ಗಂಗಾವತಿ: ಲಯನ್ಸ್ ಕ್ಲಬ್ ಗಂಗಾವತಿ ಅಧ್ಯಕ್ಷರು, ದಂತವೈದ್ಯರು, ಪರಿಸರ ಪ್ರೇಮಿಗಳು, ಸಾಹಿತಿಗಳಾದ ಡಾ|| ಶಿವಕುಮಾರ ಮಾಲಿಪಾಟೀಲ್ ಅವರಿಗೆ ಅಕ್ಟೋಬರ್-೧೦ ರಂದು ಹೊಸಪೇಟೆಯಲ್ಲಿ ನಡೆದ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಇಂದಿರಾಗಾಂಧಿ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ ಲಭಿಸಿದೆ.
ಈ ಪ್ರಶಸ್ತಿಯನ್ನು ಅರಣ್ಯ ಸಚಿವರಾದ ಈಶ್ವರ ಖಂಡ್ರೆ, ಮಂಡಳಿಯ ಅಧ್ಯಕ್ಷರಾದ ಪಿ.ಎಂ. ನರೇಂದ್ರಸ್ವಾಮಿ, ಕೊಪ್ಪಳ ಸಂಸದರಾದ ರಾಜಶೇಖರ ಹಿಟ್ನಾಳ್, ಬಳ್ಳಾರಿ ಸಂಸದರಾದ ಇ. ತುಕಾರಾಂ, ವಿಜಯನಗರ ಶಾಸಕ ಹೆಚ್.ಆರ್. ಗವಿಯಪ್ಪ, ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಸೇರಿದಂತೆ ಹಲವಾರು ಗಣ್ಯವ್ಯಕ್ತಿಗಳ ಸಮ್ಮುಖದಲ್ಲಿ ನೀಡಲಾಗಿರುತ್ತದೆ.
ಡಾ|| ಶಿವಕುಮಾರ ಮಾಲಿಪಾಟೀಲ್ ಅವರು ವೃತ್ತಿಯಲ್ಲಿ ದಂತವೈದ್ಯರಾಗಿ ಸಾಮಾಜಿಕ ಕಳಕಳಿ ಹಾಗೂ ನಿಸ್ವಾರ್ಥತೆಯಿಂದ, ಇತಿಹಾಸ ಸಂಶೋಧಕರಾದ ಡಾ. ಶರಣಬಸಪ್ಪ ಕೋಲ್ಕಾರ್, ಗಂಗಾವತಿ ಪ್ರಾಣೇಶ್, ಕಳಕನಗೌಡ ಪಾಟೀಲ್ ಹಾಗೂ ಇತರ ಹಿರಿಯರ ಮಾರ್ಗದರ್ಶನದಲ್ಲಿ ಹಲವಾರು ಸಮಾಜಮುಖಿ, ಪರಿಸರ ಸ್ನೇಹಿ ಕಾರ್ಯಗಳನ್ನು ಮಾಡಿರುತ್ತಾರೆ.
ಈ ಪ್ರಶಸ್ತಿಯನ್ನು ಸ್ವೀಕರಿಸಿದ ಡಾ|| ಶಿವಕುಮಾರ ಮಾಲಿಪಾಟೀಲ್ ಮಾತನಾಡಿ, ನಮ್ಮ ಈ ಸೇವೆಗೆ ಗಂಗಾವತಿ ಚಾರಣ ಬಳಗ ಸದಸ್ಯರಾದ ಮೈಲಾರಪ್ಪ ಬೂದಿಹಾಳ, ಪ್ರಹ್ಲಾದ ಕುಲಕರ್ಣಿ, ರಮೇಶ ಗಬ್ಬೂರು, ರಾಮನಾಥ ಭಂಡಾರಕರ್, ಸುರೇಶ ಸಿಂಗನಾಳ, ಬದರಿನಾಥ ಸಿರಿಗೇರಿ, ಡಾ. ಬದರಿ ಪ್ರಸಾದ, ಶ್ರೀಮತಿ ಸಿ. ಮಹಾಲಕ್ಷಿö್ಮÃ, ಉಲ್ಲಾಸ್, ಶಾಹೀನ್ ಕೌಸರ್, ಮಂಜುನಾಥ ಗುಡ್ಲಾನೂರು, ಆಂಜನೇಯ ಟಿ., ಎನ್. ಸೂರ್ಯನಾರಾಯಣ, ಹನುಮೇಶ ಭಾವಿಕಟ್ಟಿ, ಮಹಮ್ಮದ ರಫಿ, ಆನಂದ ಲಕ್ಕಿ, ಮಂಜುನಾಥ ಕಟ್ಟಿಮನಿ, ಜಗದೀಶ ಮಾಲಿಪಾಟೀಲ್, ಹರನಾಯಕ, ಶರಣಪ್ಪ ಹಡಪದ ಹೀಗೆ ಸಮಾನ ಮನಸ್ಕರ ಸಹಕಾರದಿಂದ ದುರ್ಗಮ್ಮನ ಹಳ್ಳ ಸ್ವಚ್ಛತಾ ಆಂದೋಲನ, ಪ್ಲಾಸ್ಟಿಕ್ ಮುಕ್ತ ಗಂಗಾವತಿ ಅಭಿಯಾನ, ಅರಣ್ಯ ಪ್ರದೇಶದಲ್ಲಿ ಹೊಂಡಗಳ ನಿರ್ಮಾಣ, ಸ್ಮಾರಕಗಳ ಸ್ವಚ್ಛತಾ ಕಾರ್ಯ, ಸೂರ್ಯನಾಯಕನ ಕೆರೆ ಅಭಿವೃದ್ಧಿ, ಹಲವಾರು ವನಮಹೋತ್ಸವ ಕಾರ್ಯಕ್ರಮಗಳು ಹೀಗೆ ಹತ್ತಾರು ಅಭಿವೃದ್ಧಿಪರ ಕಾರ್ಯಗಳನ್ನು ಮಾಡಲಾಗಿದೆ ಎಂದರು.
ಇವರ ಈ ಸಾಮಾಜಿಕ, ಪರಿಸರಸ್ನೇಹಿ ಕಾಳಜಿಯುತ ಕಾರ್ಯಗಳನ್ನು ಗುರುತಿಸಿದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಪ್ರಶಸ್ತಿ ನೀಡಿ ಸನ್ಮಾನಿಸಿರುವುದಕ್ಕಾಗಿ ಗಂಗಾವತಿ ಚಾರಣ ಬಳಗವು ಡಾ|| ಶಿವಕುಮಾರ್ ಅವರಿಗೆ ಅಭಿನಂದನೆಗಳನ್ನು ತಿಳಿಸಿದೆ.
