ದನಗಳ ಜಾತ್ರೆ ನಾಟಕ ಸಾಂಸ್ಕೃತಿಕ ಕಾರ್ಯಕ್ರಮ ಸನ್ಮಾನ

ದನಗಳ ಜಾತ್ರೆ ನಾಟಕ ಸಾಂಸ್ಕೃತಿಕ ಕಾರ್ಯಕ್ರಮ ಸನ್ಮಾನ

ಹಾಸನ ತಾಲ್ಲೂಕು ಶಾಂತಿಗ್ರಾಮ ಹೋಬಳಿ ಕೆ. ಹಿರಿಹಳ್ಳಿ ಗ್ರಾಮದಲ್ಲಿ 4ನೇ ವರ್ಷದ ದನಗಳ ಜಾತ್ರೆ ಒಂದು ವಾರ ಯಶಸ್ವಿಯಾಗಿ ನಡೆಯಿತು.

ಈ ಪ್ರಯುಕ್ತ ಕಲಾತಂಡಗಳಿಂದ ಕೋಲಾಟ ಬಯಲಾಟ ಗಾಯನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಭಾನುವಾರ ರಾತ್ರಿ ಮಹಾಶಿವರಾತ್ರಿ ಪ್ರಯುಕ್ತ ಸ್ಥಳೀಯ ಶ್ರೀ ಆಂಜನೇಯ ಹಾಗೂ ಶನೇಶ್ವರ ಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ಕಲಾವಿದರು ಹರುನಳ್ಳಿ ಕುಮಾರ್ ನಿರ್ದೇಶನ ನಲ್ಲಿ ರಾಜ ಸತ್ಯವ್ರತ ನಾಟಕ ಪ್ರದರ್ಶಿಸಿದರು.

ಮಧ್ಯಾಹ್ನ ಹಾಸನ ಜಿಲ್ಲಾ ಕದಂಬ ಸೈನ್ಯ ಕನ್ನಡ ಸಂಘಟನೆಯ ಕಲಾವಿದರು ಭಕ್ತಿಗೀತೆಗಳ ಕಾರ್ಯಕ್ರಮ ನಡೆಸಿಕೊಟ್ಟರು. ಸಾಹಿತಿ ನಾಟಕಕಾರರು ಗೊರೂರು ಅನಂತರಾಜು ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕಲಾವಿದರಾದ ಅಂಕಪುರ ಎ.ಹೆಚ್. ಗಣೀಶ್, ಅರಕಲಗೂಡು ಬೆಕ್ರೀ ರಾಜೇಗೌಡರು, ಮತ್ತು ಗಾಯಕರು ಶ್ರೀಕಾಂತ್ ಅವರನ್ನು ಗ್ರಾಮದ ವತಿಯಿಂದ ಸನ್ಮಾನಿಸಲಾಯಿತು. ಶ್ರೀ ಶನೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಸೇವಾ ಕಾರ್ಯಗಳು ನಡೆದವು. ಗ್ರಾಮಸ್ತರು ಮತ್ತು ದನಗಳ ಜಾತ್ರೆಯಲ್ಲಿ ಭಾಗವಹಿಸಿದ ರೈತರಿಗೆ ಗ್ರಾಮದ ವತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.  https://aratt.ai/@vishwaroopa_news_blog

Leave a Reply

Discover more from VISHWAROOPA NEWS BLOG

Subscribe now to keep reading and get access to the full archive.

Continue reading