ಗಂಗಾವತಿ: ಅಕ್ಟೋಬರ್-೧೨ ರಂದು ನಗರದ ಹೊಸಳ್ಳಿ ರಸ್ತೆಯಲ್ಲಿರುವ ವಿವೇಕ ಭಾರತಿ ಶಾಲೆ ಆವರಣದಲ್ಲಿ ಬಿ.ಎಲ್. ಬುಲ್ಸ್ ಕರಾಟೆ ಸಂಸ್ಥೆಯ ೯ನೇ ವಾರ್ಷಿಕೋತ್ಸವದ ಅಂಗವಾಗಿ ಕರಾಟೆ ವಿದ್ಯಾರ್ಥಿಗಳಿಗೆ ಬೆಲ್ಟ್ ಪರೀಕ್ಷೆ ಮತ್ತು ಮಕ್ಕಳಿಗೆ ಸಸಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಪರಿವೀಕ್ಷಕರಾಗಿ ಅಬ್ದುಲ್ ರಜಾಕ್ ಸಿಂಧನೂರ್ ರವರು ಆಗಮಸಿದ್ದರು ಹಾಗೂ ೫೧ ಕರಾಟೆ ವಿದ್ಯಾರ್ಥಿಗಳು ಬೆಲ್ಟ್ ಪರೀಕ್ಷೆಯಲ್ಲಿ ಭಾಗವಹಿಸಿದ್ದರು ಮತ್ತು ಪ್ರಿಯಾ ಮತ್ತು ಪ್ರಣವಿ ವಿದ್ಯಾರ್ಥಿಗಳು ಡಬಲ್ ಪ್ರಮೋಶನ್ ಪಡೆದುಕೊಂಡರು.
ಕರಾಟೆಯ ಮುಖ್ಯ ತರಬೇತಿರಾದ ಮಂಜುನಾಥ ರಾಠೋಡ್ ಮಾತನಾಡಿ ಮಕ್ಕಳಿಗಿರುವ ಧೈರ್ಯ. ಪ್ರತಿಭೆ. ಸಾಹಸ ಪ್ರದರ್ಶನ ಮತ್ತು ಇನ್ನಿತರ ಐಚ್ಛಿಕ ಕಲಿಕೆ ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಜೊತೆಗೆ ಆತ್ಮ ರಕ್ಷಣಾ ಕಲೆ ಎಲ್ಲರಿಗೂ ಬಹು ಮುಖ್ಯವಾಗಿದೆ ಎಂದು ಹೇಳಿದ್ದರು. ಕರಾಟೆ ತರಬೇತಿದಾರಾದ ಫಯಾಜ್, ಮೀನಾಕ್ಷಿ, ಪ್ರಜ್ವಲ್ ಮತ್ತು ವಿವೇಕ ಭಾರತಿ ಶಾಲೆ ಅಧ್ಯಕ್ಷರಾದ ಅಶೋಕ್ ಮತ್ತು ಕರಾಟೆ ಪಾಲಕರಾದ ಮಂಜುನಾಥ್, ಶ್ರೀಮತಿ ಲಕ್ಷಿö್ಮ, ಶ್ರೀಮತಿ ಶ್ರೀಕುಮಾರಿ, ಡಾ|| ಕಿರಣ್ ಕುಮಾರ್, ಮಂಜುನಾಥ್ ವಕೀಲರು, ಪಲ್ಲವಿ, ವಲಿಭಾಷಾ, ಭೀಮರಾಯ ಮುಂತಾದವರು ಉಪಸ್ಥಿತರಿದ್ದರು.
