ಹಾಸನ: ಹಾಸನಾoಬ ಕಲಾಕ್ಷೇತ್ರದಲ್ಲಿ ನಡೆದ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಇವರು ಆಯೋಜಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಾಸನದ ಮಹಿಳಾ ಚಿತ್ರ ಕಲಾವಿದೆಯರು ರೂಪಿಸಿರುವ ಕಲಾಕೃತಿಗಳು ಪ್ರದರ್ಶನಗೊಂಡವು.
ಪ್ರಕೃತಿಯಿಂದ ಹಿಡಿದು ಮಹಿಳೆಯರ, ಮಕ್ಕಳ ಚಿತ್ರಗಳು ಪ್ರಕೃತಿಯ ಮಡಿಲಲ್ಲಿ ಬುದ್ಧನ ಚಿತ್ರ, ಪ್ರಕೃತಿಯಲ್ಲಿ ಹಾವಿನ ಜೀವನದ ಹಾದಿ, ಹೂಗಳಲ್ಲಿ ತಾವರೆ, ಗುಲಾಬಿ ಚಿತ್ರಕಲೆಗಳು. ಕೃಷ್ಣ ಮತ್ತು ಹಡಗು,
ರಾಧಾಕೃಷ್ಣರ ಪ್ರೀತಿಯ ನೋಟ, ಕ್ರಿಯೇಟಿವ್ ವರ್ಕ್ಸ್. ಮಹಿಳಾ ದೌರ್ಜನ್ಯ ವಿರೋಧಿ ಚಿತ್ರಗಳು ಹೀಗೆ ಹಲವಾರು ವೈವಿಧ್ಯ ಚಿತ್ರಗಳು ಮಹಿಳೆಯರ ಕೈಚಳಕದಲ್ಲಿ ರೂಪು ತೆಳೆದಿವೆ.
ಎರಡು ದಿನಗಳು ಚಿತ್ರಕಲೆಗಳನ್ನು ಪ್ರದರ್ಶನಕ್ಕೆ ಇಟ್ಟು ಅವರ ಪ್ರತಿಭೆಯನ್ನು ಗುರುತಿಸುವ ಪ್ರಯತ್ನ ಶ್ಲಾಘನೀಯ. ಈಗಿನ ಜಗತ್ತಿನಲ್ಲಿ ಎಲ್ಲಾ ಹೆಣ್ಣು ಮಕ್ಕಳು ಸಾಧನೆ ಮಾಡುವಲ್ಲಿ ಯಶಸ್ಸನ್ನು ಕಾಣುತ್ತಿದ್ದಾರೆ. ತಮ್ಮ ಸಂಸಾರದ ನೌಕೆ ಮತ್ತು ಅವರವರ ವೈಯಕ್ತಿಕ ಬದುಕಿನ ಕೆಲಸಗಳನ್ನು ಮಾಡಿಕೊಂಡು ಅವರು ತಮ್ಮ ಸಾಧನೆ ಮಾಡುವಲ್ಲಿ ಗಮನ ವಹಿಸುತ್ತಾ ಬಂದಿದ್ದಾರೆ.
ಹಾಸನ ಜಿಲ್ಲೆ ಕಲೆಯ ಬೀಡು ಎಂದು ಪ್ರಸಿದ್ಧಿ ಪಡೆದಿದೆ. ಚಿತ್ರಕಲಾ ಪ್ರದಶ೯ನದಲ್ಲಿ ಭಾಗವಹಿಸಿದ ಕಲಾವಿದೆಯರೆಂದರೆ ಶೋಭಾ ಆರ್., ಸೌಮ್ಯ ಎಸ್., ಅಶ್ವಿನಿ ಹೆಚ್.ವಿ., ಲತಾ ಎಲ್.ಜಿ., ಹೇಮಲತಾ, ಮಂಜುಳಾ, ಚಂದ್ರಪ್ರಭ, ಅಕ್ಷರ, ಹೇಮಲತಾ ಆರ್., ಹಂಸವೇಣಿ, ವೃತಿಕ ಕುಮಾರಿ, ಸ್ಪೂರ್ತಿ, ಕೋಮಲ, ಪ್ರಕೃತಿ ಜಿ.ಆರ್., ಭೂಮಿಕ, ನಂದಿನಿ.
ಅಚ್ಚುಕಟ್ಟಾಗಿ ಚಿತ್ರಕಲೆ ಪ್ರದರ್ಶಿಸಲು ಮಹಿಳೆಯರಿಗೆ ಬೆಂಬಲ ನೀಡಿ ಮಾರ್ಗದರ್ಶನ ನೀಡಿದವರು ಹಿರಿಯ ಕಲಾವಿದರಾದ ಹಾಸನದ ಬಿ.ಎಸ್. ದೇಸಾಯಿ, ಚನ್ನರಾಯಪಟ್ಟಣದ ಪ್ರಭಾಕರ್ ಎಸ್.ವೈ., ಸುರೇಶ್ ಅತ್ನಿ ಮತ್ತು ಶಿವಕುಮಾರ್ ಆರ್., ಕಲಾವಿದೆಯರಿಗೆ ಸ್ಪೂರ್ತಿ ನೀಡಿ ಅಭಿನಂದಿಸಲು ಬಂದು ಮಾರ್ಗದರ್ಶನ ಮಾಡಿದವರು ಗೊರೂರು ಆನಂತರಾಜು ಸಾಹಿತಿಗಳು, ಹಾಸನ ಮತ್ತು ಕೆ.ಎನ್. ಶಂಕರಪ್ಪ ಕಲ್ಯಾಡಿ
ಕಾರ್ಯದರ್ಶಿಗಳು, ಸಂಸ್ಕಾರ ಭಾರತಿ ಮತ್ತು ಚಿತ್ರಕಲಾವಿದರು.
ಹೊರರಾಜ್ಯ ಮಹಿಳೆಯರ ಸಹಕಾರದಿಂದ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯು ಉತ್ತಮ ಕಾರ್ಯಕ್ರಮವಾಗಿತ್ತು. https://aratt.ai/@vishwaroopa_news_blog
