ಗಂಗಾವತಿ: ಡಿಸೆಂಬರ್-೩ ಬುಧವಾರ ವಿಶ್ವವಿಕಲಚೇತನರ ದಿನಾಚರಣೆಯನ್ನು ಜಿಲ್ಲಾ ಕೇಂದ್ರವಾದ ಕೊಪ್ಪಳದಲ್ಲಿ ಜಿಲ್ಲೆಯ ಸಂಘ ಸಂಸ್ಥೆಗಳು ಹಾಗೂ ಸರ್ಕಾರದ ಸಂಯುಕ್ತಾಶ್ರಯದಲ್ಲಿ ತಾಲೂಕಾ ಕ್ರೀಡಾಂಗಣದಲ್ಲಿ ನಡೆಯಿತು.
ವಿಶ್ವವಿಕಲಚೇತನರ ದಿನಾಚರಣೆ ನಿಮಿತ್ಯ ವಿವಿಧ ಕ್ರೀಡಾ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸದರಿ ಸ್ಪರ್ಧೆಗಳಲ್ಲಿ ಲಯನ್ಸ್ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯ ೩೦ ವಿದ್ಯಾರ್ಥಿಗಳು ಭಾಗವಹಿಸಿ, ಕಿರಿಯರು ಹಾಗೂ ಹಿರಿಯರ ವಿಭಾಗ (೮-೧೧, ೧೨-೧೫ ಮತ್ತು ೧೬ ರಿಂದ ೨೧ ವರ್ಷ ಹಾಗೂ ೨೧ ವರ್ಷ ಮೇಲ್ಪಟ್ಟವರ ಕ್ರೀಡಾ ಸ್ಪರ್ಧೆಗಳಲಾದ ೨೫ ಮಿ, ೫೦ ಮಿ, ಮತ್ತು ೧೦೦ ಮಿ. ಓಟ, ಬಕೆಟ್‌ನಲ್ಲಿ ಚಂಡು ಹಾಕುವುದು, ಸಾಫ್ಟ್ ಬಾಲ್ ಥ್ರೋ, ಹಾಗೂ ಗುಂಡು ಎಸೆತಗಳಲ್ಲಿ ೧೦ ಪ್ರಥಮ ಹಾಗೂ ೧೦ ದ್ವಿತಿಯ ಬಹುಮಾನ ಪಡೆದು ಸಂಸ್ಥೆ ಹಾಗೂ ಶಾಲೆಗೆ ಕೀರ್ತಿ ತಂದಿದ್ದಾರೆ.
ಲಯನ್ಸ್ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲಾ ಮುಖ್ಯಗುರುಗಳಾದ ಪ್ರಭು ಹಿರೇಮಠ, ಶಾಲಾ ಶಿಕ್ಷಕರು ಮತ್ತು ಶಿಕ್ಷಕೇತರರು ಕ್ರೀಡಾ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಿಕಲಚೇತನರು ಹಾಗೂ ಶಾಲಾ ಸಿಬ್ಬಂದಿ ಎಲ್ಲರ ಸಹಕಾರದಿಂದ ವಿಶ್ವ ವಿಕಲಚೇತನರ ದಿನಾಚರಣೆ ಯಶಸ್ವಿಯಾಗಿದ್ದು, ಲಯನ್ಸ್ ಸಂಸ್ಥೆಯ ಅಧ್ಯಕ್ಷರಾ ಡಾ|| ಜಿ.ಚಂದ್ರಪ್ಪರವರು ಹರ್ಷ ವ್ಯಕ್ತಪಡಿಸಿದ್ದಾರೆ. https://aratt.ai/@vishwaroopa_news_blog
