ಗಂಗಾವತಿ: ತಾಲೂಕಿನ ಶ್ರೀರಾಮನಗರದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಾಮಿ ವಿವೇಕಾನಂದ ಸೇವಾ ಸಂಘ (ರಿ) ಶ್ರೀರಾಮನಗರ ಇವರ ಆಶ್ರಯದಲ್ಲಿ ಶರನ್ನವರಾತ್ರಿಯ ಅಂಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಜಿ. ರಾಮಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದರು.ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಬರುವ ಅಕ್ಟೋಬರ್-21, 2026ರ ಬುಧವಾರ (ವಿಜಯದಶಮಿ) ರಂದು ಈ ಸಾರ್ವಜನಿಕ ಮದುವೆಗಳು ಅಂದು ಬೆಳಿಗ್ಗೆ 11:00 ರಿಂದ 12:30 ರವರೆಗೆ ಸಲ್ಲುವ ಶುಭ ಅಭಿಜಿತ್ ಲಗ್ನ ಮುಹೂರ್ತದಲ್ಲಿ ನೆರವೇರಲಿವೆ. ಪೂಜ್ಯ ಶ್ರೀಗಳವರ ಸನ್ನಿಧಾನದಲ್ಲಿ ಹಾಗೂ ಗಣ್ಯಮಾನ್ಯರು, ಗುರು-ಹಿರಿಯರ ಸಮ್ಮುಖದಲ್ಲಿ ಈ ಧಾರ್ಮಿಕ ವಿವಾಹ ಮಹೋತ್ಸವ ನಡೆಯಲಿದ್ದು, ಸಾರ್ವಜನಿಕರು ಮತ್ತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನೂತನ ವಧು-ವರರಿಗೆ ಆಶೀರ್ವದಿಸಬೇಕಾಗಿ ಕೋರಲಾಗಿದೆ.
- ಮದುವೆಗೆ ವಧು-ವರರ ನೋಂದಣಿಗೆ ನಿಯಮಗಳು:• ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ವಧು-ವರರು ತಮ್ಮ ಭಾವಚಿತ್ರ ಹಾಗೂ ಸೂಕ್ತ ದಾಖಲೆಗಳೊಂದಿಗೆ ಹೆಸರು ನೋಂದಾಯಿಸಲು ಕೊನೆಯ ದಿನಾಂಕ: 11-10-2026ರ ಭಾನುವಾರ ಇದ್ದು, ಈ ದಿನಾಂಕದೊಳಗೆ ಶ್ರೀರಾಮನಗರದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಅರ್ಚಕರಲ್ಲಿ ಹೆಸರು ಕಾಯ್ದಿರಿಸಬೇಕು.
- ಸರ್ಕಾರದ ಆದೇಶದಂತೆ ವಧುವಿಗೆ 18 ವರ್ಷ ಹಾಗೂ ವರನಿಗೆ 21 ವರ್ಷ ಪೂರ್ತಿಯಾಗಿರಬೇಕು. ವಯಸ್ಸಿನ ದೃಢೀಕರಣಕ್ಕಾಗಿ ಶಾಲಾ ದೃಢೀಕರಣ ಪತ್ರ ಅಥವಾ ಆಧಾರ್ ಕಾರ್ಡ್ ನಕಲನ್ನು ಕಡ್ಡಾಯವಾಗಿ ಸಲ್ಲಿಸಬೇಕು.
- ವಧು-ವರರು ತಲಾ 4 ಇತ್ತೀಚಿನ ಭಾವಚಿತ್ರಗಳನ್ನು ತರಬೇಕು.
- ಇದು ಮೊದಲನೇ ಮದುವೆಯಾಗಿದ್ದು, ಎರಡನೇ ಮದುವೆಗೆ (ಮರು ಮದುವೆಗೆ) ಹಾಗೂ ಬಾಲ್ಯ ವಿವಾಹಕ್ಕೆ ಅವಕಾಶವಿರುವುದಿಲ್ಲ.
- ಮೊದಲನೇ ಮದುವೆ ಎಂದು ದೃಢೀಕರಿಸಲು ಗ್ರಾಮ ಪಂಚಾಯಿತಿಯ ಸಂಬಂಧಪಟ್ಟ ಅಧಿಕಾರಿಗಳ ಮುದ್ರೆ, ಸಹಿ ಹಾಗೂ ದಿನಾಂಕದೊಂದಿಗೆ ದೃಢೀಕರಣ ಪತ್ರ ಮತ್ತು ವಧು-ವರರ ತಂದೆ-ತಾಯಿ ಅಥವಾ ಸಂಬಂಧಿಕರ ಒಪ್ಪಿಗೆ ಪತ್ರ ಕಡ್ಡಾಯವಾಗಿದೆ.
ಈ ಸಾರ್ವಜನಿಕ
ವಿವಾಹ ಸಮಾರಂಭದಲ್ಲಿನ ಸೌಲಭ್ಯಗಳು ಹಾಗೂ ಊಟದ ವ್ಯವಸ್ಥೆ:
ವಿವಾಹವಾಗುವ ವಧು-ವರರಿಗೆ ಸಂಸ್ಥೆಯ ವತಿಯಿಂದ 2 ಮಾಂಗಲ್ಯ, ಕಾಲುಂಗುರ ಹಾಗೂ ಮತ್ತಿತರ ವಸ್ತ್ರಗಳನ್ನು ನೀಡಲಾಗುತ್ತದೆ. ಅಂದು ಬೆಳಿಗ್ಗೆ 9:00 ರಿಂದ 10:00 ರವರೆಗೆ ಉಪಹಾರದ ವ್ಯವಸ್ಥೆ ಇರಲಿದ್ದು, ಮಧ್ಯಾಹ್ನ 12:30 ರಿಂದ 2:00 ರವರೆಗೆ ಸಾರ್ವಜನಿಕರಿಗೆ ಹಾಗೂ ಬಂದಂತಹ ಅತಿಥಿಗಳಿಗೆ ಭೋಜನ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ಕನ್ನಡ ಪ್ರೇಮಿ ಲಯನ್ ಜಿ. ರಾಮಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9448228738 ಅನ್ನು ಸಂಪರ್ಕಿಸಬಹುದಾಗಿದೆ. https://aratt.ai/@vishwaroopa_news_blog






