ಗಂಗಾವತಿ: ನಗರದ ಹೊ
ಸಳ್ಳಿ ರಸ್ತೆಯಲ್ಲಿರುವ ವಿವೇಕ ಭಾರತಿ ಶಾಲೆಯಲ್ಲಿ ಫೆಬ್ರವರಿ-13 ರಂದು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಕೊಪ್ಪಳ ಜಿಲ್ಲೆ ಇವರ ಸಹಯೋಗದಲ್ಲಿ ಪ್ರೇಮವತಾರಿ ಶ್ರೀ ಸತ್ಯಸಾಯಿ ಬಾಬಾರವರ ಜನ್ಮದಿನದ ಶತವರ್ಷ ಸಂಭ್ರಮಾಚರಣೆ ನಿಮಿತ್ಯ ನಗರಕ್ಕೆ ಆಗಮಿಸಿದ ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥೋತ್ಸವವನ್ನು ಅದ್ದೂರಿಯಾಗಿ ಪೂರ್ಣ ಕುಂಭದೊಂದಿಗೆ ಸ್ವಾಗತ ಕೋರುತ್ತಾ ಬರಮಾಡಿಕೊಳ್ಳಲಾಯಿತು.
ವಿವೇಕ ಭಾರತಿ ಶಾಲೆಯಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಂಡು, ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರಿಗೆ ಪೂಜೆಯನ್ನು ಸಲ್ಲಿಸಿದರು. ವೇದಘೋಷದೊಂದಿಗೆ ಬರಮಾಡಿಕೊಂಡ ಈ ಕಾರ್ಯಕ್ರಮದಲ್ಲಿ ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ನ ಜಿಲ್ಲಾಧ್ಯಕ್ಷರಾದ ವೀರೇಶ್ ಶ್ರೇಷ್ಠಿ ಸ್ವಾಗತಿಸಿದರು. ಉತ್ತರ ಕರ್ನಾಟಕ ಭಾಗದ ರಾಜ್ಯಾಧ್ಯಕ್ಷರಾದ ಪದ್ಮನಾಭ ಪೈ ಮತ್ತು ಉತ್ತರ ಕರ್ನಾಟಕ ಭಾಗದ ಮಹಿಳಾ ಸಯೋಜಕರಾದ ಶ್ರೀಮತಿ ಪ್ರಿಯಾ ಪೈ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರದಲ್ಲಿ ಪದ್ಮಶ್ರೀ ಪುರಸ್ಕೃತರಾದ ಶ್ರೀಮತಿ ಭೀಮವ್ವ ದೊಡ್ಡಬಾಳಪ್ಪ ಸಿಳ್ಳೆಕ್ಯಾತರ್
ಇವರಿಗೆ ಮೈಸೂರು ರಾಜಮನೆತನದ ಡಾ. ಶ್ರೀಮತಿ ಪ್ರಮೋದಾ ದೇವಿ ಇವರ ಸವಿ ನೆನಪಿಗಾಗಿ ಶ್ರೀ ಸತ್ಯ ಸಾಯಿ ಸೇವಾ ಟ್ರಸ್ಟ್ ಸದಸ್ಯರು ಗೌರವ ಸಭರ್ಪಣೆ ಸಲ್ಲಿಸಿದರು. ನಂತರ ಈಶ್ವರಾಂಬ ಪುರಸ್ಕೃತರಾದ ಶ್ರೀಮತಿ ಸರೋಜಾ ಬಾಕಳೆ ಇವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪದ್ಮನಾಭಯ್ಯ ಅವರು ಹಿತನುಡಿ ನುಡಿದರು ಹಾಗೂ ಮಹಾಮಂಗಳಾರತಿ ನೆರವೇರಿಸಿದರು. ಶಾಲಾ ಮುಖ್ಯ ಶಿಕ್ಷಕರಾದ ಶ್ರೀನಿವಾಸ ಕುಲಕರ್ಣಿ ಮತ್ತು ರಂಗಪ್ಪನವರು ಉಪಸ್ಥಿತರಿದ್ದರು. ನಂತರ ಸ್ವಾಮಿಯವರಿಗೆ ಬ್ರಹ್ಮ ಪೀಠದೊಂದಿಗೆ ನೈವೇದ್ಯ ಸಲ್ಲಿಸಿ, ಪ್ರಸಾದ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪ್ರಭಾಕರ, ವೀರಯ್ಯ, ಶ್ರೀಮತಿ ಸೌಮ್ಯ ಪ್ರಭಾಕರ್, ಶ್ರೀಮತಿ ಜನಾದ್ರಿ ರಾಧಾ ರಾಣಿ, ಸುಭಾಷ್ ಚಂದ್ರ ಬೋಸ್, ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಅಶೋಕ್, ಕಾರ್ಯದರ್ಶಿ ಸುಬ್ರಹ್ಮಣ್ಯ ದರೋಜಿ, ಅಶೋಕ್ ರಾಯಕರ್, ಸುಬ್ರಹ್ಮಣ್ಯ ರಾಯ್ಕರ್ ಮತ್ತು ಸಾಯಿಬಾಬಾ ಭಕ್ತರು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
ಶಿಕ್ಷಕರಾದ ನಿಂಗರಾಜ್ ಬಿ ನಿರೂಪಿಸಿದರು ಮತ್ತು ಷಡಕ್ಷರಿ ಯವರು ವಂದಿಸಿದರು. https://aratt.ai/@vishwaroopa_news_blog
