ಪ್ರಶಸ್ತಿಗಳು, ಪುರಸ್ಕೃತರ ಜವಾಬ್ದಾರಿಯನ್ನು ಹೆಚ್ಚಿಸಿ ಜಾಗೃತರನ್ನಾಗಿ ಮಾಡುತ್ತವೆ: ಜಗನ್ನಾಥ್ ಆಲಂಪಲ್ಲಿ

ಪ್ರಶಸ್ತಿಗಳು, ಪುರಸ್ಕೃತರ ಜವಾಬ್ದಾರಿಯನ್ನು ಹೆಚ್ಚಿಸಿ ಜಾಗೃತರನ್ನಾಗಿ ಮಾಡುತ್ತವೆ: ಜಗನ್ನಾಥ್ ಆಲಂಪಲ್ಲಿ

ಗಂಗಾವತಿ: ಪ್ರಶಸ್ತಿ ಹಾಗೂ ಪುರಸ್ಕಾರಗಳು ಪುರಸ್ಕೃತರ ಜವಾಬ್ದಾರಿಯನ್ನು ಹೆಚ್ಚಿಸಿ ಜಾಗೃತರನ್ನಾಗಿ ಮಾಡುತ್ತವೆ. ಆ ನಿಟ್ಟಿನಲ್ಲಿ  ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ತು ಹಾಗೂ ಇತರೆ ಸಂಘ-ಸಂಸ್ಥೆಗಳಿಂದ ಇದೇ ತಿಂಗಳು ಕೊನೆಯಲ್ಲಿ ನೀಡಲಾಗುವ ಶಿಕ್ಷಣ ತಜ್ಞ ಹೆಚ್ ನರಸಿಂಹಯ್ಯ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಲಿಟಲ್‌ ಹಾಟ್ಸ್‌ ಶಾಲೆಯ ಕಾರ್ಯದರ್ಶಿಯಾದ ಜಗನ್ನಾಥ ಆಲಂಪಲ್ಲಿ ಅಭಿಪ್ರಾಯಪಟ್ಟರು.

ಅವರು ಸ್ವಾಮಿ ವಿವೇಕಾನಂದ ಆಂಗ್ಲಭಾಧ್ಯಮ ಶಾಲೆಯಲ್ಲಿ ಶಾಲೆಯ ಮುಖ್ಯ ಗುರುಗಳು ಸೇರಿದಂತೆ ಶಿಕ್ಷಕರು ವಿದ್ಯಾರ್ಥಿಗಳಿಂದ ಅಭಿನಂದನೆ ಜೊತೆಗೆ ಆತ್ಮೀಯ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ತು ಹಾಗೂ ಇತರೆ ಸಂಘ-ಸಂಸ್ಥೆಗಳಿಂದ ಇದೇ ದಿನಾಂಕ 28 ರಿಂದ ಮೂರು ದಿನಗಳ ಕಾಲ ಯಾದಗಿರಿಯಲ್ಲಿ ಜರುಗಲಿರುವ ರಾಜ್ಯ ಮಟ್ಟದ ಬೃಹತ್ ಸಮಾವೇಶದಲ್ಲಿ ಶಿಕ್ಷಣ ತಜ್ಞ ಹೆಚ್ ನರಸಿಂಹಯ್ಯ ರಾಜ್ಯಮಟ್ಟದ ಪ್ರಶಸ್ತಿಗೆ ನಾನು ಆಯ್ಕೆಯಾಗಿರುವುದು ಒಂದು ಕಡೆ ಸಂತಸವಾದರೆ ಮತ್ತೊಂದು ಕಡೆ ನಾನು ಮತ್ತಷ್ಟು ಜವಾಬ್ದಾರಿ ಅನುಸರಿಸಬೇಕಾದ ಅವಶ್ಯಕತೆ ಇದೆ ಹೇಳಿದರು. ಪ್ರತಿಯೊಬ್ಬರು ನಿರ್ದಿಷ್ಟವಾದ ಗುರಿಯೊಂದಿಗೆ ಗುರುಗಳ ಮಾರ್ಗದರ್ಶನದಲ್ಲಿ ನಡೆದಾಗ ಯಶಸ್ಸಿನ ದಾರಿ ಸುಲಭವಾಗಲಿದೆ ಎಂದು  ತಾವು ನಡೆದು ಬಂದ ದಾರಿಯನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶಾರುಣ್ ಕುಮಾರಿ, ಶಿಕ್ಷಕರಾದ ಅಪರ್ಣ, ಭುವನೇಶ್ವರಿ, ಸುನಿತಾ, ಶಾಂತ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡು ಸಂತಸ ಹಂಚಿಕೊಂಡರು. https://aratt.ai/@vishwaroopa_news_blog

Leave a Reply

Discover more from VISHWAROOPA NEWS BLOG

Subscribe now to keep reading and get access to the full archive.

Continue reading