ಸೆಪ್ಟೆಂಬರ್ 28, 2026
  • ವಡ್ಡರ ಹಟ್ಟಿ ಕ್ಯಾಂಪಿನ ಈಶ್ವರ ದೇವಸ್ಥಾನದಲ್ಲಿ ಆಯೋಜನೆ

  • ಆ. 29ರಂದು ಸಮರ್ಪಣಾ ಸಮಾರಂಭ

ಗಂಗಾವತಿ: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ತಾಲೂಕಿನ ವಡ್ಡರಹಟ್ಟಿಕ್ಯಾಂಪಿನ ಈಶ್ವರ ದೇವಸ್ಥಾನದಲ್ಲಿ ರಾಯರ ಲಕ್ಷ ಲೇಖನ ಯಜ್ಞ ಆಯೋಜಿಸಲಾಗಿದೆ ಎಂದು ಅರ್ಚಕ ಗುರಾಚಾರ್ ತಿಳಿಸಿದ್ದಾರೆ.

ಈ ಕುರಿತು ಅವರು ಶುಕ್ರವಾರ ಮಾಹಿತಿ ನೀಡಿದ್ದು, ಇದಕ್ಕಾಗಿ ಪುಸ್ತಕ ಮುದ್ರಿಸಲಾಗಿದ್ದು, ಒಂದು ಪುಟದಲ್ಲಿ 10 ಸಾಲುಗಳಂತೆ 52 ಪುಟಗಳಲ್ಲಿ ಓಂ ಶ್ರೀ ರಾಘವೇಂದ್ರಾಯ ನಮಃ ಓಂ ಎಂದು 520 ಸಾಲು ಬರೆದು ಕೊಡಬೇಕು. ಮಹಿಳೆಯರು ಶ್ರೀ ರಾಘವೇಂದ್ರಾಯ ನಮಃ ಎಂದಷ್ಟೇ ಬರೆದು ಕೊಡಬೇಕು ಎಂದು ತಿಳಿಸಿದ್ದಾರೆ.

ಆ.29 ರಂದು ಲೇಖನ ಯಜ್ಞದ ಸಮರ್ಪಣಾ ಸಮಾರಂಭ ನಡೆಯಲಿದ್ದು, ಭಕ್ತರು ಬರೆದುಕೊಟ್ಟ ಪುಸ್ತಕಗಳಿಂದ ರಾಯರ ವೃಂದಾವನ ನಿರ್ಮಿಸಿ ಅಲಂಕರಿಸಿ, ಲಕ್ಷ ಪುಷ್ಪಗಳಿಂದ ಅರ್ಚನೆ ಸಲ್ಲಿಸಲಾಗುವುದು. ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನೆರವೇರಿಸಿದ ನಂತರ ಅನ್ನ ಸಂತರ್ಪಣೆ ಏರ್ಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳಲು ಅಪೇಕ್ಷಿಸುವವರು 7899620851, 9481661824, 9844546458 ಸಂಖ್ಯೆಗಳಿಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ತಿಳಿಸಿದ್ದಾರೆ. https://aratt.ai/@vishwaroopa_news_blog

Leave a Reply

Optimized by Optimole

Discover more from VISHWAROOPA NEWS BLOG

Subscribe now to keep reading and get access to the full archive.

Continue reading