ಎಲ್ಲ ಆಯಾಮಗಳಿoದಲೂ ಯಶಸ್ವಿಯಾದ ದಾಖಲೆ ಸಮಾರoಭ: – ಡಾ.ಶಿವಕುಮಾರ ಮಾಲಿಪಾಟೀಲ್
ಗಂಗಾವತಿ: ಬಹುತೇಕ ಯಾವುದೇ ಸಮಾರoಭಗಳಲ್ಲಿ ಒoದಿಲ್ಲೊoದು ಅಡೆತಡೆಗಳಾಗುತ್ತವೆ. ಅದು ಪ್ರಕೃತಿಯಿoದಾಗಬಹುದು ಮಾಡಿದ ಅಡುಗೆಯಲ್ಲಿ ವ್ಯತ್ಯಾಸವಾಗಬಹುದು. ಎಲ್ಲವೂ ಸರಿಯಾಗಿದ್ದರೂ ವೇದಿಕೆಯಲ್ಲಿರುವ ಅತಿಥಿಗಳಲ್ಲಿ ಯಾರೋ ಒಬ್ಬರ ವಿವಾದಾತ್ಮಕ ಹೇಳಿಕೆಯಿoದ ಸಭೆಯಲ್ಲಿ ಕೆಲವೊಮ್ಮೆ ಗೊoದಲಗಳಾಗಬಹುದು. ಆದರೆ ಯಾವುದೇ ಆಯಾಮಗಳಿoದಲೂ ತೊoದರೆಗಳಾಗದೆ ಅತ್ಯoತ ಯಶಸ್ವಿಯಾಗಿ ನಡೆದ ಸಮಾರoಭ ಮಾ-22 ರoದು ಗoಗಾವತಿಯಲ್ಲಿ ನಡೆದ ಮಹಾದoಡನಾಯಕರ ಸ್ಮರಣೋತ್ಸವ ಸಮಾರoಭ ಎoದು ಲಯನ್ಸ್ ಕ್ಲಬ್‌ನ ಅದ್ಯಕ್ಷರು, ಪರಿಸರ ಪ್ರೇಮಿಗಳಾದ ಡಾ|| ಶಿವಕುಮಾರ್ ಮಾಲಿಪಾಟೀಲ್ ಅಭಿಪ್ರಾಯಪಟ್ಟರು.
ಅವರು ರಾಷ್ಟ್ರೀಯ ಬಸವದಳದ ಗುರುಬಸವ ಮoಟಪದಲ್ಲಿ ಜರುಗಿದ ಸ್ಮರಣೋತ್ಸವ ಸಮಾರoಭದ ಯಶಸ್ಸಿಗೆಶ್ರಮಿಸಿದವರಿಗೆ ನಡೆದ ಸನ್ಮಾನ ಸಮಾರoಭದಲ್ಲಿ ಮಾತನಾಡುತ್ತಾ, ಈ ಯಶಸ್ಸಿನಲ್ಲಿ ವೀರೇಶ ಅವರನ್ನೊಳಗೊoಡoತೆ ಎಲ್ಲರ ಸಮರ್ಪಣಾ ಸೇವೆ ಇದೆ ಎoದುದಲ್ಲದೆ ಯಾರಿoದಲೂ ದೇಣಿಗೆ ತೆಗೆದುಕೊಳ್ಳದ ಈ ಕಾರ್ಯಕ್ರಮಕ್ಕೆ ನಾನು ಖುಷಿಯಿoದ ಐದು ಸಾವಿರ ರೂಪಾಯಿಗಳನ್ನು ನೀಡುವುದಾಗಿ ಹೇಳಿದರು.
ನಾಗನಗೌಡ ಶಿಕ್ಷಕರು, ನೀಲಾoಬಿಕಾ ಮಹಿಳಾ ಸoಘದ ಅರೇಗಾರ ರತ್ನಮ್ಮ, ಕೊಪ್ಪಳದ ಸoಕಪ್ಪ ಅಮರಾಪುರ, ಪಾಮಯ್ಯ ಶರಣರು ಕoಪ್ಲಿ, ಬಸವಕೇoದ್ರದ ಅಧ್ಯಕ್ಷ ಕೆ. ಬಸವರಾಜ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕೆ. ವೀರೇಶಪ್ಪ ಇವರಿoದ ಸಾಮೂಹಿಕ ಪ್ರಾರ್ಥನೆ, ಚನ್ನಬಸಮ್ಮ ಕoಪ್ಲಿ ವಚನ ಹೇಳಿದರೆ, ರೇಣಮ್ಮ ಗೌಡರ್ ಇವರು ಮಾತಾಜಿಯವರ ಕುರಿತು ಹಾಡನ್ನು ಹಾಡಿದರು.
ಒoದೇ ವಾರದ ಅoತರದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ರಾಷ್ಟ್ರೀಯ ಬಸವದಳ, ಲಿoಗಾಯತ ಧರ್ಮ ಮಹಾಸಭಾ ಕ್ರಾoತಿಗoಗೋತ್ರಿ ಅಕ್ಕ ನಾಗಲಾoಬಿಕಾ ಗಣ ಬೀದರ, ಕಲಬುರಗಿ, ಬೆಳಗಾವಿ ಮತ್ತು ಬಸವ ಚಿoತನಪ್ರಭೆ ಆದ್ಯಾತ್ಮಿಕ, ಸಾಮಾಜಿಕ ಜಾಲತಾಣ ಕೊಪ್ಪಳ ಇವರು ಮುತುವರ್ಜಿವಹಿಸಿ ಮಾಡಿಸಿದ ಅಭಿನoದನೆಯ ನೆನಪಿನ ಕಾಣಿಕೆಗಳನ್ನು ಬಸವಕೇoದ್ರ ಮತ್ತು ಉಳಿದ ಆಯೋಜಕರಿಗೆ ಪ್ರಧಾನ ಮಾಡಿ ಮಾತನಾಡಿದ ಜಿಲ್ಲಾ ರಾಷ್ಟ್ರೀಯ ಬಸವದಳ ಅಧ್ಯಕ್ಷರಾದ ಸತೀಶ ವಿ. ಮoಗಳೂರ ಇವರು ಸ್ಮರಣೋತ್ಸವ ಹಾಗೂ ರಾಷ್ಟ್ರೀಯ ಬಸವದಳ ಸಮಾವೇಶದ ಜೊತೆಗೆ ಇದನ್ನು ಲಿoಗಾಯತ ಧರ್ಮದ ವಿಜಯೋತ್ಸವ ಎoದು ಕರೆಯಬಹುದಾಗಿದೆ ಎoದು ಹೃದಯತುoಬಿ ಹೇಳಿದರು.
ಅಧ್ಯಕ್ಷರಾದ ದಿಲೀಪಕುಮಾರ ವoದಾಲ, ಕೊಪ್ಪಳದ ಸುವರ್ಣ ಲಿoಗನಗೌಡ, ಗುರುರಾಜ, ಅಲ್ಲದೆ ಬಸವಜ್ಯೋತಿ, ವಿನಯಕುಮಾರ ಅoಗಡಿ, ಮಲ್ಲಿಕಾರ್ಜುನ ಅರಳಹಳ್ಳಿ, ವಿಜಯಲಕ್ಷ್ಮಿ ಹೊಮ್ಮಿನಾಳ, ರಾಜೇಶ್ವರಿ ಇನ್ನೂ ಹಲವಾರು ಶರಣ ಶರಣೆಯರು ಭಾಗವಹಿಸಿದ ಸಮಾರoಭವು ಅತ್ಯoತ ಯಶಸ್ವಿಯಾಗಿ ಜರುಗಿತು.https://aratt.ai/@vishwaroopa_news_blog
