ಕನಕಗಿರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎಸ್.ಎಸ್.ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ಕನಕಗಿರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎಸ್.ಎಸ್.ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ಕನಕಗಿರಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಕನಕಗಿರಿ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲರು ಸಿದ್ಧಲಿಂಗಪ್ಪ ದೇಮಣ್ಣವರ ರವರು” ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯಕ್ಕಾಗಿ ಆಳವಾಗಿ ಅಭ್ಯಾಸದಲ್ಲಿ ನಿರತರಾಗಬೇಕು ಹಾಗೂ ಪರೀಕ್ಷೆಯಲ್ಲಿ ಶ್ರೇಷ್ಠ ಫಲಿತಾಂಶ ಪಡೆಯಬೇಕು ” ಎಂದು ಹೇಳಿದರು

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶೇಖಪ್ಪ ಅರಷಣಗಿ DBRARS ಸಿರವಾರ, ಪ್ರಾಂಶುಪಾಲರು, ಶಿವಪ್ಪ ಹಾರ್ವಾಳ ಪ್ರಾಂಶುಪಾಲರು MDRS ತಾಳಕೇರಿ, ಅರುಣಕುಮಾರಿ ವಸ್ತ್ರದ, ರಾಜೇಶ್ ವಸ್ತ್ರದ ಎಕ್ಸೆಲ್ ಪಬ್ಲಿಕ್ ಸ್ಕೂಲ್ ಕನಕಗಿರಿ, ಶಿವಪುತ್ರಪ್ಪ ಗಳಪೂಜಿ ಉಪನ್ಯಾಸಕರು ಸ.ಪ.ಪೂ.ಕಾಲೇಜು ಕನಕಗಿರಿ ರವರು ಮಾತನಾಡಿ “ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ತಂದು ಶಾಲೆಗೆ ಕೀರ್ತಿ ತರಬೇಕು” ಎಂದು ಹೇಳಿದರು.

ಶಾಲೆಯಲ್ಲಿ ಶಿಕ್ಷಕ ವೃತ್ತಿ ಮಾಡಿದ್ದ ತಿಮ್ಮಣ್ಣ ಗದ್ದಿ ಮತ್ತು ಬಸವರಾಜ ಹುಗ್ಗಿ ರವರಿಗೆ ಸನ್ಮಾನ ಮಾಡಲಾಯಿತು. ವಿಶೇಷವಾಗಿ 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿ, ಕನಕಗಿರಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಕು: ಧೀರಜ್ ರವರಿಗೆ ಕೂಡ ಸನ್ಮಾನಿಸಲಾಯಿತು.

ಶ್ರೀಮತಿ ಶಾಂತಾ H.M ರವರು ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಶ್ರೀಮತಿ ವಂದನಾ ಜೋಶಿ ಯವರು ವಾರ್ಷಿಕ ವರದಿ ವಾಚಿಸಿದರು.
ಮಲ್ಲಿಕಾರ್ಜುನ ಹಂಪಣ್ಣನವರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುದುಕಪ್ಪ ಗಂಗಾವತಿ ರವರು ನಿರೂಪಿಸಿದರು. ವಂದನಾರ್ಪಣೆಯನ್ನು ಶ್ರೀಮತಿ ರುಬಿಯಾ G.T ರವರು ಮಾಡಿದರು.

ಈ ಕಾರ್ಯಕ್ರಮದಲ್ಲಿ ನಿಲಯ ಪಾಲಕರು ರಮೇಶ ಬೂದಿಹಾಳ, ಶಿಕ್ಷಕರಾದ ಸುರೇಶ ಹಿರೇಮಠ, ಮೌಲಾ ಹುಸೇನ್, ವಿಶ್ವನಾಥ ಹಳೇಮನಿ, ಶ್ಯಾಮಣ್ಣ ಗುರಿಕಾರ ಪ್ರ.ದ.ಸ, ವೀರಣ್ಣ ಸ್ಟಾಫ್ ನರ್ಸ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.  https://aratt.ai/@vishwaroopa_news_blog

Leave a Reply

Discover more from VISHWAROOPA NEWS BLOG

Subscribe now to keep reading and get access to the full archive.

Continue reading