ನವೆಂಬರ್ 26, 2026

ಗಂಗಾವತಿ ಶಂಕರ ಮಠದಲ್ಲಿ ನವಚಂಡಿ ಹವನ ಮತ್ತು ಕುಮಾರಿಕಾ ಪೂಜೆ
ಗಂಗಾವತಿಯ ಶ್ರೀ ಶಂಕರ ಮಠದಲ್ಲಿ ಶಾರದಾ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ನಡೆದ ನವಚಂಡಿ ಹವನ ಹಾಗೂ ಕುಮಾರಿಕಾ ಪೂಜೆಶಂಕರ ಮಠದಲ್ಲಿ ನವಚಂಡಿ ಹವನ

ಗಂಗಾವತಿ: ಭಾವೈಕ್ಯತೆಗೆ ಹೆಸರಾದ ಭತ್ತದ ನಾಡು ಗಂಗಾವತಿ ನಗರವು ಶ್ರೀ ದುರ್ಗಾದೇವಿ, ಶ್ರೀ ಉದ್ಭವ ಲಕ್ಷ್ಮಿ ಹಾಗೂ ಶ್ರೀ ಶಾರದಾಂಬೆಯ ತ್ರಿಶಕ್ತಿ ಪೀಠಗಳಿಂದ ಧಾರ್ಮಿಕವಾಗಿ ಸಮೃದ್ಧಗೊಂಡಿದೆ ಎಂದು ಶೃಂಗೇರಿ ಶಾರದಾ ಪೀಠದ ಗಂಗಾವತಿ ಶಾಖಾಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.

ನಗರದ ಶ್ರೀ ಶಂಕರ ಮಠದಲ್ಲಿ ಭಾನುವಾರ ಶ್ರೀ ಶಾರದಾ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ನವಚಂಡಿ ಹವನ ಹಾಗೂ ಕುಮಾರಿಕಾ ಪೂಜೆ ಧಾರ್ಮಿಕ ಸಮಾರಂಭವು ಭಕ್ತಿಭಾವದಿಂದ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಾರಾಯಣರಾವ್ ವೈದ್ಯ ಅವರು, ದೇವಿಯ ಆರಾಧನೆ ಹಾಗೂ ಧಾರ್ಮಿಕ ಆಚರಣೆಗಳು ಭಾರತೀಯ ಸಂಸ್ಕೃತಿ ಮತ್ತು ಸನಾತನ ಪರಂಪರೆಯ ವೈಭವವನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು.

ಮಹಾಕಾಳಿ, ಮಹಾಲಕ್ಷ್ಮಿ ಹಾಗೂ ಮಹಾಸರಸ್ವತಿಯ ಸ್ವರೂಪಗಳಾದ ದೇವಿಯ ಆರಾಧನೆಗೆ ಸನಾತನ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಸೂರ್ಯ ಮತ್ತು ಚಂದ್ರರು ಇರುವವರೆಗೂ ಸನಾತನ ಪರಂಪರೆಗೆ ಅಂತ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಕುಮಾರಿಕಾ ಪೂಜೆ ಭಾರತೀಯ ಸಂಸ್ಕೃತಿಯ ವಿಶಿಷ್ಟ ಧಾರ್ಮಿಕ ಆಚರಣೆಯಾಗಿದ್ದು, ಹತ್ತು ವರ್ಷದೊಳಗಿನ ಬಾಲಕಿಯರನ್ನು ಸಾಕ್ಷಾತ್ ನವದುರ್ಗೆಯರ ಸ್ವರೂಪವೆಂದು ಭಾವಿಸಿ ಪೂಜಿಸಲಾಗುತ್ತದೆ. ಇಂತಹ ಆಚರಣೆಗಳು ನಮ್ಮ ಭವ್ಯ ಸಂಸ್ಕೃತಿ, ಧಾರ್ಮಿಕ ನಂಬಿಕೆಗಳು ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ನಾರಾಯಣರಾವ್ ವೈದ್ಯ ತಿಳಿಸಿದರು.

ಶಂಕರ ಮಠದಲ್ಲಿ ನವಚಂಡಿ ಹವನ

ನವಚಂಡಿ ಹವನದ ಮಹಾಸಂಕಲ್ಪವನ್ನು ವಿದ್ಯಾತೀರ್ಥ ನಾರ್ವೆ ಹಾಗೂ ಶ್ರೀಕಾಂತ್ ಪುರಾಣಿಕ್ ದಂಪತಿಗಳು ನೆರವೇರಿಸಿದರು. ಸುನಿಲ್ ವೈದ್ಯ, ಕಿರಣ್ ಭಟ್ ಜೋಶಿ ಹಾಗೂ ಆದಿತ್ಯ ಹೆಬ್ಬಳ್ಳಿ ಅವರು ಧಾರ್ಮಿಕ ವಿಧಿವಿಧಾನಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಡಿ.ವೈ.ಎಸ್‌.ಪಿ. ಜಾಯಪ್ಪ ನ್ಯಾಮಗೌಡ ದಂಪತಿಗಳು, ಕಾಶಿನಾಥ ಭಟ್, ಜಗನ್ನಾಥ ಅಳವಂಡಿಕರ್, ಶೇಷಗಿರಿ ಗಡಾದ್, ವೇಣು ಅಳವಂಡಿ, ರಾಘವೇಂದ್ರ, ಚೈತನ್ಯ ಕುಮಾರ್ ಭಟ್, ದತ್ತಾತ್ರೇಯ, ಸುದರ್ಶನ ವೈದ್ಯ, ಶ್ರೀನಿವಾಸ ಕರಮುಡಿ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿದ್ದರು.

ಶ್ರದ್ಧಾಭಕ್ತಿಯಿಂದ ನಡೆದ ನವಚಂಡಿ ಹವನ ಮತ್ತು ಕುಮಾರಿಕಾ ಪೂಜೆಯಲ್ಲಿ ಭಕ್ತರು ಪಾಲ್ಗೊಂಡು ದೇವಿಯ ಕೃಪೆಗೆ https://aratt.ai/@vishwaroopa_news_blog ಪಾತ್ರರಾದರು.

Leave a Reply

Optimized by Optimole

Discover more from VISHWAROOPA NEWS BLOG

Subscribe now to keep reading and get access to the full archive.

Continue reading