ಸೆಪ್ಟೆಂಬರ್ 28, 2026

ಗಂಗಾವತಿಯಲ್ಲಿ ವಿಶ್ವಕರ್ಮ ಪೂಜಾ ಮಹೋತ್ಸವ

ಗಂಗಾವತಿ: ವಿಶ್ವಕರ್ಮ ಸಮಾಜ ಸಂಘ (ರಿ) ಗಂಗಾವತಿ ವತಿಯಿಂದ ಭಗವಾನ್ ಗಂಗಾವತಿಯಲ್ಲಿ ವಿಶ್ವಕರ್ಮ ಪೂಜಾ ಮಹೋತ್ಸವ ದಿನಾಂಕ 24-09-2026 ರ ಗುರುವಾರದಂದು ನಗರದಲ್ಲಿ ಅತ್ಯಂತ ಭಕ್ತಿ, ಭಾವ ಮತ್ತು ಸಂಭ್ರಮದಿಂದ ಜರುಗಿತು. ನಗರದ ಪ್ರಮುಖ ಬೀದಿಗಳಲ್ಲಿ ಹಾಗೂ ದೇವಸ್ಥಾನದ ಆವರಣದಲ್ಲಿ ನಡೆದ ಈ ಮಹೋತ್ಸವದಲ್ಲಿ ವಿಶ್ವಕರ್ಮ ಸಮಾಜದ ನೂರಾರು ಬಾಂಧವರು ಭಾಗವಹಿಸಿದ್ದರು.

ಮೊದಲಿಗೆ ನಗರದ ಶ್ರೀ ವಿಶ್ವಕರ್ಮ ವೃತ್ತದಲ್ಲಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕೆಪಿಸಿಸಿ ಕೊಪ್ಪಳ ಜಿಲ್ಲಾ ಬ್ಲಾಕ್ ಕಾಂಗ್ರೆಸ್

ನಗರದ ಶ್ರೀ ವಿಶ್ವಕರ್ಮ ವೃತ್ತದಲ್ಲಿ ಮೊದಲಿಗೆ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ಕೆಪಿಸಿಸಿ ಕೊಪ್ಪಳ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಾನ್ಯ ಶ್ರೀ ಮಲ್ಲಿಕಾರ್ಜುನ ನಾಗಪ್ಪ ಅವರು ಸಮಾಜ ಬಾಂಧವರ ಸಮ್ಮುಖದಲ್ಲಿ ಪೂಜೆ ಸಲ್ಲಿಸಿದರು.
gangavathi bhagwan vishwakarma puja mahotsava 2026

ಅಧ್ಯಕ್ಷರಾದ ಮಾನ್ಯ ಶ್ರೀ ಮಲ್ಲಿಕಾರ್ಜುನ ನಾಗಪ್ಪ ನಾವೂರು ಅವರು ಸಮಾಜದ ಹಿರಿಯರು ಹಾಗೂ ಯುವಕರ ಸಮ್ಮುಖದಲ್ಲಿ ದೀಪ ಬೆಳಗಿಸಿ, ಭಗವಾನ್ ಶ್ರೀ ವಿಶ್ವಕರ್ಮರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು “ವಿಶ್ವಕರ್ಮ ಸಮಾಜವು ತನ್ನ ಕಾಯಕ, ಶ್ರದ್ಧೆ ಮತ್ತು ಕಲೆಯಿಂದ ದೇಶದ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಿದೆ. ಸಮಾಜ ಸಂಘಟಿತವಾದರೆ ಮಾತ್ರ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಸಬಲರಾಗಲು ಸಾಧ್ಯ. ಗಂಗಾವತಿಯಲ್ಲಿ ಸಮಾಜದ ಎಲ್ಲ ಬಾಂಧವರು ಒಂದಾಗಿರುವುದು ಶ್ಲಾಘನೀಯ” ಎಂದರು.

ಜಗದ್ಗುರು ಮೌನೇಶ್ವರ ದೇವಸ್ಥಾನದಲ್ಲಿ ಭಗವಾನ್ ಶ್ರೀ ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪ ನಮನ

ಗಂಗಾವತಿಯಲ್ಲಿ ನಡೆದ ಭಗವಾನ್ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ
ಗಂಗಾವತಿಯಲ್ಲಿ ನಡೆದ ಭಗವಾನ್ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ

ವೃತ್ತದಲ್ಲಿನ ಪೂಜೆಯ ನಂತರ ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನದಲ್ಲಿ ಮುಖ್ಯ ವೇದಿಕೆ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮಕ್ಕೆ ಮಾಜಿ

ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ಪರಣ್ಣ ಮುನವಳ್ಳಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಭಗವಾನ್ ಶ್ರೀ ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರು ಮಾತನಾಡಿ, “ಭಗವಾನ್ ಶ್ರೀ ವಿಶ್ವಕರ್ಮರು ಸೃಷ್ಟಿಯ ಮೊದಲ ಶಿಲ್ಪಿ, ವಿಶ್ವದ ಸಮಸ್ತ ನಿರ್ಮಾಣ ಕಾರ್ಯಕ್ಕೆ ಮೂಲ ಪುರುಷ. ಅವರ ಕುಶಲ ಕಲೆ, ತಂತ್ರಜ್ಞಾನ ಮತ್ತು ಸೃಜನಶೀಲತೆ ಇಂದಿಗೂ ನಮ್ಮ ಸಮಾಜಕ್ಕೆ ದಾರಿದೀಪವಾಗಿದೆ” ಎಂದು ಹೇಳಿದರು.

ವಿಶ್ವಕರ್ಮರು ಕೇವಲ ಒಂದು ಸಮಾಜಕ್ಕೆ ಸೀಮಿತವಾದ ದೇವರಲ್ಲ, ಅವರು ಇಡೀ ಸೃಷ್ಟಿಯ ಶಿಲ್ಪಿ. ದೇವಾನುದೇವತೆಗಳಿಗಾಗಿ ಅರಮನೆ, ಆಯುಧ ಮತ್ತು ವಿಮಾನಗಳನ್ನು ನಿರ್ಮಿಸಿದ ಕೀರ್ತಿ ವಿಶ್ವಕರ್ಮರಿಗೆ ಸಲ್ಲುತ್ತದೆ. ಅವರ ತಂತ್ರಜ್ಞಾನದ ಜ್ಞಾನವೇ ಇಂದಿನ ಆಧುನಿಕ ಇಂಜಿನಿಯರಿಂಗ್‌ಗೆ ಮೂಲವಾಗಿದೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ವಿಶ್ವಕರ್ಮ ಜಯಂತಿಯನ್ನು ಕಾರ್ಮಿಕರು, ಶಿಲ್ಪಿಗಳು, ಕಮ್ಮಾರರು, ಬಡಿಗೇರರು, ಸುತಾರರು ಅತ್ಯಂತ ಶ್ರದ್ಧೆಯಿಂದ ಆಚರಿಸುತ್ತಾರೆ.

ಸಮಾಜದ ಮುಖಂಡರ ದೊಡ್ಡ ಮಟ್ಟದ ಭಾಗಿ

ಈ ವಿಶ್ವಕರ್ಮ ಪೂಜಾ ಮಹೋತ್ಸವ ಗಂಗಾವತಿ ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಕೆ.ನಾಗೇಶಕುಮಾರ ಕಂಸಾಳೆ, ಗೌರವಾಧ್ಯಕ್ಷರಾದ ಮಂಜುನಾಥ್ ಸರಾಪ, ತಾಲ್ಲೂಕು ಅಧ್ಯಕ್ಷರಾದ ಶ್ರೀ ಕಾಳೇಶ್ ಬಡಿಗೇರ, ಉಪಾಧ್ಯಕ್ಷರಾದ ಗುರುನಾಥ ಬಡಿಗೇರ, ಕಾರ್ಯದರ್ಶಿ ಚಿದಂಬರ, ಖಜಾಂಚಿ ದೇವಪ್ಪ ಬಡಿಗೇರ, ಸಿ.ವಿ.ಮಾನಪ್ಪಾಚಾರ, ಗುಂಡಪ್ಪಾಚಾರ, ಸೋಮಶೇಖರಪ್ಪ ಸುತಾರ, ಜಕಣಾಚಾರಿ, ಪಂಪಣ್ಣ, ವಿನಾಯಕ ಆಚಾರ್, ಮಂಜುನಾಥ್ ಪತ್ತಾರ್, ಕೃಷ್ಣಮೂರ್ತಿ ಪತ್ತಾರ್, ಹನುಮೇಶ್ ಬಡಿಗೇರ, ಬಸವರಾಜ್ ಬಡಿಗೇರ, ಸಿದ್ದೇಶ್ ಭಾಸ್ಕರಾಚಾರ್, ಗುರುರಾಜ್ ಬಡಿಗೇರ, ಬಸವರಾಜ್ ಓಂ ಕುಮಾರ್, ಶರಣಪ್ಪ, ದೇವೇಂದ್ರ ಮಲ್ಲೂರು, ಮೌನೇಶ್ ಹಂಚಿನಾಳ, ವೀರೇಶ್ ಮಾಚಳ್ಳಿ, ಪ್ರಶಾಂತ್ ಸುತಾರ್, ಗುರುರಾಜ್ ಸುತಾರ್, ಪ್ರಶಾಂತ್ ಸೋನಾರ್ ಶಿಲ್ಪಿ, ಶಶಿಧರ ವಿರುಪಾಕ್ಷಿ ಬಡಿಗೇರ, ಮೌನೇಶ್ ಮುಸ್ಲಾಪುರ್, ಪ್ರಭು ಸುತಾರ್, ದೇವೇಂದ್ರ ಶ್ರೀನಿವಾಸ್, ಮಂಜುನಾಥ್ ಅಳವುಂಡಿ, ಮೌನೇಶ್ ಬಡಿಗೇರ, ಕಿರಣ್ ಕುಮಾರ್ ಬಡಿಗೇರ, ಮನೋಹರ್ ಹಣವಾಳ, ಶ್ರೀಧರ ಹಣವಾಳ, ವಾಸು ಬಡಿಗೇರ, ಈರಣ್ಣಾಚಾರ, ವೀರೇಶ್ ಬಡಿಗೇರ, ವಿನಯ್ ರವಿಕುಮಾರ್ ಉಪಸ್ಥಿತರಿದ್ದರು.

ಇದೇ ವೇಳೆ ಮಹಿಳಾ ಘಟಕದ ಪ್ರಮುಖರಾದ ವಿಜಯಲಕ್ಷ್ಮಿ, ಉಮಾ ಕಾಳೇಶ್, ಉಮಾ ಮಹಾಲಿಂಗಮ್ಮ, ದ್ರಾಕ್ಷಾಯಿಣಿ, ಶೃತಿ, ಕಲಾವತಿ, ಗೌರಮ್ಮ, ಶ್ರೀದೇವಿ, ಪದ್ಮಾ ಸೇರಿದಂತೆ ಸಮಾಜದ ಯುವ ಮಿತ್ರರು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. https://aratt.ai/@vishwaroopa_news_blog

Leave a Reply

Optimized by Optimole

Discover more from VISHWAROOPA NEWS BLOG

Subscribe now to keep reading and get access to the full archive.

Continue reading