ಸೆಪ್ಟೆಂಬರ್ 28, 2026

ಶೃಂಗೇರಿ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ ದಿವ್ಯದೃಷ್ಟಿಯ ಫಲವೇ ಜಗದ್ಗುರು ಶ್ರೀ ಶ್ರೀ ವಿದುಶೇಖರಭಾರತೀ ಮಹಾಸ್ವಾಮಿಗಳು: ನಾರಾಯಣ ವೈದ್ಯ

ಗಂಗಾವತಿ: ಆದಿಗುರು ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮಠಗಳಲ್ಲಿ ಶೃಂಗೇರಿ ಶಾರದಾ ಪೀಠವು ಪ್ರಥಮವಾಗಿದ್ದು, 36ನೆಯ ಪೀಠಾಧಿಕಾರಿಗಳಾದ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ ದಿವ್ಯ ದೃಷ್ಟಿಯ ಫಲವಾಗಿ ತಮ್ಮ ಉತ್ತರಾಧಿಕಾರಿಯನ್ನಾಗಿ ಜಗದ್ಗುರು ಶ್ರೀ ಶ್ರೀ ವಿದುಶೇಖರ ಭಾರತೀ ಮಹಾಸ್ವಾಮಿಗಳನ್ನು ಪಟ್ಟಾಭಿಷೇಕ ಮಾಡಲಾಗಿದೆ ಎಂದು ಶಂಕರಮಠದ ಧರ್ಮದರ್ಶಿ ನಾರಾಯಣ್ ರಾವ್ ವೈದ್ಯ ಹೇಳಿದರು.

ಅವರು ಸೋಮವಾರದಂದು ಶಂಕರ ಮಠದ ಶಾರದಾ ಮಂದಿರದಲ್ಲಿ ಜಗದ್ಗುರು ಶ್ರೀ ಶ್ರೀ ವಿದುಶೇಖರ ಭಾರತೀ ಮಹಾಸ್ವಾಮಿಗಳವರ 34ನೆಯ ವರ್ಧಂತೀ ಮಹೋತ್ಸವ ಧರ್ಮಸಭೆ ಉದ್ದೇಶಿಸಿ ಮಾತನಾಡಿದರು. ದೇಶದ ಉತ್ತರ ಭಾರತ ಸೇರಿದಂತೆ ದಕ್ಷಿಣ ಭಾರತದಲ್ಲಿ ಧರ್ಮ ಯಾತ್ರೆಯನ್ನು ನಡೆಸುವುದರ ಮೂಲಕ ಧರ್ಮ ರಕ್ಷಣೆಗಾಗಿ ಶ್ರಮಿಸುತ್ತಿದ್ದು ಪೂಜ್ಯರಿಂದಲೇ ಗಂಗಾವತಿಯಲ್ಲಿ ಶಾಖಾಮಠ ಆರಂಭಗೊಂಡು 9 ವರ್ಷಗಳು ಪೂರೈಸುತ್ತಿರುವುದು ತಮಗೆ ಸಂತಸವನ್ನು ಉಂಟು ಮಾಡಿದೆ. ಉಭಯ ಜಗದ್ಗುರುಗಳ ಅನುಗ್ರಹದ ಮೇರೆಗೆ ಶ್ರೀಮಠದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಗಿದೆ. ಭತ್ತದ ಕಣಜ ಗಂಗಾವತಿಯಲ್ಲಿ ಶ್ರೀ ಶಾರದ ದೇವಿಯ ಅನುಗ್ರಹದಿಂದ ಶೈಕ್ಷಣಿಕ ಕ್ರಾಂತಿಗೊಳ್ಳುತ್ತಿರುವುದು ಸಂತಸದಾಯಕವಾಗಿದೆ ಎಂದು ಹೇಳಿದರು.

ಶಕುಂತಲಾ ರಾಜು ಅವರು ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರ ಜೀವನ ಸಾಧನೆಗಳ ಕುರಿತು ಉಪನ್ಯಾಸ ನೀಡಿದರು.
ಶ್ರೀ ಶಾರದಾ ಶಂಕರ ಭಕ್ತ ಮಂಡಳಿ ಹಾಗೂ ಭಜನಾ ಮಂಡಳಿಗಳ ನೇತೃತ್ವದಲ್ಲಿ ಭಜನೆ ಮತ್ತಿತರ ಪೂಜಾ ಕಾರ್ಯಕ್ರಮಗಳು ಜರುಗಿದವು.

ರಾಘವೇಂದ್ರ ಅಳವಂಡಿಕರ್. ಭೀಮಶಂಕರ್ ಹೊಸಳ್ಳಿ. ವೇಣುಗೋಪಾಲ. ನಾಗೇಶ್ ಭಟ್, ಅನಿಲ, ಶ್ರೀಮಠದ ತಾಲೂಕ ಸಂಚಾಲಕ ಗಾಯತ್ರಿ ಶ್ರೀಧರ್, ಪ್ರಕಾಶ್, ಜಗನ್ನಾಥ್ ಅಳವಂಡಿಕರ್ ಇನ್ನಿತರರು ಉಪಸ್ಥಿತರಿದ್ದರು. ದೇವಸ್ಥಾನದ ಪ್ರಧಾನ ಅರ್ಚಕ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. https://aratt.ai/@vishwaroopa_news_blog

Leave a Reply

Optimized by Optimole

Discover more from VISHWAROOPA NEWS BLOG

Subscribe now to keep reading and get access to the full archive.

Continue reading