ಡಿಸೆಂಬರ್-೨೩ ರಂದು ಗಂಗಾವತಿಯಲ್ಲಿ ಜಿಲ್ಲಾ ಮಟ್ಟದ ಮಹಿಳಾ ಕವಿಗೋಷ್ಠಿ ಹಾಗೂ ಕೊಪ್ಪಳ ಜಿಲ್ಲಾ ಲೇಖಕಿಯರ ಸಂಘದ ಉದ್ಘಾಟನಾ ಸಮಾರಂಭ

ಡಿಸೆಂಬರ್-೨೩ ರಂದು ಗಂಗಾವತಿಯಲ್ಲಿ ಜಿಲ್ಲಾ ಮಟ್ಟದ ಮಹಿಳಾ ಕವಿಗೋಷ್ಠಿ ಹಾಗೂ  ಕೊಪ್ಪಳ ಜಿಲ್ಲಾ ಲೇಖಕಿಯರ ಸಂಘದ ಉದ್ಘಾಟನಾ ಸಮಾರಂಭ

ಗಂಗಾವತಿ: ಗಂಗಾವತಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಕೊಪ್ಪಳ ಜಿಲ್ಲಾ ಮಟ್ಟದ ಮಹಿಳಾ ಕವಿಗೋಷ್ಠಿ ಕಾರ್ಯಕ್ರಮವನ್ನು ಇದೇ ಡಿಸೆಂಬರ್-೨೩ ರಂದು ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ನಡೆಸಲಿದ್ದು, ಅದರ ಜೊತೆಗೆ ಕೊಪ್ಪಳ ಜಿಲ್ಲಾ ಲೇಖಕಿಯರ ಸಂಘದ ಉದ್ಘಾಟನೆ ಕಾರ್ಯಕ್ರಮ ಕೂಡಾ ನೆರವೇರಲಿದೆ.

ಈ ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಚಿಸುವ ಕವಿಯತ್ರಿಯರು ಅಶೋಕ ಗುಡಿಕೋಟಿ, ತಾಲೂಕ ಅಧ್ಯಕ್ಷರು, ಚುಟುಕು ಸಾಹಿತ್ಯ ಪರಿಷತ್ ಗಂಗಾವತಿ ಮೊ: ೮೬೬೦೧೬೧೪೩೫, ಸುರೇಶ ಕಲಾಪ್ರಿಯ, ಪ್ರಧಾನ ಕಾರ್ಯದರ್ಶಿಗಳು ಚುಟುಕು ಸಾಹಿತ್ಯ ಪರಿಷತ್ತು ಗಂಗಾವತಿ, ಮೊ: ೯೬೧೧೧೭೦೫೬೦ ಹಾಗೂ ಮಹಾಲಕ್ಷ್ಮಿ ಕೇಸರಹಟ್ಟಿ, ಅಧ್ಯಕ್ಷರು, ಕದಳಿ ಮಹಿಳಾ ವೇದಿಕೆ ಗಂಗಾವತಿ, ಮೊ: ೭೪೮೩೯೭೫೭೧೩ ಗಳಿಗೆ ಸಂಪರ್ಕಿಸಲು ಅಶೋಕ ಗುಡಿಕೋಟಿ ತಿಳಿಸಿದ್ದಾರೆ.

https://aratt.ai/@vishwaroopa_news_blog

Leave a Reply

Discover more from VISHWAROOPA NEWS BLOG

Subscribe now to keep reading and get access to the full archive.

Continue reading