ಗಂಗಾವತಿಯಲ್ಲಿ ಆದ್ವಿಕ್ ಸಂಸ್ಕಾರ ಭಾರತಿ ಕಂಪ್ಯೂಟರ್ ಶಿಕ್ಷಣ ಕೇಂದ್ರ ಹಾಗೂ ಸಾತ್ವಿಕ್ ಟ್ಯುಟೋರಿಯಲ್ಸ್ ಉದ್ಘಾಟನಾ ಸಮಾರಂಭದಲ್ಲಿ ಗಣ್ಯರು ಮತ್ತು ವಿದ್ಯಾರ್ಥಿಗಳು

ಗಂಗಾವತಿ: ಗಂಗಾವತಿಯಲ್ಲಿ ಸಾತ್ವಿಕ್ ಟ್ಯುಟೋರಿಯಲ್ಸ್ ಉದ್ಘಾಟನೆ, ಆಧುನಿಕ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಕೌಶಲ್ಯ, ಆತ್ಮವಿಶ್ವಾಸ ಹಾಗೂ ಉತ್ತಮ ಸಂಸ್ಕಾರ ಬೆಳೆಸುವ ಉದ್ದೇಶದಿಂದ ನಗರದ ಆದ್ವಿಕ್ ಸಂಸ್ಕಾರ ಭಾರತಿ ಕಂಪ್ಯೂಟರ್ ಶಿಕ್ಷಣ ಕೇಂದ್ರ ಹಾಗೂ ಸಂಸ್ಥೆಯ ಮತ್ತೊಂದು ಅಂಗ ಸಂಸ್ಥೆಯಾದ ಸಾತ್ವಿಕ್ ಟ್ಯುಟೋರಿಯಲ್ಸ್. ಸಮಾರಂಭ ಅ.25ರಂದು ಬೆಳಗ್ಗೆ 10.30ಕ್ಕೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಪಂದನ ಸೌಹಾರ್ದ ಸಹಕಾರಿ ಬ್ಯಾಂಕ್, ಗಂಗಾವತಿಯ ಅಧ್ಯಕ್ಷರಾದ ನಾಗಲಿಂಗಪ್ಪ ಪತ್ತಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಕಲ್ಪ ಕಾಲೇಜು ಗಂಗಾವತಿಯ ಪ್ರಾಂಶುಪಾಲರಾದ ಮಂಜುನಾಥ್ ಎಂ., ವಿಭಾಗ ಪ್ರಚಾರಕರಾದ ವಿಠ್ಠಲ್ ಜಿ., ಉದ್ಯಮಿ ರಾಮಕೃಷ್ಣ ಕೆ. ಹಾಗೂ ಹಿರಿಯರಾದ ಜಕಣಾಚಾರಿ ಕಮ್ಮಾರ್ ಭಾಗವಹಿಸಿದ್ದರು. ಸಂಸ್ಥೆಯ ಸಂಸ್ಥಾಪಕರಾದ ಶಶಿಧರ ಕಮ್ಮಾರ್ ಉಪಸ್ಥಿತರಿದ್ದರು.
ಶಿಕ್ಷಣದೊಂದಿಗೆ ಕೌಶಲ್ಯ ಬೆಳೆಸಿಕೊಳ್ಳಬೇಕು: ಮಂಜುನಾಥ್ ಎಂ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಕಲ್ಪ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ್ ಎಂ. ಅವರು, ವಿದ್ಯಾರ್ಥಿ ಜೀವನದಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣದ ಜೊತೆಗೆ ವಿವಿಧ ಕ್ಷೇತ್ರಗಳಿಗೆ ಅಗತ್ಯವಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯವು ಉದ್ಯೋಗಾವಕಾಶಗಳನ್ನು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕಂಪ್ಯೂಟರ್ ಜ್ಞಾನ ಹಾಗೂ ಇತರ ವೃತ್ತಿಪರ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಮೂಲಕ ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆತ್ಮವಿಶ್ವಾಸದಿಂದ ಸವಾಲು ಎದುರಿಸಿ: ನಾಗಲಿಂಗಪ್ಪ ಪತ್ತಾರ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಗಲಿಂಗಪ್ಪ ಪತ್ತಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಪ್ರಮಾಣಪತ್ರಗಳ ಜೊತೆಗೆ ಆತ್ಮಸ್ಥೈರ್ಯವೂ ಅತ್ಯಗತ್ಯ ಎಂದು ಹೇಳಿದರು.
ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಆತ್ಮವಿಶ್ವಾಸ ಹಾಗೂ ನಿರಂತರ ಪ್ರಯತ್ನ ಅಗತ್ಯ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟುಕೊಂಡು ಮುನ್ನಡೆಯಬೇಕು. ಶಿಕ್ಷಣದ ಮೂಲಕ ಜ್ಞಾನವನ್ನು ಪಡೆದುಕೊಂಡು, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಅಕ್ಷರ ಜ್ಞಾನಕ್ಕಿಂತ ಸಂಸ್ಕಾರವೂ ಮುಖ್ಯ: ವಿಠ್ಠಲ್ ಜಿ.
ವಿಭಾಗ ಪ್ರಚಾರಕ ವಿಠ್ಠಲ್ ಜಿ. ಮಾತನಾಡಿ, “ಅಕ್ಷರ ಜ್ಞಾನ ಕಡಿಮೆಯಾಗಬಹುದು, ಆದರೆ ಸಂಸ್ಕಾರ ಕಡಿಮೆಯಾಗಬಾರದು” ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಬಾಲ್ಯದಿಂದಲೇ ಮಕ್ಕಳಿಗೆ ಉತ್ತಮ ವಿಚಾರಗಳು, ಮೌಲ್ಯಗಳು ಮತ್ತು ಸಂಸ್ಕಾರಗಳನ್ನು ತಿಳಿಸಿಕೊಟ್ಟರೆ ಅವರು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಿ ರೂಪುಗೊಳ್ಳಲು ಸಾಧ್ಯ. ಶಿಕ್ಷಣದ ಉದ್ದೇಶ ಕೇವಲ ಉದ್ಯೋಗ ಪಡೆಯುವುದಲ್ಲ; ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದೂ ಆಗಿದೆ ಎಂದು ತಿಳಿಸಿದರು.
ಕಂಪ್ಯೂಟರ್ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ
ಈ ಕಂಪ್ಯೂಟರ್ ಶಿಕ್ಷಣ ಕೇಂದ್ರವು 2025ರ ಮಾರ್ಚ್ ತಿಂಗಳಲ್ಲಿ ಆರಂಭಗೊಂಡಿದ್ದು, ಒಂದೂವರೆ ವರ್ಷ ಪೂರ್ಣಗೊಳಿಸಿದೆ. ಈ ಅವಧಿಯಲ್ಲಿ ಆದ್ವಿಕ್ ಸಂಸ್ಕಾರ ಭಾರತಿ ಕಂಪ್ಯೂಟರ್ ಶಿಕ್ಷಣ ಕೇಂದ್ರದಲ್ಲಿ ಕಂಪ್ಯೂಟರ್ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸುವ ಕಾರ್ಯಕ್ರಮವೂ ನಡೆಯಿತು.
ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ಪಡೆದ ಕಂಪ್ಯೂಟರ್ ತರಬೇತಿ, ಶೈಕ್ಷಣಿಕ ಚಟುವಟಿಕೆಗಳು ಹಾಗೂ ಸಂಸ್ಥೆಯ ಕಾರ್ಯವೈಖರಿಯ ಕುರಿತು ತಮ್ಮ ಅನುಭವ ಮತ್ತು ಮೆಚ್ಚುಗೆಯನ್ನು ಹಂಚಿಕೊಂಡರು.
ಗಂಗಾವತಿಯಲ್ಲಿ ಸಾತ್ವಿಕ್ ಟ್ಯುಟೋರಿಯಲ್ಸ್ ಉದ್ಘಾಟನೆ ಕಾರ್ಯಕ್ರಮ
ಆದ್ವಿಕ್ ಸಂಸ್ಕಾರ ಭಾರತಿ ಕಂಪ್ಯೂಟರ್ ಶಿಕ್ಷಣ ಕೇಂದ್ರದ ಮತ್ತೊಂದು ಅಂಗ ಸಂಸ್ಥೆಯಾಗಿ ಗಂಗಾವತಿ ನಗರದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ‘ಸಾತ್ವಿಕ್ ಟ್ಯುಟೋರಿಯಲ್ಸ್’ ಅನ್ನು ಆರಂಭಿಸಲಾಯಿತು.
ಪಠ್ಯಕ್ರಮದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರ, ಶಿಸ್ತು, ಸುವಿಚಾರ ಹಾಗೂ ಜವಾಬ್ದಾರಿಯ ಮನೋಭಾವ ಬೆಳೆಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ ಎಂದು ತಿಳಿಸಲಾಯಿತು.
ಗಂಗಾವತಿಯಲ್ಲಿ ಸಾತ್ವಿಕ್ ಟ್ಯುಟೋರಿಯಲ್ಸ್ ಉದ್ಘಾಟನೆ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಉದ್ಯೋಗ ಸಂದರ್ಶನ
ಕಾರ್ಯಕ್ರಮದ ಅಂಗವಾಗಿ ಖಾಸಗಿ ಕಂಪನಿಗಳ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಉದ್ಯೋಗ ಸಂದರ್ಶನವನ್ನೂ ಆಯೋಜಿಸಲಾಗಿತ್ತು. ವಿವಿಧ ಪದವೀಧರರು ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಿ ಲಭ್ಯವಿದ್ದ ಉದ್ಯೋಗಾವಕಾಶಗಳ ಸದುಪಯೋಗ ಪಡೆದುಕೊಂಡರು.
ವಿದ್ಯಾರ್ಥಿಗಳಾದ ವಿದ್ಯಾವತಿ ಕುಲಕರ್ಣಿ ಹಾಗೂ ಸಂತೋಷ್ ಸೊಂಡೂರ್ ಅವರು ಸಂಸ್ಥೆಯ ಮೂಲ ಉದ್ದೇಶದ ಕುರಿತು ಮಾತನಾಡಿ, ಆಧುನಿಕ ಶಿಕ್ಷಣದೊಂದಿಗೆ ಪಠ್ಯಕ್ರಮ, ಕೌಶಲ್ಯ ಹಾಗೂ ಸಂಸ್ಕಾರವನ್ನು ನೀಡುತ್ತಿರುವ ಸಂಸ್ಥೆಯ ಪ್ರಯತ್ನವನ್ನು ಮೆಚ್ಚಿಕೊಂಡರು.
ಗಂಗಾವತಿಯಲ್ಲಿ ಸಾತ್ವಿಕ್ ಟ್ಯುಟೋರಿಯಲ್ಸ್ ಉದ್ಘಾಟನೆ ಕಾರ್ಯಕ್ರಮ
ಸಹ ಶಿಕ್ಷಕರಾದ ಮಾದಿನಾಳಪ್ಪ ಕಾರ್ಯಕ್ರಮದ ನಿರೂಪಣೆ ಮಾಡಿದರು. ದುರ್ಗೇಶ್ ಹಾಗೂ ಮಲ್ಲೇಶ್ ಸ್ವಾಗತ ಭಾಷಣ ಹಾಗೂ ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕಂಪ್ಯೂಟರ್ ಶಿಕ್ಷಣ ಪಡೆದ ವಿದ್ಯಾರ್ಥಿಗಳಾದ ಲಕ್ಷ್ಮಿ, ರೇಖಾ ಉಪ್ಪಾರ್, ಬಸನಗೌಡ, ಮಧುಶ್ರೀ, ಕವಿತಾ, ಕಾವೇರಿ, ಫರ್ಜಾನ, ಮುಬಿನ ಹಾಗೂ ಮಹಮ್ಮದ್ ರಿಹಾನ್ ಸೇರಿದಂತೆ ಹಲವು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸರೋಜಾ ಜಕಣಾಚಾರ್ಯ, ಕಮಲಮ್ಮ ಪ್ರಭಾಕರ್ ಆಚಾರ್, ಉಮಾಶ್ರೀ, ವಿದ್ಯಾವತಿ, ಶ್ರೀನಿವಾಸ್, ಬಸನಗೌಡ, ರಾಘವೇಂದ್ರ, ಮೌನೇಶ್ ಕಮ್ಮಾರ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಿಕ್ಷಣದ ಜೊತೆಗೆ ಕೌಶಲ್ಯ ಹಾಗೂ ಸಂಸ್ಕಾರಕ್ಕೆ ಆದ್ಯತೆ ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಆದ್ವಿಕ್ ಸಂಸ್ಕಾರ ಭಾರತಿ ಕಂಪ್ಯೂಟರ್ ಶಿಕ್ಷಣ ಕೇಂದ್ರ ಹಾಗೂ ಸಾತ್ವಿಕ್ ಟ್ಯುಟೋರಿಯಲ್ಸ್ ಸಂಸ್ಥೆಗಳ ಪ್ರಯತ್ನಕ್ಕೆ ಕಾರ್ಯಕ್ರಮದಲ್ಲಿ ಮೆಚ್ಚುಗೆ https://aratt.ai/@vishwaroopa_news_blog ವ್ಯಕ್ತವಾಯಿತು.




