ಹೆಣ್ಣು ಜಗತ್ತು ಸೃಷ್ಟಿಯ ಪ್ರತೀಕ: ಶ್ರೀಮತಿ ಭಾಗ್ಯ ಈಶ್ವರಶೆಟ್ಟಿ.
ಗಂಗಾವತಿ. ಜನ್ಮದಾತೆಯಿಂದ ಹಿಡಿದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕಾಣಬಹುದಾದ ಹೆಣ್ಣು ಸೃಷ್ಟಿಯ ಪ್ರತಿಕವಾಗಿ ಗೋಚರಿಸುತ್ತಾಳೆ ಎಂದು ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಭಾಗ್ಯ ಈಶ್ವರಶೆಟ್ಟಿ ಹೇಳಿದರು.
ಅವರು ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ವಾಸವಿ ಮಹಿಳಾ ಮಂಡಳಿ ಆಯೋಜಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಹೆಣ್ಣಿನ ಮೇಲೆ ಶೋಷಣೆ ಪ್ರಕರಣಗಳನ್ನು ಗಮನಿಸಿದಾಗ ಭ್ರೂಣ ಹತ್ಯೆಯಿಂದ ಹಿಡಿದು, ಶೋಷಣೆ, ಅತ್ಯಾಚಾರ, ಕೊಲೆ ನಿರಂತರವಾಗಿ ಜರುಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಆರ್ಯವೈಶ್ಯ ಸಮಾಜದ ಅಧ್ಯಕ್ಷ ರೂಪರಾಣಿ ರಾಯ್ಕರ್ ಮಾತನಾಡಿ, ಒಲಿದರೆ ನಾರಿ ಮುನಿದರೆ ಮಾರಿ ಎನ್ನುವಂತೆ ಹೆಣ್ಣು ನಾಲ್ಕು ಗೋಡೆಗಳಿಗೆ ಸೀಮಿತವಾಗದೆ ಸಮಾಜದ ವಿವಿಧ ಕ್ಷೇತ್ರದಲ್ಲಿ ದಿಟ್ಟ ಹೆಜ್ಜೆ ಇರಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಿಎಂ ರಾಧಿಕಾ ಇವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿವಿಧ ಸಂಪ್ರದಾಯಕ ಆಟಗಳು ಹಳೆಯ ನೆನಪುಗಳನ್ನು ಹಂಚಿಕೊಳ್ಳಲಾಯಿತು.
ಸಾಧಕರ ಪರಿಚಯವನ್ನು ವಿನೋದ್ ನೆರವೇರಿಸಿದರು. ಇಲ್ಲೂರ್ ಲಕ್ಷ್ಮಿ ದೇವಿ. ಎಂ ಭಾರತಿ. ಗಾಯಿತ್ರಿ ವಾಸು. ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. https://aratt.ai/@vishwaroopa_news_blog
