ಅಕ್ಟೋಬರ್ 8 ರಂದು ಇಸ್ರೋ ವಸ್ತುಪ್ರದರ್ಶನ ನಡೆಯಲಿರುವ ಗಂಗಾವತಿ ಲಯನ್ಸ್ ಶಾಲೆಯ ಆವರಣ.
“ವಿಶ್ವ ಬಾಹ್ಯಾಕಾಶ ಸಪ್ತಾಹ-2026”

ಗಂಗಾವತಿ ವಿಶ್ವ ಬಾಹ್ಯಾಕಾಶ ಸಪ್ತಾಹ 2026 ಕಾರ್ಯಕ್ರಮವು ಅಕ್ಟೋಬರ್ 8 ರಂದು ನಗರದ ಲಯನ್ಸ್ ಶಾಲೆ ಆವರಣದಲ್ಲಿ ನಡೆಯಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಯು.ಆರ್. ರಾವ್ ಉಪಗ್ರಹ ಕೇಂದ್ರದ ಜಂಟಿ ಆಶ್ರಯದಲ್ಲಿ ಈ ಗಂಗಾವತಿ ವಿಶ್ವ ಬಾಹ್ಯಾಕಾಶ ಸಪ್ತಾಹ 2026 ಆಯೋಜಿಸಲಾಗಿದೆ.”
ವಿಶ್ವದ ಅತಿದೊಡ್ಡ ಬಾಹ್ಯಾಕಾಶ ಉತ್ಸವ ಇದಾಗಿದ್ದು, ಈ ಬಾರಿ ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿಗಳಿಗೆ ನೇರವಾಗಿ ಇಸ್ರೋ ಸಂಸ್ಥೆಯ ವಿಜ್ಞಾನವನ್ನು ತಿಳಿಯಲು ಈಗ ಸುವರ್ಣಾವಕಾಶವಾಗಿ ಒದಗಿ ಬಂದಿದೆ.
“ವಿಶ್ವ ಬಾಹ್ಯಾಕಾಶ ಸಪ್ತಾಹ-2026” ರ ಥೀಮ್: ರಾಕೆಟ್ ಕ್ರಾಂತಿ ಆಹ್ವಾನ ಪತ್ರಿಕೆ ಬಿಡುಗಡೆ

ಇಸ್ಟೋ ಸಂಸ್ಥೆಯ ಈ ಸಮಾರಂಭದ ಆಹ್ವಾನ ಪತ್ರಿಕೆ ಹಾಗೂ ಬಿತ್ತಿ ಪತ್ರಗಳನ್ನು ಲಯನ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಡಾ. ಜಿ. ಚಂದ್ರಪ್ಪ, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ದೇವರಾಜ್ ಹಾಗೂ ಲಯನ್ಸ್ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಚಂದ್ರೇಗೌಡ ಮಾಲಿ ಪಾಟೀಲ್ ಅವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಲಯನ್ಸ್ ಶಿಕ್ಷಣ ಸಂಸ್ಥೆಯ ಅಭಿಷೇಕ್, ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಜಗನ್ನಾಥ ದಾಸ್, ಲಯನ್ಸ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಗುರುಪಾದಯ್ಯ ಹಿರೇಮಠ, ಶಂಕರ ಹೊಸಳ್ಳಿ, ನೇಕಂಟಿ ಹರೀಶ ಸೇರಿದಂತೆ ಹಲವರು ಉಪಸ್ಥಿತರಿದ್ದರು. http://ಗಂಗಾವತಿ ವಿಶ್ವ ಬಾಹ್ಯಾಕಾಶ ಸಪ್ತಾಹ
ಈ ಬಾರಿಯ ಥೀಮ್: “ರಾಕೆಟ್ ಕ್ರಾಂತಿ” (Rocket Revolution)
ಪ್ರತಿ ವರ್ಷ ಅಕ್ಟೋಬರ್ 4 ರಿಂದ 10 ರವರೆಗೆ ವಿಶ್ವ ಬಾಹ್ಯಾಕಾಶ ಸಪ್ತಾಹ ಆಚರಿಸಲಾಗುತ್ತದೆ. ಅಕ್ಟೋಬರ್ 4, 1957 ರಂದು ಸ್ಪುಟ್ನಿಕ್-1 ಉಡಾವಣೆ ಹಾಗೂ ಅಕ್ಟೋಬರ್ 10, 1967 ರಂದು ಬಾಹ್ಯಾಕಾಶ ಒಪ್ಪಂದ ಜಾರಿಗೆ ಬಂದ ದಿನದ ಸಂಕೇತವಾಗಿ ಈ http://ಗಂಗಾವತಿ ವಿಶ್ವ ಬಾಹ್ಯಾಕಾಶ ಸಪ್ತಾಹ ದಿನಗಳನ್ನು ಆಯ್ಕೆ ಮಾಡಲಾಗಿದೆ.
World Space Week 2026 Theme ಅಧಿಕೃತವಾಗಿ “Rocket Revolution” ಎಂದು ವಿಶ್ವಸಂಸ್ಥೆ ಮತ್ತು World Space Week Association ಘೋಷಿಸಿದೆ. ಮರುಬಳಕೆ ಮಾಡಬಹುದಾದ ರಾಕೆಟ್ಗಳು, ಖಾಸಗಿ ಉಡಾವಣಾ ಸಂಸ್ಥೆಗಳು ಬಾಹ್ಯಾಕಾಶ ಕ್ಷೇತ್ರಕ್ಕೆ ತಂದಿರುವ ಕ್ರಾಂತಿಯೇ ಈ ಥೀಮ್ನ ಮುಖ್ಯ ಉದ್ದೇಶ ಆಗಿದೆ.
“ವಿಶ್ವ ಬಾಹ್ಯಾಕಾಶ ಸಪ್ತಾಹ-2026” ರಲ್ಲಿ ಏನೇನಿರಲಿದೆ?
ಒಂದು ದಿನದ ಈ ವಿಶೇಷ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ:
- ಇಸ್ರೋದ ವಿವಿಧ ಉಪಗ್ರಹಗಳ ಮಾದರಿಗಳು ಮತ್ತು ರಾಕೆಟ್ ಮಾದರಿಗಳ ಪ್ರದರ್ಶನ
- ಬಾಹ್ಯಾಕಾಶ ವಿಜ್ಞಾನ ಕುರಿತು ಆಡಿಯೋ-ವಿಡಿಯೋ ಮೂಲಕ ಆಕರ್ಷಕ ಉಪನ್ಯಾಸ
- ವಿದ್ಯಾರ್ಥಿಗಳಿಗೆ ರಸಪ್ರಶ್ನೆ (Quiz Competition) ಮತ್ತು ವಿಜ್ಞಾನ ವಸ್ತುಪ್ರದರ್ಶನ
- ಇಸ್ರೋ ವಿಜ್ಞಾನಿಗಳೊಂದಿಗೆ ಸಂವಾದ
ಕಾರ್ಯಕ್ರಮದ ಸಂಪೂರ್ಣ ಸಭಾಂಗಣ, ಪ್ರದರ್ಶನ ವಿಭಾಗ ಹಾಗೂ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳ ವ್ಯವಸ್ಥೆಯನ್ನು ಲಯನ್ಸ್ ಶಾಲೆಯ ಆಡಳಿತ ಮಂಡಳಿ ವಹಿಸಿಕೊಂಡಿದೆ.
ಮೇಲ್ವಿಚಾರಣೆ ಸಮಿತಿ
http://ಗಂಗಾವತಿ ವಿಶ್ವ ಬಾಹ್ಯಾಕಾಶ ಸಪ್ತಾಹ
ಈ ಬೃಹತ್ ಕಾರ್ಯಕ್ರಮದ ಮೇಲ್ವಿಚಾರಣೆಯನ್ನು WSW-2026 ಅಪೆಕ್ಸ್ ಸಮಿತಿ ಅಧ್ಯಕ್ಷರಾದ ಮಧುಸೂಧನ ಸಿ.ಎಸ್., ಅಧ್ಯಕ್ಷೆ ಪ್ರತಿಭಾ ಹೆಬ್ಬಾರ್ ಪಿ., ಸದಸ್ಯ ಗೋವಿಂದರಾಜ ಟಿ.ಎಸ್. ಹಾಗೂ ಸದಸ್ಯ ಕಾರ್ಯದರ್ಶಿ ಮೋಹನ್ ಕುಮಾರ್ ಟಿ.ಎಂ. ನಿರ್ವಹಿಸುತ್ತಿದ್ದಾರೆ.
ಈ ಕಾರ್ಯಕ್ರಮದಲ್ಲಿ ಶಾಲೆ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇಸ್ರೋ ಸಂಸ್ಥೆಯ ಈ ವಿಜ್ಞಾನ ವಸ್ತುಪ್ರದರ್ಶನ ಹಾಗೂ ರಸಪ್ರಶ್ನೆ ಕಾರ್ಯಕ್ರಮದ https://aratt.ai/@vishwaroopa_news_blog ಸದುಪಯೋಗ ಪಡೆದುಕೊಳ್ಳಬೇಕೆಂದು ಆಡಳಿತ ಮಂಡಳಿ ಮನವಿ ಮಾಡಿದೆ.





