ಹೆಜ್ಜೆ ಗೆಜ್ಜೆ ತಂಡದಿಂದ ರಂಗ ಸಂಭ್ರಮ ಕಾರ್ಯಕ್ರಮ

ಬೆಂಗಳೂರು: ಹೆಜ್ಜೆ ಗೆಜ್ಜೆ ತಂಡ ಕಳೆದ ಐದು ದಶಕಗಳಿಂದ ನಿರಂತರವಾಗಿ ಕಲಾ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮನರಂಜನೆಯೊಂದಿಗೆ ಚಿಂತನೆಗೂ ಚಾಲನೆ ಕೊಡುವಂತಹ ಅನೇಕ ವಿಚಾರಧಾರೆಗಳನ್ನು ಜನರಿರುವಲ್ಲಿಗೆ ಹೋಗಿ ನಾಟಕ ಪ್ರದರ್ಶನ ಮಾಡುತ್ತಾ ಬಂದಿರುತ್ತದೆ. ಸಂಸ್ಥೆ ರಂಗ ಸಂಭ್ರಮ ತಿರುಗಾಟ ಎಂಬ ಶೀರ್ಷಿಕೆಯಡಿ ಅನೇಕ ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಂಡಿರುವ ಜಾನಪದ ಕಲಾ ಬಳಗ ಭರತನಾಟ್ಯ ಸಂಸ್ಥೆ ಮತ್ತು ಮೈಸೂರು ರಮಾನಂದರವರ ಹ್ಯಾಗ್ ಸತ್ತ ನಾಟಕವನ್ನು ಅಕ್ಟೋಬರ್-30‌ ಗುರುವಾರ ಬೆಂಗಳೂರಿನ ಜೆ.ಸಿ ರಸ್ತೆಯಲ್ಲಿರುವ ನಯನ ರಂಗಮಂದಿರದಲ್ಲಿ ಹೊಸ ರೂಪದಲ್ಲಿ ಪ್ರದರ್ಶಿಸಲಾಯಿತು.

ಸಾಹಿತಿಗಳು ಹಿರಿಯ ರಂಗಕರ್ಮಿಗಳು ಆದ ಡಾ. ಪಾರ್ಶ್ವನಾಥ್ ಅವರು ಕನ್ನಡ ರಂಗಭೂಮಿ ಬೆಳೆದು ಬಂದ ಬಗ್ಗೆ ವಿವರವಾಗಿ ತಿಳಿಸಿದರು. ವಿಶೇಷ ಆಹ್ವಾನಿತರಾಗಿ ಬಂದಿದ್ದ ನರಸಿಂಹಮೂರ್ತಿರವರು ಗೆಜ್ಜೆ ಹೆಜ್ಜೆ ರಂಗ ತಂಡದ ಐದು ದಶಕಗಳ ಹೋರಾಟದ ಬದುಕನ್ನು ಬಣ್ಣದಲ್ಲಿ ಕಳೆದ ರಮಾನಂದರವರು ನಾಟಕ ರಚನೆ ವಿಚಾರ ಸಂಕಿರಣಗಳು ರಂಗ ತರಬೇತಿ ಪ್ರಸಾದನ ಶಿಬಿರ ನಡೆಸುತ್ತಾ ಬಂದಿರುತ್ತಾರೆ.

ಲಕ್ಷ್ಮಿ ನಾರಾಯಣ್ ಪ್ರಾಂಶುಪಾಲರು ಕನ್ನಡ ರಂಗಭೂಮಿಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ ಜನತೆಗೆ ರಂಗ ಶಿಕ್ಷಣದ ಅರಿವು ಮೂಡಿಸಬೇಕಾಗಿದೆ ಎಂದು ತಿಳಿಸಿದರು. ಅಡಿಷನಲ್ ಡಿಸಿ ಮಂಜುನಾಥ್ ರವರು ಹಾಸ್ಯದ ನಾಟಕಗಳನ್ನು ವಿಭಿನ್ನ ರೀತಿಯಲ್ಲಿ ವಿಡೆಂಬನೆ ಮಾಡುತ್ತಾ ಪ್ರೇಕ್ಷಕರಿಗೆ ಹಾಸ್ಯ ಉಣಬಡಿಸುತ್ತಿದ್ದಾರೆ ರಮಾನಂದರು ಹಾಸ್ಯ ಗಾರುಡಿಗನೇ ಸರಿ ಎಂದು ತಿಳಿಸಿದರು.

ಮೈಸೂರು ರಮಾನಂದ್ ಗೀತಾಂಜಲಿ ಮತ್ತು ಶಿವರಾಂ ವಿಶೇಷವಾದ ಕಿರು ರೂಪಕ ಪ್ರದರ್ಶಿಸಿದರು. ಸಂಗೀತ ಟಿ.ಜಿ.ಹರೀಶ್. ರಂಗಗೀತೆ, ಜಾನಪದ ಗೀತೆ ಭಾವಗೀತೆಗಳ ಸಮ್ಮಿಲನದೊಂದಿಗೆ 4 ಗಂಟೆಗೆ ಪ್ರಾರಂಭವಾದ ರಂಗ ಸಂಭ್ರಮ ರಾತ್ರಿ 9ರವರೆಗೆ ನಡೆಯಿತು. ವಿವಿಧ ಕ್ಷೇತ್ರಗಳ ಗಣ್ಯರಿಗೆ ರಂಗ ಗೌರವ ನೀಡಿ ಗೌರವಿಸಲಾಯಿತು.https://aratt.ai/@vishwaroopa_news_blog

Leave a Reply

Discover more from VISHWAROOPA NEWS BLOG

Subscribe now to keep reading and get access to the full archive.

Continue reading