ಮಧು ನಾಯ್ಕ್ ಲಂಬಾಣಿ ರಚನೆಯ ಸಿಂಗಾರ ಹಾಡು ಬಿಡುಗಡೆ

ಮಧು ನಾಯ್ಕ್ ಲಂಬಾಣಿ ರಚನೆಯ ಸಿಂಗಾರ ಹಾಡು ಬಿಡುಗಡೆ

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದ ಕರ್ನಾಟಕ ಧ್ವನಿ ಸಂಚಿಕೆ ಒಂದರ ಅಂತಿಮ ಹಂತದ (Final Stage) ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಮಧುನಾಯ್ಕಲಂಬಾಣಿಯವರ ರಚನೆಯ ಸಿಂಗಾರ ಹಾಡನ್ನು ಹೊಸಪೇಟೆಯ ಖ್ಯಾತ ಗಾಯಕಿ ಶ್ರೀಮತಿ ಕಮಲಾ ಕುಲಕರ್ಣಿಯವರು ಬಿಡುಗಡೆಗೊಳಿಸಿದರು. ಈ ಹಾಡಿಗೆ ರಾಗ ಸಂಯೋಜನೆ ಮಾಡಿ ಹಾಡಿದ ಗಾಯಕಿ ಶ್ರೀಮತಿ ಲಲಿತ ಸಿದ್ದಿ ಹಾಗೂ ಈ ಹಾಡಿಗೆ ಸಂಗೀತ ಸಂಯೋಜನೆ ಶ್ರೀನಿವಾಸನಾಯ್ಕ, ಡರೆಕ್ಷನ್ ರವಿಕಿರಣ, ಎಡಿಟಿಂಗ್ ಅಭಿಷೇಕ ಎಮ್., ನೃತ್ಯ ಪಲ್ಲವಿ ಎಲ್. ಇವರದ್ದಾಗಿದೆ.

ರಾಜ್ಯದಾದ್ಯಂತ ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯ ಅಧ್ಯಕ್ಷರಾದ ಮಧುನಾಯ್ಕ ಲಂಬಾಣಿ, ಗೌರವ ಅಧ್ಯಕ್ಷರು ಮತ್ತು ಲೇಖಕರು ಗೊರೂರು ಅನಂತರಾಜು, ಉಪಾಧ್ಯಕ್ಷರು ವಿರುಪಾಕ್ಷಪ್ಪ ಯು., ಕಾರ್ಯಕ್ರಮದ ಅಧ್ಯಕ್ಷತೆ ಕೆ ಎಸ್ ನಾಯ್ಕ ವಹಿಸಿದ್ದರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಸದಸ್ಯರಾದ ಆಶಾರಾಣಿ ಬಾಬುರಾವ್ ನಡೋಣಿ, ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ ಅಧ್ಯಕ್ಷರಾದ ಪಿ.ವಿ ವೆಂಕಟೇಶ್, ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಉದೇದಪ್ಪ, ನಿವೃತ್ತ ಪೋಲಿಸ್ ಅಧಿಕಾರಿಯಾದ ಡಿ.ಎಸ್. ಗಜೇಂದ್ರ ನಾಯ್ಕ, ನಭಿಸಾಬ್ ಕುಷ್ಟಗಿ, ಕರೋಕೆ ಹಾಡುಗಾರಿಕೆ ಸ್ಪರ್ಧೆಯ ತೀರ್ಪುಗಾರರಾದ ಕುಬೇರನಾಯ್ಕ, ದಾವಣಗೆರೆ ಹಾಗೂ ಸ್ವರೂಪ ಭಾರದ್ವಾಜ, ಚಿಕ್ಕಮಗಳೂರುರವರು ಹಾಜರಿದ್ದರು.

https://aratt.ai/@vishwaroopa_news_blog

Leave a Reply

Discover more from VISHWAROOPA NEWS BLOG

Subscribe now to keep reading and get access to the full archive.

Continue reading