ಕರ್ನಾಟಕ ರಾಜ್ಯ ಬರಹಗಾರರ ಸಂಘವು ಒಂದು ನೋಂದಾಯಿತ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಯಾಗಿದ್ದು, ಕೇಂದ್ರ ಕಛೇರಿ ಹೂವಿನ ಹಡಗಲಿಯಾಗಿದ್ದು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಘಟಕಗಳನ್ನು, ತಾಲ್ಲೂಕು ಘಟಕಗಳನ್ನು ಹೊಂದಿದೆ. ಅಲ್ಲದೇ ಹೊರ ರಾಜ್ಯದಲ್ಲೂ ತನ್ನ ಘಟಕಗಳನ್ನು ವಿಸ್ತರಿಸಿಕೊಂಡು ಈಗಾಗಲೇ ಹಲವಾರು ಸಾಹಿತ್ಯ ಕಾರ್ಯಕ್ರಮ ನಡೆಸಿಕೊಂಡು ಬಂದಿದೆ.
ಹಾಸನ ಜಿಲ್ಲಾ ಘಟಕವು ಸುಂದರೇಶ ಡಿ ಉಡುವಾರೆ ಅವರ ಅಧ್ಯಕ್ಷತೆಯಲ್ಲಿ ರಾಜ್ಯದಲ್ಲೆ ಅತ್ಯುತ್ತಮವಾದ ನಾಡು ನುಡಿ ಕಲೆ ಸಾಹಿತ್ಯ ಕವಿ ಕಾವ್ಯ ಗಾಯನ ಕಲಾಕುಂಚ ವಿಭಿನ್ನ ಕಾರ್ಯಕ್ರಮಗಳನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹಲವಾ ರಾಜ್ಯ ಹಾಗೂ ಜಿಲ್ಲಾ ಪ್ರಶಸ್ತಿಗಳನ್ನು ನೀಡುತ್ತಾ ಎಲೆ ಮರೆ ಕಾಯಿಯಂತಿರುವ ನೂರಾರು ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಕಲ್ಪಸುತ್ತಾ ಬಂದಿದೆ.
ಪ್ರಸ್ತುತ: ಕರ್ನಾಟಕ ರಾಜ್ಯ ಬರಹಗಾರರ ಸಂಘ ಹಾಸನ ಜಿಲ್ಲಾಘಟಕದ ಅರ ಅರಸೀಕೆರೆ ತಾಲ್ಲೂಕಿನ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ಬಸವರಾಜ್ ರವರನ್ನು ನೇಮಿಸಿ ರಾಜ್ಯಾಧ್ಯಕ್ಷರಾದ ಶ್ರೀ ಮಧುನಾಯ್ಕ ಲಂಬಾಣಿ ಅವರು ಅನುಮೋದನೆ ಮಾಡಿದ್ದಾರೆ.
ಡಾ. ಬಸವರಾಜ್ ರವರು ಸಹಾಯಕ ಪ್ರಾಧ್ಯಾಪಕರಾಗಿ ವಿವೇಕಾನಂದ ಶಿಕ್ಷಣ ಕಾಲೇಜು ಅರಸೀಕೆರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು. ಶಿಕ್ಷಣ ತಜ್ಞರು, ಪರಿಸರವಾದಿಗಳು, ವೈಚಾರಿಕ ಚಿಂತಕರು ಆಗಿರುವ ಡಾ.ಬಸವರಾಜ್ ಕಳೆದ ಹತ್ತು ವರ್ಷಗಳಿಂದ ಅರಸೀಕೆರೆಯಲ್ಲಿ ವಿವಿದ ಕನ್ನಡಪರ ಹಾಗೂ ವೈಚಾರಿಕ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ನಾಡು ನುಡಿ, ಭಾಷೆ ಕನ್ನಡ ತಾಯಿಯ ಸೇವೆಯನ್ನು ನಿಸ್ವಾರ್ಥದಿಂದ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಹಾಸನ ಜಿಲ್ಲೆಯ ಜಿಲ್ಲಾ ಅಧ್ಯಕ್ಷರಾದ ಸುಂದರೇಶ್ ಡಿ.ಉಡುವಾರೆ, ಗೌರವಾಧ್ಯಕ್ಷರಾದ ಶ್ರೀ ವೇಂಕಟೇಶ ಉದಯ ವರದಿ ಪತ್ರಿಕೆಯ ಸಂಪಾದಕರು ಹಾಸನ, ಡಾ. ಲೋಕೇಶ ಉಪನ್ಯಾಸಕರು ಹೊಳೆನರಸೀಪುರ, ಡಾ. ಬರಳು ಶಿವರಾಮ ಚನ್ನರಾಯಪಟ್ಟಣ ತಾಲ್ಲೂಕು. ಡಾ. ಹರೀಶ್ ಉಪನ್ಯಾಸಕರು ಅರಸೀಕೆರೆ. ಡಾ. ಗಿರೀಶ್ ಮರಡಿ ಉಪನ್ಯಾಸಕರು ಹಾಸನ. ಕಾರ್ಯದರ್ಶಿಗಳಾದ ದಿಬ್ಬೂರು ರಮೇಶ, ಸಂಘಟನಾ ಕಾರ್ಯದರ್ಶಿಗಳಾದ ಶಿವಕುಮಾರ ಆರ್. ಅಧ್ಯಕ್ಷರು:ವಿಶ್ವಾಸ್ ಡಿ. ಗೌಡರು ಸಕಲೇಶಪುರತಾಲ್ಲೂಕು. ಪರಮೇಶ್ ಮಡಬಲು. ಗಿರಿಜಾ ನಿರ್ವಾಣಿ. ರಾಣಿ ಚಿರಾಶ್ರಿ. ಬೋರೇಗೌಡರು ಅರಸೀಕೆರೆ. ಬೇಲೂರು. ಪುಟ್ಟೇಗೌಡರು ಅಧ್ಯಕ್ಷರು ಅರಕಲಗೂಡು. ಹಾಗು ಹಾಸನ ಜಿಲ್ಲೆಯ ಎಲ್ಲಾ ತಾಲೂಕಿನ ಅಧ್ಯಕ್ಷರು ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
