ಅತ್ಯಂತ ಕನಿಷ್ಟ ವಯಸ್ಸಿನಲ್ಲಿ ಆಧಾರ್ ಕಾರ್ಡ್ ಹೊಂದಿದ ವಿಶ್ವದ ಕಿರಿಯ ಮಗು ಎಂಬ ಹೆಗ್ಗಳಿಕೆಗೆ ರೇಯಾಂಕ ತ್ರಿನಯನಿ ಪಾತ್ರಳಾಗಿದ್ದಾಳೆ.
ಗಂಗಾವತಿ: ರಾಯಚೂರು ಮೂಲದ ಹಾಗೂ ಪ್ರಸ್ತುತ ಗಂಗಾವತಿ ತಾಲೂಕಿನ ಶ್ರೀರಾಮನಗರದ ನಿವಾಸಿಗಳಾದ ಡಾ. ಎ. ಪವನಕುಮಾರ ಹಾಗೂ ಡಾ. ವರಲಕ್ಷ್ಮೀ ಪಾಲ ವೈದ್ಯ ದಂಪತಿಗಳು ತಮ್ಮ ಪುತ್ರಿ ಅಂಚುರಿ ರೇಯಾಂಕ ತ್ರಿನಯನಿಯು ಜನ್ಮ ತಾಳಿದ 5ನೇ ದಿನದಲ್ಲಿ ಆಧಾರ್ ಕಾರ್ಡ್ ನೋಂದಣಿ ಮಾಡಿಸುವ ಮೂಲಕ ಅಪರೂಪದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಶ್ರೀರಾಮನಗರ ನಿವಾಸಿ ಕನ್ನಡ ಪ್ರೇಮಿ ಜಿ. ರಾಮಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದರು.ಈ ವೈದ್ಯರ ದಂಪತಿಗೆ ಮಗು ತ್ರಿನಯನಿ ಕಳೆದ ಮೇ-01 ರಂದು ಗಂಗಾವತಿಯ ವಿವೇಕಾನಂದ ಆಸ್ಪತ್ರೆಯಲ್ಲಿ ಜನಿಸಿದ್ದು, ಕೂಡಲೇ ಜನನ ನೋಂದಣಿ ಮತ್ತು ಆಧಾರ್ ಪ್ರಕ್ರಿಯೆಗೆ ಚಾಲನೆ ನೀಡಿ, ಮೇ 6 ರಂದೇ ಮಗು ಹೆಸರಿನಲ್ಲಿ ಆಧಾರ್ ಕಾರ್ಡ್ (ಸಂಖ್ಯೆ: 6237 8932 2957) ನೋಂದಣಿ ಮಾಡಿದ್ದಾರೆ.
ದಾಖಲೆ : ಅತ್ಯಂತ ಕನಿಷ್ಟ ವಯಸ್ಸಿನಲ್ಲಿ (ಅಂದರೆ ಜನಿಸಿದ ಕೇವಲ 5 ದಿನಗಳಲ್ಲಿ) ಆಧಾರ್ ಕಾರ್ಡ್ ಹೊಂದಿದ ವಿಶ್ವದ ಕಿರಿಯ ಮಗು ಎಂಬ ಹೆಗ್ಗಳಿಕೆಗೆ ರೇಯಾಂಕ ತ್ರಿನಯನಿ ಪಾತ್ರಳಾಗಿದ್ದಾಳೆ. ಈ ವಿಶಿಷ್ಟ ಸಾಧನೆಯನ್ನು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಯು ಅಧಿಕೃತವಾಗಿ ಗುರುತಿಸಿ, ವಿಶ್ವ ದಾಖಲೆಯ ಪದಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಿದೆ.ದಂಪತಿಗಳು ತಮ್ಮ ಮಗಳು ಭೂಮಿಗೆ ಬಂದ 5 ದಿನಗಳಲ್ಲಿ ಆಧಾರ್ ಕಾರ್ಡ್ ಪಡೆದು, ಅಂತರಾಷ್ಟ್ರೀಯ ಮಟ್ಟದ ರೆಕಾರ್ಡ್ ಪುಸ್ತಕದಲ್ಲಿ ಜಾಗ ಪಡೆದಿರುವುದು ನಮಗೆ ಹೆಮ್ಮೆ ಮತ್ತು ಅತೀವ ಸಂತಸ ತಂದಿದೆ ಎಂದು ತಿಳಿಸಿ, ಜಾಗರೂಕತೆ ಹಾಗೂ ಶೀಘ್ರ ನೋಂದಣಿ ಕಾರ್ಯದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ. https://aratt.ai/@vishwaroopa_news_blog





