ರಾಜವಂಶಸ್ಥೆ ಶ್ರೀಮತಿ ಲಲಿತಾರಾಣಿಯವರಿಂದ ಶ್ರೀಕೃಷ್ಣದೇವರಾಯ ಜಯಂತಿ ಆಚರಣೆ.

ರಾಜವಂಶಸ್ಥೆ ಶ್ರೀಮತಿ ಲಲಿತಾರಾಣಿಯವರಿಂದ ಶ್ರೀಕೃಷ್ಣದೇವರಾಯ ಜಯಂತಿ ಆಚರಣೆ.

ಗಂಗಾವತಿ: ರಾಜಮಾತೆ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು ಅಮ್ಮನವರ ನೇತೃತ್ವದಲ್ಲಿ ವಿಜಯನಗರದ ಸಾಮ್ರಾಜ್ಯದ ಚಕ್ರವರ್ತಿ ರಾಜಾ ಶ್ರೀಕೃಷ್ಣದೇವರಾಯರ ಜಯಂತಿಯನ್ನು ಶ್ರೀಕೃಷ್ಣದೇವರಾಯರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಪೂಜೆ ಸಲ್ಲಿಸಿ, ಸಿಹಿ ತಿಂಡಿ ವಿತರಿಸಿ ಅದ್ಧೂರಿಯಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ರಾಜಮಾತೆ ಅಮ್ಮನವರು ಅಖಂಡ ಹಿಂದೂ ಸಾಮ್ರಾಜ್ಯವನ್ನು ಸಂರಕ್ಷಿಸಿ ಕೃಷಿ, ಸಾಹಿತ್ಯ, ವಿದ್ವಾಂಸರು, ಕವಿಗಳು ಕೆರೆ-ಕಟ್ಟೆಗಳನ್ನು ನಿರ್ಮಿಸಿ ಅತ್ಯಂತ ಸುಂದರ ಮತ್ತು ಸಮೃದ್ಧಿಯ ರಾಜ್ಯವನ್ನು ನಿರ್ಮಾಣ ಮಾಡಿದ ಕೀರ್ತಿ ಅವರಿಗೆ ಸಲ್ಲಿದ್ದು, ನಾವು ಅಂತವರ ವಂಶಿಕರಾಗಿರುವುದು ನಮ್ಮ ಪೂರ್ವಜನ್ಮದ ಪುಣ್ಯ. ಅವರ ಆದರ್ಶಗಳನ್ನು ಸರ್ವರೂ ಪಾಲಿಸುವಂತಾಗಲಿ ಎಂದು ತಿಳಿಸಿದರು.

ಚಿತ್ರನಟ ವಿಷ್ಣುತೀರ್ಥ ಜೋಶಿಯವರು ಮಾತನಾಡಿ, ಫೆಬ್ರವರಿ-೧೨ ರಂದು ಪ್ರಪಂಚದಾಧ್ಯಂತ ಬಿಡುಗಡೆಗೊಳ್ಳಲಿರುವ ಕನ್ನಡ ಚಿತ್ರ “ಸಂಕೀರ್ತನ” ಚಿತ್ರದಲ್ಲಿ ಶ್ರೀಕೃಷ್ಣದೇವರಾಯರ ಪಾತ್ರ ನಿರ್ವಹಿಸಿರುವದು ನನ್ನ ಪುಣ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹುಲಿಗೆಮ್ಮ ಹೊನ್ನಪ್ಪ ನಾಯಕ, ಉಪಾಧ್ಯಕ್ಷರಾದ ಪೂರ್ಣಿಮಾ, ಪಿಡಿಒ ಮಲ್ಲಿಕಾರ್ಜುನ್ ಕಡಿವಾಳ, ಸದಸ್ಯರು ಹಾಗೂ ಮಾಜಿ ಅಧ್ಯಕ್ಷರಾದ ತಿಮ್ಮಪ್ಪ ನಾಯಕ ಬಾಳೆಕಾಯಿ, ವಿಎಸ್‌ಎಸ್‌ಎನ್ ಅಧ್ಯಕ್ಷರಾದ ವೆಂಕಟೇಶ್, ಸದಸ್ಯರಾದ ನಾಗಪ್ಪ, ಮಾಜಿ ಅಧ್ಯಕ್ಷರಾದ ತಿರುಕಪ್ಪ, ಯುವರಾಜ್, ರಮೇಶ್, ಚಂದ್ರಪ್ಪ, ರಾಘವೇಂದ್ರ, ಶ್ರವಣಕುಮಾರ ರಾಯಕರ್ ಉಪಸ್ಥಿತರಿದ್ದರು.   https://aratt.ai/@vishwaroopa_news_blog

Leave a Reply

Discover more from VISHWAROOPA NEWS BLOG

Subscribe now to keep reading and get access to the full archive.

Continue reading