ಸೆಪ್ಟೆಂಬರ್ 28, 2026

ಕಾವ್ಯ ಗಾನ ನಾಟ್ಯ ಕುಂಚ ಕಾರ್ಯಕ್ರಮ ಹಾಸನದಲ್ಲಿ – ಗಣಪತಿ ಪೆಂಡಾಲ್ ನಲ್ಲಿ ಸಂಭ್ರಮ

ಕಾವ್ಯ ಗಾನ ನಾಟ್ಯ ಕುಂಚ ಕಾರ್ಯಕ್ರಮ ಹಾಸನ ನಗರದ ಬಸ್ ಸ್ಟ್ಯಾಂಡ್ ರಸ್ತೆಯ ಶ್ರೀ ಗಣಪತಿ ಪೆಂಡಾಲ್ ನಲ್ಲಿ ಅದ್ದೂರಿಯಾಗಿ ನಡೆಯಿತು. ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಆಯೋಜಿಸಿದ್ದ ಈ ಕಾವ್ಯ ಗಾನ ನಾಟ್ಯ ಕುಂಚ ಕಾರ್ಯಕ್ರಮ ಹಾಸನದ ಸಾಂಸ್ಕೃತಿಕ ಪ್ರೇಮಿಗಳ ಮನ ಗೆದ್ದಿತು.

ಹಾಸನ: ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ, ಶಾಂತಲಾ ಗ್ರೂಪ್ ಆರ್ಟ್ ಹಾಸನ ಮತ್ತು ಶ್ರೀ ಮಹಾ ಗಣಪತಿ ಸೇವಾ ಸಮಿತಿ ವತಿಯಿಂದ ಇನ್ಷೂರೆನ್ಸ್ ಪುಟ್ಟೇಗೌಡ ಟ್ರಸ್ಟ್ ಸ್ಮರಣಾರ್ಥ ಹಾ

hassan kavya gaana natya kuncha karyakrama at ganapati pendal
ಹಾಸನದ ಗಣಪತಿ ಪೆಂಡಾಲ್ ನಲ್ಲಿ ನಡೆದ ಕಾವ್ಯ ಗಾನ ನಾಟ್ಯ ಕುಂಚ ಕಾರ್ಯಕ್ರಮ

ಸನ ನಗರ ಬಸ್ ಸ್ಟ್ಯಾಂಡ್ ರಸ್ತೆಯಲ್ಲಿನ ಶ್ರೀ ಗಣಪತಿ ಪೆಂಡಾಲ್ ನಲ್ಲಿ ಆಯೋಜಿಸಿದ್ದ ಕಾವ್ಯ ಗಾನ ನಾಟ್ಯ ಕುಂಚ ಕಾರ್ಯಕ್ರಮ ಪ್ರೇಕ್ಷಕರ ಮನ ಸೆಳೆಯಿತು.

 

 

ಕವಿತೆಗೆ ರಾಗ, ರಾಗಕ್ಕೆ ಚಿತ್ರ – ವಿಭಿನ್ನ ಪ್ರಯೋಗಕ್ಕೆ ಚಪ್ಪಾಳೆ

ಈ ಕಾರ್ಯಕ್ರಮದ ವಿಶೇಷತೆಯೆಂದರೆ, ಹಾಸನ ಜಿಲ್ಲೆಯ ಸ್ಥಳೀಯ ಕವಿಗಳು ರಚಿಸಿದ ಕವನಗಳಿಗೆ ಗಾಯಕರು

ಸ್ಥಳದಲ್ಲೇ ಕೆಲವೇ ನಿಮಿಷಗಳಲ್ಲಿ ರಾಗ ಸಂಯೋಜಿಸಿ ಹಾಡುವಾಗ, ಚಿತ್ರ ಕಲಾವಿದರು ಪ್ರೇಕ್ಷಕರ ಎದುರೇ ಕಾವ್ಯದ ಕಲ್ಪನೆಯನ್ನು ಕುಂಚದಲ್ಲಿ ಚಿತ್ರಿಸಿದರು. ಕಾವ್ಯ, ಗಾನ ಮತ್ತು ಚಿತ್ರಕಲೆಯ ತ್ರಿವೇಣಿ ಸಂಗಮ ನೆರೆದಿದ್ದ ಸಾಹಿತ್ಯಾಸಕ್ತರಿಗೆ ಹೊಸ ಅನುಭವ ನೀಡಿತು.

 

ಕಾವ್ಯ ರಚಿಸಿದ ಸಾಹಿತಿಗಳು

ಕಾರ್ಯಕ್ರಮದಲ್ಲಿ ಕವಿಗಳಾದ ಜಿ. ಮಲ್ಲೇಶ್, ಗೊರೂರು ಅನಂತರಾಜು, ಎಸ್.ಎಸ್. ಪುಟ್ಟೇಗೌಡ, ಜಿ.ಆರ್.ಶ್ರೀಕಾಂತ್, ವೈ.ಬಿ. ಕಾಂತರಾಜು ಮತ್ತು ಕವಯಿತ್ರಿಯರಾದ ಗಿರಿಜಾಂಬ, ಸುಶೀಲ ಸೋಮಶೇಖರ್, ಸುಶೀಲಾ ಎಸ್, ಕಲಾವತಿ ಮಧುಸೂಧನ್ ಅವರುಗಳು ಭಾಗವಹಿಸಿ ಅವರ ಕಾವ್ಯಗಳು ಪ್ರಸ್ತುತಗೊಂಡವು.

ರಾಗ ಸಂಯೋಜಿಸಿ ಹಾಡಿದ ಗಾಯಕರು

ಕವಿಗಳ ಕವನಗಳಿಗೆ ರಾಗ ಸಂಯೋಜಿಸಿ ವೇದಿಕೆಯಲ್ಲಿ ಗಾಯಕರಾದ ಯೋಗೇಂದ್ರ ದುದ್ದ, ಶ್ರೀಕಾಂತ್, ಕಲಾವತಿ ಮಧುಸೂಧನ್, ಉಮಾ ವಿಶ್ವನಾಥ್, ಶೋಭಾ ಹರೀಶ್ ಅವರು ಸುಮಧುರವಾಗಿ ಹಾಡಿ  ನೆರೆದ ಪ್ರೇಕ್ಷಕರನ್ನು ರಂ ಜಿಸಿದರು.

ಕುಂಚದಲ್ಲಿ ಮೂಡಿದ ಕಾವ್ಯದ ಕಲ್ಪನೆ

ಚಿತ್ರಕಲಾವಿದರಾದ ದೇವರಾಜು, ಚಂದ್ರಪ್ರಭ, ಬಸವರಾಜು, ಶಿವಕುಮಾರ್, ಆರ್. ಸ್ಪೂರ್ತಿ, ಸಿಂಚನ, ವೃತಿಕ, ಯಶ್, ಹೇಮಲತಾ ಅವರು ಸನ್ನಿವೇಶವನ್ನು ಸುಂದರವಾಗಿ ಕಲಾಕುಂಚದಲ್ಲಿ ತಮ್ಮ ಕಲೆಯ ಪ್ರತಿಭೆಯನ್ನು ಮೂಡಿಸಿದರು.

ನೃತ್ಯ ಪ್ರದರ್ಶನಗಳಿಂದ ಕಾರ್ಯಕ್ರಮಕ್ಕೆ ಮೆರಗು

ರೈತನ ಬವಣೆ ಬಿಂಬಿಸಿದ ನೃತ್ಯ

ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ವಸತಿ ಗೃಹದ 2ನೇ ವರ್ಷದ ಬಿ.ಎಡ್ ವಿದ್ಯಾರ್ಥಿನಿಯರ ತಂಡ ರೈತನ ಬವಣೆಯನ್ನು ಬಿಂಬಿಸುವ ಸಂದೇಶಪೂರ್ಣ ಗೀತೆಗೆ ಉತ್ತಮವಾಗಿ ನೃತ್ಯವನ್ನು ಪ್ರದರ್ಶಿಸಿ ಗಮನ ಸೆಳೆದರು.

ಸ್ಮಿತಾ ಹೇಮೇಶ್, ಸುನೀತಾ ಕಿರಣ್ ಅವರು ನಾಡು ನುಡಿ ಕುರಿತಾದ ನೃತ್ಯ ರೂಪದಲ್ಲಿ ಪ್ರದರ್ಶನ ಮಾಡಿದರು. ಪುಟಾಣಿಗಳಾದ ಭುವನೇಶ್ವರಿ, ಕಿತ್ತೂರು ಚೆನ್ನಮ್ಮ ವೇಷದಲ್ಲಿ ರಂಜಿಸಿದರು. ಕಲಾವತಿ ಮಧುಸೂಧನ್ ಅವರು ಕರೋಕೆ ಹಾಡುಗಳಿಂದ ಎಲ್ಲರನ್ನೂ ರಂಜಿಸಿದರು.

‘ನೆನಪಿನ ಅಂಗಳದಲ್ಲಿ’ ಕೃತಿ ಬಿಡುಗಡೆ

ಇದೇ ಸಂದರ್ಭದಲ್ಲಿ ಉದ್ದೂರಹಳ್ಳಿ ಇನ್ಸೂರೆನ್ಸ್ ಪುಟ್ಟೇಗೌಡ ಟ್ರಸ್ಟ್ ವತಿಯಿಂದ ಕ್ಯಾಪ್ಟನ್ ಜಯರಾಮ್ ರವರ ‘ನೆನಪಿನ ಅಂಗಳದಲ್ಲಿ’ ಕೃತಿಯನ್ನು ಶ್ರೀ ಗಣಪತಿ ಸೇವಾ ಸಮಿತಿಯ ಅಧ್ಯಕ್ಷರಾದ ನಾಗರಾಜ್ ಅವರು ಬಿಡುಗಡೆ ಮಾಡಿದರು.

ಕೃತಿ ಕುರಿತು ಹಿರಿಯ ಸಾಹಿತಿ ಟಿ.ಹೆಚ್. ಅಪ್ಪಾಜಿಗೌಡರು ಮಾತನಾಡಿದರು. ಕ್ಯಾಪ್ಟನ್ ಜಯರಾಮ್ ಸೇವಾ ಯೋಗಿ ಲಾವಣಿಯನ್ನು ಉಮಾ ವಿಶ್ವನಾಥ್ ಸುಂದರವಾಗಿ ಹಾಡಿದರು.

ಹಾಸನದ ಸಾಂಸ್ಕೃತಿಕ ಲೋಕದಲ್ಲಿ ಇಂತಹ ಪ್ರಯೋಗಗಳು ಹೊಸತನವನ್ನು ತರುತ್ತವೆ, ಜಿಲ್ಲೆಯ ಸಾಂಸ್ಕೃತಿಕ ಹಿರಿಮೆ ಇನ್ನೂ ಹೆಚ್ಚಲಿ ಎಂದು ಭಾಗವಹಿಸಿದ್ದ ಕವಿ, ಸಾಹಿತಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ  ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.https://aratt.ai/@vishwaroopa_news_blog

ಇದನ್ನೂ ಓದಿ: ಹಾಸನ ಜಿಲ್ಲೆಯ ಇತ್ತೀಚಿನ ಸಾಂಸ್ಕೃತಿಕ ಸುದ್ದಿಗಳು

Leave a Reply

Optimized by Optimole

Discover more from VISHWAROOPA NEWS BLOG

Subscribe now to keep reading and get access to the full archive.

Continue reading