
ಗಾನಗಂಗಾ ಕನ್ನಡ ಕೋಗಿಲೆ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ.
ಮಾನಸಿಕ ನೆಮ್ಮದಿಗೆ ಸಂಗೀತಪೂರಕ: ಗಂಗಾವತಿ ಬಿ ಪ್ರಾಣೇಶ್.
ಗಂಗಾವತಿ: ಗಾನಕ್ಕೆ ಒಲಿಯದ ಮನಸೇ ಇಲ್ಲ. ಎಂಬ ಮಾತಿನಂತೆ ಮಾನಸಿಕ ನೆಮ್ಮದಿಯ ಬದುಕಿಗೆ ಸಂಗೀತ ಪೂರಕವಾಗಿದೆ ಎಂದು ಅಂತರಾಷ್ಟ್ರೀಯ ಹಾಸ್ಯ ಕಲಾವಿದರಾದ ಗಂಗಾವತಿ ಬಿ ಪ್ರಾಣೇಶ್ ಹೇಳಿದರು.
ಅವರು ಜುಲೈ-26 ಭಾನುವಾರ, ಗಂಗಾವತಿ ಭಾರತೀಯ ವೈದ್ಯಕೀಯ ಭವನದಲ್ಲಿ ಪರಿಸರ ಸೇವಾ ಟ್ರಸ್ಟ್ ಹೀರೆ
ಬೆಣಕಲ್ ಮೋರೆರ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ ಗಾನಗಂಗಾ ಕನ್ನಡ ಗಾನಕೋಗಿಲೆ ರಾಜ್ಯಮಟ್ಟದ ಪ್ರಶಸ್ತಿ ಸಮಾರಂಭವನ್ನು ಎಸ್ ಜಾನಕಿ ಅಮ್ಮನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಉದ್ಘಾಟಿಸಿ ಮಾತನಾಡಿದರು.
ಸಂಗೀತವನ್ನು ಸುಲಭವಾಗಿ ಕಲಿಯಬೇಕೆಂಬ ಆಸೆ ಹೊಂದಿರುವ ಕಲಾವಿದರುಗಳಿಗೆ ಕರೋಕೆ ಹಾಡುಗಳು ಅತ್ಯಂತ ಸಹಕಾರಿಯಾಗಿದೆ ಎಂದು ತಿಳಿಸಿದರು.
ಬೆಂಗಳೂರು ಸಿಐಡಿ ವಿಭಾಗದ ಉಪ ಅಧೀಕ್ಷಕ ಮಹೇಶ್ ಗೌಡ್ರು ಮಾತನಾಡಿ ದೈನಂದಿನ ಬದುಕಿನ ಒತ್ತಡದ ನಿವಾರಣೆಗೆ ಸಂಗೀತ ಹಾಡುವುದು ಹಾಗೂ ಆಲಿಸುವುದು ಈ ಕ್ರಿಯೆಯಿಂದ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ ಸಕಲ ರೋಗಗಳನ್ನು ನಿವಾರಿಸುವ ಶಕ್ತಿ ಸಂಗೀತಕ್ಕೆ ಇದೆ ಎಂದು ತಿಳಿಸಿದರು.
ಚನ್ನಗಿರಿ ಡಿವೖ ಎಸ್.ಪಿ ರುದ್ರೇಶ್ ಉಜ್ಜನಕೊಪ್ಪ ಮಾತನಾಡಿ ಗಂಗಾವತಿ ಭತ್ತದ ಕಣಜವಾದರೂ ಕಲೆ ಸಾಹಿತ್ಯ ಸಂಗೀತ ಈ ನೆಲದಲ್ಲಿ ಅಳವಾಗಿದೆ. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರನ್ನ ಬೆಳ್ಳಿ ತುಲಾಭಾರ ಮಾಡಿದ ಕೀರ್ತಿ ಗಂಗಾವತಿಯ ಜನತೆಗೆ ಸಲ್ಲುತ್ತದೆ ಎಂದು ತಿಳಿಸಿದರು.
ಒಟ್ಟು ರಾಜ್ಯದ ನಾನಾ ಭಾಗಗಳಿಂದ 20 ಸಂಗೀತ ಕಲಾವಿದರನ್ನು ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಗೊಳಿಸಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಪ್ರಮುಖವಾಗಿ ರುದ್ರೇಶ್ ಉಜ್ಜನಕೊಪ್ಪ, ಡಿ.ವೈ.ಎಸ್ಎ.ಪಿ ಚನ್ನಗಿರಿ, ಹಿರಿಯ ಪೊಲೀಸ್ ಅಧಿಕಾರಿಗಳಾದ ಮಹೇಶ್ ಗೌಡ ಉಪ ಅಧೀಕ್ಷಕರು.ಸಿಐಡಿ.. ಬಿ ಇ ಓ ನಟೇಶ್, ರಮೇಶ್ ಲಮಾಣಿ ತೃಪ್ತಿ ಧಾರವಾಡ ಪ್ರಕಾಶ್ ಪಾಟೀಲ್ ಹೀಗೆ ಇತರರು ಸನ್ಮಾನಿತಗೊಂಡರು. ಈ ಸಂದರ್ಭದಲ್ಲಿ ಆಯ್ಕೆಗೊಂಡ ಹಾಡುಗಳನ್ನು ಪ್ರಸ್ತುತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಶಿವರಾಮೇಗೌಡ ಜೋಗದ ನಾರಾಯಣಪ್ಪ ನಾಯಕ್. ಮತ್ತಿತರರು ಉಪಸ್ಥಿತರಿದ್ದರು. ಒಟ್ಟಾರೆ ಅತ್ಯಂತ ಅರ್ಥಪೂರ್ಣವಾದ ಕಾರ್ಯಕ್ರಮ ಜರುಗಿಸಿದ ಕೀರ್ತಿ ಮಂಜುನಾಥ ಗುಡ್ಲಾನೂರ ಅವರಿಗೆ ಸಲ್ಲುತ್ತದೆ. https://aratt.ai/@vishwaroopa_news_blog
