ಆರೋನ್ ಮಿರಜ್‌ಕರ್ ಶಾಲೆಯಲ್ಲಿ ಭವ್ಯ ಮೆರವಣಿಗೆ ಮೂಲಕ ತಾಯಿ ಭುವನೇಶ್ವರಿಯ ಮೆರವಣಿಗೆ

ಆರೋನ್ ಮಿರಜ್‌ಕರ್ ಶಾಲೆಯಲ್ಲಿ ಭವ್ಯ ಮೆರವಣಿಗೆ ಮೂಲಕ ತಾಯಿ ಭುವನೇಶ್ವರಿಯ ಮೆರವಣಿಗೆ

ಗಂಗಾವತಿ: ನವೆಂಬರ್‌-01 ಶನಿವಾರ ಆರೋನ್ ಮಿರಜ್‌ಕರ್ ಹಾಗೂ ನಿವೇದಿತಾ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ ೭೦ನೇ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಬೈಕ್ ರೈಲಿಯ ಮೂಲಕ ಕನ್ನಡ ಮಾತೆಯನ್ನು ವೇದಿಕೆಗೆ ಬರಮಾಡಿಕೊಳ್ಳುವ ಮೂಲಕ, ವಿದ್ಯಾರ್ಥಿಗಳಲ್ಲಿ ಕನ್ನಡದ ಜ್ಞಾನವನ್ನು ಹೆಚ್ಚಿಸಲು ರಂಗೋಲಿಗಳ ಮೂಲಕ ವ್ಯಾಕರಣ ಹಾಗೂ ಕವಿಗಳ ಭಾವಚಿತ್ರಗಳನ್ನು ಮಕ್ಕಳಿಂದ ಬಿಡಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ದೀಪಬೆಳಗಿಸುವುದರ ಮೂಲಕ ಸಂಸ್ಥೆಯ ಕಾರ್ಯದರ್ಶಿಗಳಾದ ರುಬಿನ್ ಮಿರಜ್‌ಕರ್ ಉದ್ಘಾಟಿಸಿ “ಕಲಿಯೋಕೆ ಕೋಟಿ ಭಾಷೆ, ಆದರೆ ಆಡೋಕೆ ಒಂದೇ ಭಾಷೆ ಅದುವೇ ನಮ್ಮ ಕನ್ನಡ ಭಾಷೆ” ಎಂದು ಹೇಳಿ ಕನ್ನಡ ನಾಡು ನುಡಿಯ ಬಗ್ಗೆ ಮಾತನಾಡಿದರು. “ಕನ್ನಡ ಭಾಷೆಯನ್ನುವುದು ಪುರಾತನವಾದದ್ದು, ಅದು ಪ್ರಪಂಚದೆಲ್ಲೆಡೆ ಪಸರಿಸಿ ತನ್ನದೇ ಆದ ಛಾಪನ್ನು ಮೂಡಿಸಿದೆ” ಎಂದು ಶಿಕ್ಷಣ ಸಂಸ್ಥೆಯ ಖಜಾಂಚಿಗಳಾದ ಶ್ರೀಮತಿ ಸುನೀತಾ ಮಿರಜ್‌ಕರ್ ಅವರು ತಿಳಿಸಿದರು.

“ನಾವು ನವೆಂಬರ್-೧ ರಂದು ಮಾತ್ರ ಕನ್ನಡಿಗರಾಗುವ ಬದಲು ಎಲ್ಲಾ ಸಮಯದಲ್ಲೂ ನಂಬರ್ ಒನ್ ಕನ್ನಡಿಗರಾಗುವ ಮೂಲಕ ಕನ್ನಡ ಭಾಷೆಯ ರಕ್ಷಣೆ ನಮ್ಮೆಲ್ಲರ ಹೊಣೆ” ಎಂದು ಆಡಳಿತಾಧಿಕಾರಿಗಳಾದ ಚಂದ್ರಕಾಂತರಾವ್ ಅವರು ಮಾರ್ಗದರ್ಶನ ಮಾಡಿದರು.

“ಕನ್ನಡ ಭಾಷೆಯು ಸಮೃದ್ಧವಾದದ್ದು, ಕನ್ನಡ ಎನ್ನುವುದು ತಾಯಿ ಭಾಷೆಯಾಗಿದೆ. ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡ ನಾಡು ಹರಡಿದೆ” ಶಾಲೆಯ ಮುಖ್ಯೋಪಾಧ್ಯಾಯರಾದ ಮಂಜುನಾಥ ನಾಯಕ ಹೇಳಿದರು. “ಕರ್ನಾಟಕದ ಏಕೀಕರಣವು ಬಹಾಳ ರೋಚಕವಾದ ಘಟ್ಟವಾಗಿದ್ದು, ಇದರ ಕೊಡುಗೆ ಆಲೂರು ವೆಂಕಟರಾಯರಿಗೆ ಸಲ್ಲುತ್ತದೆ” ಎಂದು ಕರ್ನಾಟಕದ ಏಕೀಕರಣದ ಕುರಿತು ನಿವೇದಿತಾ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಖಾ ಠಾಕೂರ್ ತಿಳಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ದಾಸರ, ಸಂತರ ಮತ್ತು ಕವಿಗಳ ವೇಷಭೂಷಣಗಳನ್ನು ತೊಟ್ಟು ಕಾರ್ಯಕ್ರಮಕ್ಕೆ ಮೆರಗನ್ನು ತಂದರು. ವೇದಿಕೆ ಕಾರ್ಯಕ್ರಮದ ನಂತರ ಕನ್ನಡ ನಾಡು, ನುಡಿ, ರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳು ಮನಮುಟ್ಟುವಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಉಭಯ ಶಾಲೆಗಳ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪಾಲಕರು ಭಾಗವಹಿಸಿದ್ದರು. https://aratt.ai/@vishwaroopa_news_blog

Leave a Reply

Discover more from VISHWAROOPA NEWS BLOG

Subscribe now to keep reading and get access to the full archive.

Continue reading