ನವೆಂಬರ್ 27, 2026

ಶ್ರೀ ಶಾರದಾ ಶರನ್ನವರಾತ್ರಿ ಮಹೋತ್ಸವ

ಗಂಗಾವತಿ: ದೇಶದ ಸುಭೀಕ್ಷತೆ, ಸಮೃದ್ಧ ಮಳೆ ಹಾಗೂ ರೈತರ ಬದುಕು ಹಸನಾಗಲಿ ಎಂಬ ಮಹಾಸಂಕಲ್ಪದೊಂದಿಗೆ ಗಂಗಾವತಿಯಲ್ಲಿ ಶ್ರೀ ಶಾರದಾ ಶರನ್ನವರಾತ್ರಿ ಮಹೋತ್ಸವ ವನ್ನು ಭಕ್ತಿಭಾವದಿಂದ ಆಚರಿಸಲಾಗುತ್ತಿದೆ ಎಂದು ಶ್ರೀ ಶೃಂಗೇರಿ ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.

 ಅವರು ನಗರದ  ಶಾರದಾ ನಗರದ ಶೃಂಗೇರಿ ಶಂಕರ ಮಠದ ಶಾರದಾ ದೇಗುಲದಲ್ಲಿ ಭಾನುವಾರ ನಡೆದ ಶರನ್ನವರಾತ್ರಿ ಮಹೋತ್ಸವದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸಕಾಲಕ್ಕೆ ಮಳೆಯಾಗದೆ ಬರಗಾಲದ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಉತ್ತಮ ಮಳೆಯಾಗಿ, ಕೃಷಿ ಸಮೃದ್ಧಿಗೊಂಡು ರೈತರ ಬದುಕು ಹಸನಾಗಬೇಕು ಹಾಗೂ ದೇಶ ಸುಭೀಕ್ಷವಾಗಬೇಕು ಎಂಬ ಸಂಕಲ್ಪದೊಂದಿಗೆ ಜಗನ್ಮಾತೆ ಶ್ರೀ ಶಾರದಾಂಬೆಯ ಆರಾಧನೆ ನಡೆಸಲಾಗುತ್ತಿದೆ ಎಂದರು.

1.41 ಲಕ್ಷ ಲಲಿತಾ ಸಹಸ್ರನಾಮ

ಗಂಗಾವತಿಯ ಶ್ರೀ ಶಾರದಾ ದೇಗುಲದಲ್ಲಿ ಶ್ರೀ ಶಾರದಾ ಶರನ್ನವರಾತ್ರಿ ಮಹೋತ್ಸವ
ಗಂಗಾವತಿಯ ಶ್ರೀ ಶಾರದಾ ದೇಗುಲದಲ್ಲಿ ನಡೆದ ಶ್ರೀ ಶಾರದಾ ಶರನ್ನವರಾತ್ರಿ ಮಹೋತ್ಸವ

ಪಾರಾಯಣ

ಶ್ರೀ ಶಾರದಾ ಶರನ್ನವರಾತ್ರಿ ಮಹೋತ್ಸವದ ಮೊದಲ ದಿನವೇ ಅಪಾರ ಸಂಖ್ಯೆಯಲ್ಲಿ ಮಹಿಳಾ ಭಕ್ತರು ಪಾಲ್ಗೊಂಡು 1,41,000 ಲಲಿತಾ ಸಹಸ್ರನಾಮ ಪಾರಾಯಣ ನೆರವೇರಿಸಿದರು. ಜೊತೆಗೆ 1,71,000 ಕುಂಕುಮಾರ್ಚನೆ ನಡೆಸಿರುವುದು ಈ ಬಾರಿಯ ಮಹೋತ್ಸವದ ಪ್ರಮುಖ ವಿಶೇಷತೆಯಾಗಿದೆ.

ವಿವಿಧ ಭಜನಾ ಮಂಡಳಿಗಳು ಹಾಗೂ ಸಮಾಜಗಳ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ಧಾರ್ಮಿಕ ಕಾರ್ಯಕ್ರಮಗಳಿಗೆ ಮೆರುಗು ತಂದರು. ಭಕ್ತರು ಶ್ರದ್ಧಾಭಕ್ತಿಯಿಂದ ಶ್ರೀ ಶಾರದಾಂಬೆಯ ಆರಾಧನೆಯಲ್ಲಿ  ಭಾಗವಹಿಸಿದರು.https://aratt.ai/@vishwaroopa_news_blog

ಶಾರದಾಂಬೆ ಆರಾಧನೆಯೊಂದಿಗೆ ದೇಶದ ಸಮೃದ್ಧಿಗಾಗಿ ಪ್ರಾರ್ಥನೆ

ಶ್ರೀ ಶಾರದಾ ಶರನ್ನವರಾತ್ರಿ ಮಹೋತ್ಸವಮಳೆ ಸಮೃದ್ಧಿಯಾಗಿ ಸುರಿದು ಕೃಷಿ ಚಟುವಟಿಕೆಗಳು ಉತ್ತಮಗೊಂಡು ರೈತರಿಗೆ ಅನುಕೂಲವಾಗಲಿ. ದೇಶದಲ್ಲಿ ಸುಭೀಕ್ಷತೆ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂಬ ಆಶಯದೊಂದಿಗೆ ಶರನ್ನವರಾತ್ರಿ ಮಹೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ನಾರಾಯಣರಾವ್ ವೈದ್ಯ ತಿಳಿಸಿದರು.

ಧಾರ್ಮಿಕ ಕಾರ್ಯಕ್ರಮಗಳಿಗೆ ದೇವಸ್ಥಾನದ ಪ್ರಧಾನ ಅರ್ಚಕ ಕುಮಾರ ಭಟ್, ಧಾರವಾಡದ ಚೈತನ್ಯ ಹಾಗೂ ಸ್ಥಳೀಯ ರಾಘವೇಂದ್ರ ಭಟ್ ನೇತೃತ್ವ ವಹಿಸಿ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಜಗನ್ನಾಥ ಅಳವಂಡಿಕರ್, ವಿಶ್ವನಾಥ ಅಳವಂಡಿ, ಪ್ರಶಾಂತ್ ಜೋಶಿ, ಬಾಲಕೃಷ್ಣ ದೇಸಾಯಿ, ರಾಘವೇಂದ್ರ ಜೋಶಿ, ಶ್ರೀಧರ ಅಳವಂಡಿ, ಶೇಷಗಿರಿ ಪದಕಿ, ದತ್ತಣ್ಣ ಹೊಸಳ್ಳಿ, ಶಂಕರ ಹೊಸಳ್ಳಿ, ಸುದರ್ಶನ ವೈದ್ಯ, ಶ್ರೀನಿವಾಸ ಕರಮುಡಿ, ಗಾಯತ್ರಿ ಅಳವಂಡಿಕರ್, ಶ್ರೀದೇವಿ ಪುರಾಣಿಕ, ರಮಾ ದರೋಜಿ, ನೀಲಾ ಶಿವಕುಮಾರ್, ಗೀತಾ ಪಾಟೀಲ್, ದೇವಿಕಾ ಹಾಗೂ ರೇಖಾ ಶರಣಬಸವ ಅಂಗಡಿ ಸೇರಿದಂತೆ ವಿವಿಧ ಭಜನಾ ಮಂಡಳಿಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಶ್ರೀ ಶಾರದಾ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಮುಂದಿನ ದಿನಗಳಲ್ಲಿಯೂ ವಿವಿಧ ಧಾರ್ಮಿಕ ಹಾಗೂ ಭಕ್ತಿಪೂರ್ವಕ ಕಾರ್ಯಕ್ರಮಗಳು ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

Leave a Reply

Optimized by Optimole

Discover more from VISHWAROOPA NEWS BLOG

Subscribe now to keep reading and get access to the full archive.

Continue reading