ಗಂಗಾವತಿ: ಡಿಸೆಂಬರ್-೨೯ ರಂದು ನಗರದ ಟೀಚರ್ಸ್ ಕಾಲೋನಿಯ ವಿ.ಎ ಪಾಟೀಲ್ ನಗರದಲ್ಲಿರುವ ಉಮೇಶ ಬಾಬು ಅವರ ನಿವಾಸಕ್ಕೆ ಇಂದು ಪರಮಪೂಜ್ಯರಾದ ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದ ಕಿರಿಯ ಶ್ರೀಗಳು ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮಿಯವರು ಆಗಮಿಸಿದ ಪ್ರಯುಕ್ತ, ಸ್ಥಳೀಯ ಭಕ್ತರು ಹಾಗೂ ಗಣ್ಯರು ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಈ ಮಹತ್ವದ ಸಂದರ್ಭದಲ್ಲಿ ಚಿತ್ರನಟ ವಿಷ್ಣುತೀರ್ಥ ಜೋಷಿ ಅವರು ಅಭಿನಯಿಸಿರುವ “ನಮ್ಮ ಭಾಷೆ, ನಮ್ಮ ಕನ್ನಡ” ಎಂಬ ಕನ್ನಡ ಚಲನಚಿತ್ರದ ಪೋಸ್ಟರ್‌ನ್ನು ಶ್ರೀಗಳ ಸನ್ನಿಧಿಯಲ್ಲಿ ಪ್ರದರ್ಶಿಸಲಾಯಿತು. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಪ್ರತಿಪಾದಿಸುವ ಈ ಚಿತ್ರದ ಉದ್ದೇಶವನ್ನು ತಿಳಿಸಿ, ಶ್ರೀಗಳ ಆಶೀರ್ವಾದವನ್ನು ಪಡೆದರು.
ಈ ವೇಳೆ ವೀರೇಶ್ ಯಾವಗಲ್, ದೊಡ್ಡನಗೌಡ ಪಾಟೀಲ್, ಮಂಜುನಾಥ್ ಕೋರಿ, ಕೊಳ್ಳಿ ಬಸವರಾಜ, ಶಿವಪ್ಪ ಅರಹಾಳ, ಸಾಗರ ಮುಷ್ಟಿ, ಸಿಂಗನಾಳ ಜಗದೀಶಪ್ಪ & ಕುಟುಂಬದವರು, ಶ್ರೀನಿವಾಸ ಅಂಗಡಿ, ವಿಷ್ಣುತೀರ್ಥ ಜೋಷಿ, ರಾಘವೇಂದ್ರ ತೂನ ಹಾಗೂ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ & ಸಿದ್ಧಗಂಗಾ ಮಠದ ಹಳೆ ವಿದ್ಯಾರ್ಥಿ ಎ.ಕೆ ಮಹೇಶ್ ಕುಮಾರ್ ಇದ್ದರು. https://aratt.ai/@vishwaroopa_news_blog
