ನವೆಂಬರ್ 27, 2026

ಗಂಗಾವತಿ ಶೃಂಗೇರಿ ಶಂಕರ ಮಠದ ಶ್ರೀ ಶಾರದಾ ಮಂದಿರದಲ್ಲಿ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಮಹಿಳೆಯರಿಗೆ ಹಸಿರು ಗಾಜಿನ ಬಳೆ, ಅರಿಶಿಣ ಹಾಗೂ ಕುಂಕುಮ ವಿತರಿಸಿದ ಸಂದರ್ಭ

ಇಷ್ಟಾರ್ಥ ಸಿದ್ಧಿಗಾಗಿ ಶ್ರೀ ಶಾರದಾದೇವಿಗೆ ಭಕ್ತರಿಂದ ಮಹಾಸಂಕಲ್ಪ ಸಮರ್ಪಣೆ: ಶಂಕರ ಮಠದಲ್ಲಿ ಹಸಿರುಬಳೆ 

ಗಂಗಾವತಿ: ನಗರದ ಶೃಂಗೇರಿ ಶಂಕರ ಮಠದ ಶ್ರೀ ಶಾರದಾ ಮಂದಿರದಲ್ಲಿ ನಡೆಯುತ್ತಿರುವ ಶ್ರೀ ಶಾರದಾದೇವಿ ಶರನ್ನವರಾತ್ರಿ

ಗಂಗಾವತಿ ಶೃಂಗೇರಿ ಶಂಕರ ಮಠದಲ್ಲಿ ಮಹಿಳೆಯರಿಗೆ ಹಸಿರು ಗಾಜಿನ ಬಳೆ ವಿತರಣೆ
ಗಂಗಾವತಿ ಶೃಂಗೇರಿ ಶಂಕರ ಮಠದ ಶ್ರೀ ಶಾರದಾ ಮಂದಿರದಲ್ಲಿ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಮಹಿಳೆಯರಿಗೆ ಹಸಿರು ಗಾಜಿನ ಬಳೆ, ಅರಿಶಿಣ ಹಾಗೂ ಕುಂಕುಮ ವಿತರಿಸಿದ ಸಂದರ್ಭ

ಮಹೋತ್ಸವದ ಅಂಗವಾಗಿ ಶೃಂಗೇರಿ ಶಂಕರ ಮಠದಲ್ಲಿ ಹಸಿರುಬಳೆ  ಉಡಿ ತುಂಬುವ ಸೇವಾ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು. ಇಷ್ಟಾರ್ಥ ಸಿದ್ಧಿ ಹಾಗೂ ಕುಟುಂಬದ ಒಳಿತಿಗಾಗಿ ಮಹಿಳೆಯರು ಶ್ರೀ ಶಾರದಾದೇವಿಗೆ ಮಹಾಸಂಕಲ್ಪ ಸಮರ್ಪಿಸಿ ಧಾರ್ಮಿಕ ಸೇವೆಯಲ್ಲಿ ಪಾಲ್ಗೊಂಡರು.

ಶಂಕರ ಮಠದಲ್ಲಿ ಹಸಿರುಬಳೆ:

ಆಚಾರ ನರಸಾಪುರ ಗ್ರಾಮದ ಡಾ. ಸುರೇಶ್ ಅವರ ಕುಟುಂಬದವರು ಹಾಗೂ ಹಾಸ್ಟೆಲ್ ಉದ್ಯೋಗಿ ಹುಲಿಗಮ್ಮ ಅವರ ಕುಟುಂಬದವರು ಈ ಸೇವೆಯನ್ನು ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಮೊದಲಿಗೆ ಶ್ರೀ ಶಾರದಾದೇವಿಗೆ ವಿಶೇಷ ಪೂಜೆ ಸಲ್ಲಿಸಿ, ತಮ್ಮ ಸಂಕಲ್ಪವನ್ನು ಸಮರ್ಪಿಸಲಾಯಿತು. ನಂತರ 245ಕ್ಕೂ ಅಧಿಕ ಮಹಿಳೆಯರಿಗೆ ಅರಿಶಿಣ, ಕುಂಕುಮದೊಂದಿಗೆ ಹಸಿರು ಗಾಜಿನ ಬಳೆಗಳನ್ನು ವಿತರಿಸಲಾಯಿತು. ಬಳೆಗಳನ್ನು ಸ್ವೀಕರಿಸಿದ ಮಹಿಳೆಯರು ದೇವಿಯ ದರ್ಶನ ಪಡೆದು, ಭಕ್ತಿಭಾವದಿಂದ ಹರಕೆ ಸಲ್ಲಿಸಿ ತಮ್ಮ ಇಷ್ಟಾರ್ಥಗಳು ಈಡೇರಲಿ ಎಂದು ಪ್ರಾರ್ಥಿಸಿದರು

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಸುರೇಶ್, ಶೃಂಗೇರಿ ಜಗದ್ಗುರುಗಳಿಂದ ಪ್ರತಿಷ್ಠಾಪನೆಗೊಂಡಿರುವ ಶ್ರೀ ಶಾರದಾ ದೇವಸ್ಥಾನವು ಮಹಾನ್ ಶಕ್ತಿಪೀಠವಾಗಿದ್ದು, ನಾಡಿನಾದ್ಯಂತದ ಭಕ್ತರಿಗೆ ಶ್ರದ್ಧೆ ಮತ್ತು ನಂಬಿಕೆಯ ಪ್ರಮುಖ ಕೇಂದ್ರವಾಗಿದೆ. ಶ್ರೀ ಶಾರದಾದೇವಿಯ ಅನುಗ್ರಹದಿಂದ ಕುಟುಂಬ ಹಾಗೂ ಸಮಾಜದ ಒಳಿತಾಗಲಿ ಎಂಬ ಉದ್ದೇಶದಿಂದ ಈ ಧಾರ್ಮಿಕ ಸೇವೆಯನ್ನು ಕೈಗೊಂಡಿದ್ದು, ಮುಂದಿನ ವರ್ಷಗಳಲ್ಲಿಯೂ ಸೇವೆಯನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರು.

ಮಠದ ಧರ್ಮದರ್ಶಿ ನಾರಾಯಣರಾವ್ ಮಾತನಾಡಿ, ಶ್ರೀ ಶಾರದಾದೇವಿ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ನಡೆದ ಲಲಿತಾ ಸಹಸ್ರನಾಮ ಪಾರಾಯಣ ಹಾಗೂ ಶ್ರೀಚಕ್ರ ಕುಂಕುಮಾರ್ಚನೆ ಕಾರ್ಯಕ್ರಮಗಳು ಈ ಬಾರಿ ದಾಖಲೆಯ ಪ್ರಮಾಣದಲ್ಲಿ ನಡೆದಿರುವುದು ಸಂತಸದ ಸಂಗತಿ ಎಂದು ಹೇಳಿದರು. ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸಿದ ಎಲ್ಲ ಭಜನಾ ಮಂಡಳಿಗಳ ಸದಸ್ಯರು ಹಾಗೂ ಭಕ್ತರಿಗೆ ಕೃತಜ್ಞತೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಲಲಿತಾ ಸಹಸ್ರನಾಮ ಪಾರಾಯಣ ಮತ್ತು ಶ್ರೀಚಕ್ರ ಕುಂಕುಮಾರ್ಚನೆಯಲ್ಲಿ ಭಾಗವಹಿಸಿದ್ದ ಮಹಿಳೆಯರಿಗೆ ಶ್ರೀಚಕ್ರದೊಂದಿಗೆ ಕುಂಕುಮ ಹಾಗೂ ಧಾರ್ಮಿಕ ಪುಸ್ತಕಗಳನ್ನು ವಿತರಿಸಲಾಯಿತು. ಮಹಿಳೆಯರು ಭಕ್ತಿಭಾವದಿಂದ ಪಾಲ್ಗೊಂಡು ಶ್ರೀ ಶಾರದಾದೇವಿಯ ಕೃಪೆಗೆ ಪಾತ್ರರಾಗುವ ಸಂಕಲ್ಪದೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಶರನ್ನವರಾತ್ರಿ ಸಂದರ್ಭದಲ್ಲಿ ಶೃಂಗೇರಿ ಶಂಕರ ಮಠದಲ್ಲಿ ನಡೆಯುತ್ತಿರುವ ವಿವಿಧ ಧಾರ್ಮಿಕ ಹಾಗೂ ಸೇವಾ ಕಾರ್ಯಕ್ರಮಗಳಿಗೆ ಭಕ್ತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಪ್ರತಿದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶ್ರೀ ಶಾರದಾದೇವಿಯ ದರ್ಶನ ಪಡೆದು ವಿಶೇಷ ಪೂಜೆ, ಪಾರಾಯಣ ಹಾಗೂ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ರಾಘವೇಂದ್ರ, ಶ್ರೀನಿವಾಸ್, ವೇಣುಗೋಪಾಲ, ಶೇಷಗಿರಿಗಾಡದ್, ಚೈತನ್ಯ, ಜಗನ್ನಾಥ, ವಿಶ್ವನಾಥ, ಗಾಯತ್ರಿ, ಕವಿತಾ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದು, ಧಾರ್ಮಿಕ ಸೇವಾ  http://ಶಂಕರ ಮಠದಲ್ಲಿ ಹಸಿರುಬಳೆ ಕಾರ್ಯಕ್ರಮಕ್ಕೆ https://aratt.ai/@vishwaroopa_news_blog ಸಹಕರಿಸಿದರು.

Leave a Reply

Optimized by Optimole

Discover more from VISHWAROOPA NEWS BLOG

Subscribe now to keep reading and get access to the full archive.

Continue reading