ಭಾರತ್ ವಿಕಾಸ್ ಪರಿಷತ್ ನಡೆಸಿದ ಪ್ರಾಂತಮಟ್ಟದ ಕ್ವಿಜ್ ಕಾಂಪಿಟೇಷನ್‌ನಲ್ಲಿ ಗಂಗಾವತಿಯ ಮಹಾನ್ ಕಿಡ್ಸ್ ಶಾಲೆಯ ಮಕ್ಕಳು ಪ್ರಾದೇಶಿಕ ಮಟ್ಟಕ್ಕೆ ಆಯ್ಕೆ.

ಭಾರತ್ ವಿಕಾಸ್ ಪರಿಷತ್ ನಡೆಸಿದ ಪ್ರಾಂತಮಟ್ಟದ ಕ್ವಿಜ್ ಕಾಂಪಿಟೇಷನ್‌ನಲ್ಲಿ ಗಂಗಾವತಿಯ ಮಹಾನ್ ಕಿಡ್ಸ್ ಶಾಲೆಯ ಮಕ್ಕಳು ಪ್ರಾದೇಶಿಕ ಮಟ್ಟಕ್ಕೆ ಆಯ್ಕೆ.

ಗಂಗಾವತಿ: ಅಕ್ಟೋಬರ್-೨೬ ಭಾನುವಾರ ರಾಯಚೂರಿನಲ್ಲಿ ನಡೆದ ಭಾರತ್ ವಿಕಾಸ್ ಪರಿಷತ್ ನಡೆಸಿರುವ ಪ್ರಾಂತ ಮಟ್ಟದ ಕ್ವಿಜ್ ಕಾಂಪಿಟೇಶನ್‌ನಲ್ಲಿ ಮಹಾನ್ ಕಿಡ್ಸ್ ಶಾಲೆಯ ೮ನೇ ತರಗತಿಯ ಮಕ್ಕಳಾದ ಸಾತ್ವಿಕ್ ಮನ್ಸಾಲಿ ಹಾಗೂ ಕಾರ್ತಿಕ್ ಕೊಂಡುಕೊಂದಿ ಇವರು ಕ್ವಿಜ್‌ನಲ್ಲಿ ಭಾಗವಹಿಸಿ ಪ್ರಾದೇಶಿಕ (ರೀಜಿನಲ್) ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಈ ಮಕ್ಕಳಿಗೆ ಶಾಲೆಯ ಅಧ್ಯಕ್ಷರಾದ ನೇತ್ರಾಜ್ ಗುರುವಿನಮಠ ಶುಭ ಹಾರೈಸಿ, ಈ ಮಕ್ಕಳು ಪ್ರಾದೇಶಿಕ (ರೀಜಿನಲ್) ಮಟ್ಟದಲ್ಲಿ ಗೆದ್ದರೆ ರಾಷ್ಟçಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಸವಿತಾ ಗುರುವಿನಮಠ ಮಾತನಾಡಿ ನಮ್ಮ ಶಾಲೆಯ ಮಕ್ಕಳು ಶೈಕ್ಷಣಿಕವಾಗಿ ಮಾತ್ರವಲ್ಲದೆ ಇನ್ನಿತರ ಚಟುವಟಿಕೆಗಳಲ್ಲಿ ಭಾಗವಹಿಸಿ ಜಿಲ್ಲಾಮಟ್ಟ, ವಿಭಾಗಮಟ್ಟ, ರಾಜ್ಯಮಟ್ಟಕ್ಕೆ ಆಯ್ಕೆ ಆಗುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದರು.

https://aratt.ai/@vishwaroopa_news_blog

 

Leave a Reply

Discover more from VISHWAROOPA NEWS BLOG

Subscribe now to keep reading and get access to the full archive.

Continue reading