಯ್ಕ, ಡರೆಕ್ಷನ್ ರವಿಕಿರಣ, ಎಡಿಟಿಂಗ್ ಅಭಿಷೇಕ ಎಮ್., ನೃತ್ಯ ಪಲ್ಲವಿ ಎಲ್. ಇವರದ್ದಾಗಿದೆ. ರಾಜ್ಯದಾದ್ಯಂತ ಈ…

Read More
ಜೀವನಾನುಭವಗಳು ವ್ಯಕ್ತಿಯ ಶಕ್ತಿ – ಗೊರೂರು ಶಿವೇಶ್

ಜೀವನಾನುಭವಗಳು ವ್ಯಕ್ತಿಯ ಶಕ್ತಿ – ಗೊರೂರು ಶಿವೇಶ್

ಜೀವನಾನುಭವಗಳು ವ್ಯಕ್ತಿಯ ಶಕ್ತಿ ಎಂದು ಲೇಖಕ ಗೊರೂರು ಶಿವೇಶ್ ಅಭಿಪ್ರಾಯ ಪಟ್ಟರು‌. ಅವರು ನಗರದ ಟಾರ್ಗೆಟ್ ಪಿಯು ಕಾಲೇಜಿನಲ್ಲಿ ಕದಂಬ ಸೇನೆ ಆಯೋಜಿಸಿದ ಪದಗ್ರಹಣ, ನಿವೃತ್ತ ಪ್ರಾಂಶುಪಾಲರಿಗೆ ಸನ್ಮಾನ ಹಾಗೂ ಎಸ್ ಎಲ್ ಭೈರಪ್ಪನವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಭೈರಪ್ಪನವರು ಬಾಲ್ಯದಲ್ಲಿ ಸೋದರ ಸೋದರಿಯರು ತಾಯಿ ಕಳೆದುಕೊಂಡು ಅನಾಥರಾದ ಸಂದರ್ಭದಲ್ಲಿ ಹುಟ್ಟಿದ ಜೀವನದ ಪ್ರಶ್ನೆಗಳಿಗೆ ತತ್ವಶಾಸ್ತ್ರದಲ್ಲಿ ಉತ್ತರ ಕಂಡುಕೊಂಡು ಕೃತಿಗಳಲ್ಲಿ ಅವುಗಳನ್ನು ಪರಿಚಯಿಸಿದರು. ಹುಟ್ಟು ಸಾವು ಮತ್ತು ಅಸ್ತಿತ್ವಗಳ ನಿರಂತರ ಶೋಧನೆಯಲ್ಲಿರುವ ವ್ಯಕ್ತಿಗೆ ತತ್ವಶಾಸ್ತ್ರ ಬೆಳಕು ನೀಡಬಹುದಾದರೂ…

Read More
ಕರ್ನಾಟಕ ರಾಜ್ಯ ಬರಹಗಾರರ ಸಂಘ ರಿ. ಅರಸೀಕೆರೆ ತಾಲ್ಲೂಕು ಅಧ್ಯಕ್ಷರಾಗಿ ಡಾ.ಬಸವರಾಜ್ ಆಯ್ಕೆ

ಕರ್ನಾಟಕ ರಾಜ್ಯ ಬರಹಗಾರರ ಸಂಘ ರಿ. ಅರಸೀಕೆರೆ ತಾಲ್ಲೂಕು ಅಧ್ಯಕ್ಷರಾಗಿ ಡಾ.ಬಸವರಾಜ್ ಆಯ್ಕೆ

ಕರ್ನಾಟಕ ರಾಜ್ಯ ಬರಹಗಾರರ ಸಂಘವು ಒಂದು ನೋಂದಾಯಿತ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಯಾಗಿದ್ದು, ಕೇಂದ್ರ ಕಛೇರಿ ಹೂವಿನ ಹಡಗಲಿಯಾಗಿದ್ದು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಘಟಕಗಳನ್ನು, ತಾಲ್ಲೂಕು ಘಟಕಗಳನ್ನು ಹೊಂದಿದೆ. ಅಲ್ಲದೇ ಹೊರ ರಾಜ್ಯದಲ್ಲೂ ತನ್ನ ಘಟಕಗಳನ್ನು ವಿಸ್ತರಿಸಿಕೊಂಡು ಈಗಾಗಲೇ ಹಲವಾರು ಸಾಹಿತ್ಯ ಕಾರ್ಯಕ್ರಮ ನಡೆಸಿಕೊಂಡು ಬಂದಿದೆ. ಹಾಸನ ಜಿಲ್ಲಾ ಘಟಕವು ಸುಂದರೇಶ ಡಿ ಉಡುವಾರೆ ಅವರ ಅಧ್ಯಕ್ಷತೆಯಲ್ಲಿ ರಾಜ್ಯದಲ್ಲೆ ಅತ್ಯುತ್ತಮವಾದ ನಾಡು ನುಡಿ ಕಲೆ ಸಾಹಿತ್ಯ ಕವಿ ಕಾವ್ಯ ಗಾಯನ ಕಲಾಕುಂಚ ವಿಭಿನ್ನ ಕಾರ್ಯಕ್ರಮಗಳನ್ನು ಹಾಗೂ…

Read More
ಹೊಸಪೇಟೆಯಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘದಿಂದ ರಾಜ್ಯಮಟ್ಟದ ಕರೋಕೆ ಚಿತ್ರಗೀತೆ ಸ್ಪರ್ಧೆ

ಹೊಸಪೇಟೆಯಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘದಿಂದ ರಾಜ್ಯಮಟ್ಟದ ಕರೋಕೆ ಚಿತ್ರಗೀತೆ ಸ್ಪರ್ಧೆ

ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಇವರು ಆಯೋಜಿಸಿರುವ ಕರ್ನಾಟಕ ಧ್ವನಿ ಸಂಚಿಕೆ ಒಂದು ಈ ಸ್ಪರ್ಧೆಯ ಅಂತಿಮ ಹಂತದ ಸ್ಪರ್ಧೆಯನ್ನು ವಿಜಯನಗರ ಜಿಲ್ಲೆ, ಹೊಸಪೇಟೆಯ ಬುದ್ಧ ಬಸವ ಭವನದಲ್ಲಿ ದಿನಾಂಕ 26-10-2025ರ ಭಾನುವಾರದಂದು ಆಯೋಜಿಸಲಾಗಿದೆ. ಈ ಗಾಯನ ಸ್ಪರ್ಧೆಯಲ್ಲಿ 38 ಜನ ಗಾಯಕರಿದ್ದು ಯುಗಳ ಗೀತೆಗಳು ಹಾಡಲಿದ್ದಾರೆ ಅಂತಿಮವಾಗಿ ಆಯ್ಕೆಯಾಗುವ ಗಾಯಕರಿಗೆ ಬೆಳಗಾವಿಯಲ್ಲಿ ನಡೆಯಲಿರುವ ಕನ್ನಡ ನುಡಿ ವೈಭವ 2026ರ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಆಶಾರಾಣಿ…

Read More
ನಾಟಕಕಾರ ಗೊರೂರು ಅನಂತರಾಜು ಅವರಿಗೆ ಕಲಾಭೂಷಣ ಪ್ರಶಸ್ತಿ

ನಾಟಕಕಾರ ಗೊರೂರು ಅನಂತರಾಜು ಅವರಿಗೆ ಕಲಾಭೂಷಣ ಪ್ರಶಸ್ತಿ

ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ(ರಿ)ಯ ಸರ್ವ ಸದಸ್ಯರ 8ನೇ ವಾರ್ಷಿಕ ಮಹಾಸಭೆಯು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಜರುಗಿತು.ಸಭೆಯಲ್ಲಿ ಇತ್ತೀಚೆಗೆ ಕೀರ್ತಿಶೇಷರಾದ ಹಾಸನದ ಹಿರಿಯ ಕಲಾವಿದರಾದ ಚೆಲುವೆಗೌಡರು, ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಂ. ಶಿವಣ್ಣ, ಕಾದಂಬರಿಕಾರರಾದ ಶ್ರೀ ಎಸ್. ಎಲ್ ಭೈರಪ್ಪ, ಗಾಯಕರಾದ ಹಾಸನ ಬಾಬು ಹಾಗೂ ಹರಿಕಥಾ ವಿದ್ವಾಂಸರು ಹಾಗೂ ಪೌರಾಣಿಕ ರಂಗ ನಿರ್ದೇಶಕರಾದ ಚಂದ್ರಚಾರ್ ಇವರುಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭೆಯ ಆಗುಹೋಗುಗಳ ವರದಿಯ ನಂತರ ಕಲಾವಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಹಲವು…

Read More
ಸುಂದರ ನವಿಲಿಗೆ ಚಂದದ ಗರಿ ಪುಸ್ತಕ ಲೋಕಾರ್ಪಣೆ

ಸುಂದರ ನವಿಲಿಗೆ ಚಂದದ ಗರಿ ಪುಸ್ತಕ ಲೋಕಾರ್ಪಣೆ

ಅರಸೀಕೆರೆ: ರೋಟರಿ ಭವನದಲ್ಲಿ ಅಕ್ಟೋಬರ್‌-11 ಶನಿವಾರ ಸುಂದರ ನವಿಲಿಗೆ ಚಂದದ ಗರಿ ಪುಸ್ತಕ ಲೋಕಾರ್ಪಣಿ ಸಮಾರಂಭವು ನೆರವೇರಿತು. ಕಾತ್ಯಾಯಿನಿ ತೇವರಿಮಠ ನಿರೂಪಣೆ, ಶಫೀತಾಬೇಗಂರಿಂದ ಪ್ರಾರ್ಥನೆ , ಬೇಲೂರು ಮಧುಮಾಲತಿ ರುದ್ರೇಶ್ ರಿಂದ ಸ್ವಾಗತ ನಂತರ ಪರಮೇಶ್ ಕಸಾಪ ಅರಸೀಕೆರೆ ಇವರು ಉದ್ಘಾಟನಾ ನುಡಿಯಲ್ಲಿ ಸಾಹಿತ್ಯವು ವಿಶಾಲವಾದ ‌ ಪ್ರಕ್ರಿಯವಾಗಿದೆ. ಇರುವ ಸ್ಥಿತಿಯನ್ನ ವೈಭವೀಕರಿಸಿ ಕಥೆ, ಕವನ , ನಾಟಕ ಹೀಗೆ ವಿವಿಧ‌ ಪ್ರಕಾರವು ರಚಿಸುವುದಾಗಿದೆ ಎಂದು‌ ತಾವು ನಾಟಕದಲ್ಲಿ ನಟಿಸುವಾಗ ಆದ ಕೆಲವು ಅನುಭವಗಳನ್ನು ಹಂಚಿಕೊಂಡರು. ಪ್ರಾಸ್ತಾವಿಕ…

Read More
ಕರ್ನಾಟಕ ರಾಜ್ಯ ಬರಹಗಾರರ ಸಂಘದ ಹಾಸನ ಜಿಲ್ಲಾ ಘಟಕದ ಸಂಚಾಲಕರಾಗಿ ಶ್ರೀಮತಿ ಇಂದಿರಾ ಲೋಕೇಶ್ ಆಯ್ಕೆ.

ಕರ್ನಾಟಕ ರಾಜ್ಯ ಬರಹಗಾರರ ಸಂಘದ ಹಾಸನ ಜಿಲ್ಲಾ ಘಟಕದ ಸಂಚಾಲಕರಾಗಿ ಶ್ರೀಮತಿ ಇಂದಿರಾ ಲೋಕೇಶ್ ಆಯ್ಕೆ.

ಹಾಸನ: ಕರ್ನಾಟಕ ರಾಜ್ಯ ಬರಹಗಾರರ ಸಂಘವು ಒಂದು ನೋಂದಾಯಿತ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಯಾಗಿದ್ದು, ಕೇಂದ್ರ ಕಛೇರಿ ಹೂವಿನ ಹಡಗಲಿಯಾಗಿದ್ದು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಘಟಕಗಳನ್ನು, ತಾಲ್ಲೂಕು ಘಟಕಗಳನ್ನು ಹೊಂದಿದೆ. ಅಲ್ಲದೇ ಹೊರ ರಾಜ್ಯದಲ್ಲೂ ತನ್ನ ಘಟಕಗಳನ್ನು ವಿಸ್ತರಿಸಿಕೊಂಡು ಈಗಾಗಲೇ ಹಲವಾರು ಸಾಹಿತ್ಯ ಕಾರ್ಯಕ್ರಮ ನಡೆಸಿಕೊಂಡು ಬಂದಿದೆ. ಹಾಸನ ಜಿಲ್ಲಾ ಘಟಕವು ರಾಜ್ಯದಲ್ಲೆ ಅತ್ಯುತ್ತಮವಾದ ನಾಡು ನುಡಿ ಕಲೆ ಸಾಹಿತ್ಯ ಕವಿ ಕಾವ್ಯ ಗಾಯನ ಕಲಾ ಕುಂಚ ಹೀಗೆ ವಿಭಿನ್ನ ಕಾರ್ಯಕ್ರಮಗಳನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ…

Read More
ಗೊರೂರು ಅನಂತರಾಜು ಅವರಿಗೆ ಲೇಖಿಕಾ ಶ್ರೀ 2025 ಪ್ರಶಸ್ತಿ

ಗೊರೂರು ಅನಂತರಾಜು ಅವರಿಗೆ ಲೇಖಿಕಾ ಶ್ರೀ 2025 ಪ್ರಶಸ್ತಿ

ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆಗೆ 25 ವರ್ಷ ತುಂಬಿದ ಪ್ರಯುಕ್ತ ವೇದಿಕೆಯು ತನ್ನ 25ನೇ ವಾರ್ಷಿಕೋತ್ಸವ ರಜತ ಮಹೋತ್ಸವ ಲೇಖಿಕಾ ಸಾಹಿತ್ಯ ಸಂಭ್ರಮದ ಅಂಗವಾಗಿ 25 ಸಾಧಕರಿಗೆ ಲೇಖಿಕಾ ಶ್ರೀ 2025 ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಪ್ರಶಸ್ತಿ ಫಲಕ, ಸ್ಮರಣಿಕೆ, ಶಾಲು, ಫಲ ತಾಂಬೂಲಗಳನ್ನು ನವೆಂಬರ್ 9ರ ಭಾನುವಾರ ಹಾಸನದ ಎವಿಕೆ ಕಾಲೇಜು ಸಭಾಂಗಣದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಲೇಖಿಕಾ ಸಾಹಿತ್ಯ ವೇದಿಕೆಯ ಸಂಚಾಲಕರಾದ ಶ್ರೀಮತಿ ಶೈಲಜಾ ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿ ಪುರಸ್ಕೃತರು:…

Read More