ಡಿಸೆಂಬರ್-೧೮ ಬುಧವಾರ ಹೊಸಕೇರಾ ಗ್ರಾಮದಲ್ಲಿ ಉಚಿತ ಆರೋಗ್ಯ ಹಾಗೂ ನೇತ್ರ ತಪಾಸಣಾ ಶಿಬಿರ

ಗಂಗಾವತಿ: ತಾಲೂಕಿನ ಹೊಸಕೇರಾ ಗ್ರಾಮ ಪಂಚಾಯತಿ, ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಘ (ರಿ) ಶ್ರೀರಾಮನಗರ, ವೈದೇಹಿ ಆಸ್ಪತ್ರೆ ಬೆಂಗಳೂರು, ಮಾರುತಿ ಕಣ್ಣಿನ ಮತ್ತು ಹಲ್ಲಿನ ಆಸ್ಪತ್ರೆ ಗಂಗಾವತಿ, ಇವರುಗಳ ಸಹಯೋಗದಲ್ಲಿ ಡಿಸೆಂಬರ್-೧೮ ಬುಧವಾರ ಬೆಳಿಗ್ಗೆ ೧೦:೦೦ ರಿಂದ ಮಧ್ಯಾಹ್ನ ೨:೦೦ ಗಂಟೆಯವರೆಗೆ ಹೊಸಕೇರಾ ಗ್ರಾಮದ ಶ್ರೀ ದುರ್ಗಾದೇವಿ ಕಲ್ಯಾಣ ಮಂಟಪದಲ್ಲಿ ಉಚಿತ ಆರೋಗ್ಯ ಹಾಗೂ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೊಸಕೇರಿ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಸುನಿತಾ ಎಸ್. ಮತ್ತು ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷರಾದ ಕನ್ನಡಪ್ರೇಮಿ ಲಯನ್ ಜಿ. ರಾಮಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಉಚಿತ ಆರೋಗ್ಯ ಶಿಬಿರದಲ್ಲಿ ನುರಿತ ವೈದ್ಯರಿಂದ ವೈದ್ಯಕೀಯ ಚಿಕಿತ್ಸೆ ಪಡೆಯಬಹುದು ಹಾಗೂ ಗಂಭೀರ ಕಾಯಿಲೆಗಳಾದ ಹೃದಯರೋಗ, ಕಣ್ಣಿನ ತಪಾಸಣೆ, ಸಕ್ಕರೆ ಕಾಯಿಲೆ, ಬಿ.ಪಿ., ದಂತಚಿಕಿತ್ಸೆ ಸೇರಿದಂತೆ ಮುಂತಾದ ಕಾಯಿಲೆಗಳಿಗೆ ಸಂಬAಧಿಸಿದAತೆ ಚಿಕಿತ್ಸೆ ನೀಡಲಾಗುವುದು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ: ಮೊಬೈಲ್ ೯೪೪೮೨೨೮೭೩೮ ಸಂಖ್ಯೆಯನ್ನು ಸಂಪರ್ಕಿಸಲು ತಿಳಿಸಲಾಗಿದೆ.

Leave a Reply

Discover more from VISHWAROOPA NEWS BLOG

Subscribe now to keep reading and get access to the full archive.

Continue reading