![]()
ಗಂಗಾವತಿ: ಪ್ರಸ್ತುತ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಈ ಅಧಿವೇಶನಕ್ಕೆ ತೆರಳಿದ ಗಂಗಾವತಿಯ ಹಿರಿಯ ವಕೀಲರಾದ ಸೋಮನಾಥ ಪಟ್ಟಣಶೆಟ್ಟಿಯವರು ಡಿಸೆಂಬರ್-೧೧ ರಂದು ಗಂಗಾವತಿಯ ಅಭಿವೃದ್ಧಿ ಕುರಿತು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಬೆಳಗಾವಿಯ ಐಟಿಸಿ ವೆಲ್‌ಕಮ್ ಹೋಟಲ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಸಭಾಪತಿಗಳಾದ ಯು.ಟಿ. ಖಾದರ್, ಇಂಧನ ಸಚಿವ ಕೆ.ಜೆ ಜಾರ್ಜ್ ಅವರನ್ನು ಭೇಟಿ ಮಾಡಿದರು.
ಮುಖ್ಯಮಂತ್ರಿಗಳು ಹಾಗೂ ಕೆಲವು ಸಚಿವರುಗಳೊಂದಿಗೆ ಉತ್ತಮ ಒಡನಾಟ ಹೊಂದಿರುವ ಸೋಮನಾಥ ಪಟ್ಟಣಶೆಟ್ಟಿಯವರು ವಿಶ್ವವಿಖ್ಯಾತ ಅಂಜನಾದ್ರಿ ಪ್ರಾಧಿಕಾರ ರಚನೆ ಕುರಿತು ಹಾಗೂ ಗಂಗಾವತಿಯಲ್ಲಿ ಹದಗೆಟ್ಟ ರಸ್ತೆಗಳು, ಮೂಲಭೂತ ಸೌಕರ್ಯಗಳ ಕುರಿತು ಈ ಕ್ಷೇತ್ರದ ಸಮಸ್ಯೆಗಳ ಕುರಿತು ಹಾಗೂ ಈ ಭಾಗದ ರೈತರ ಜೀವನಾಡಿಯಾದ ತುಂಗಭದ್ರಾ ಜಲಾಶಯದ ಹೂಳು ತೆಗೆದು, ಗೇಟ್‌ಗಳನ್ನು ಭದ್ರವಾಗಿರಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಪಟ್ಟಣಶೆಟ್ಟಿ ವಕೀಲರು ತಿಳಿಸಿದರು. https://aratt.ai/@vishwaroopa_news_blog
