ಗಂಗಾವತಿ: ಗಂಗಾವತಿಯ ಅನಂತ ಪ್ಲೇಟ್ ಬ್ಯಾಂಕ್‌ಗೆ ಮಾಜಿ ಮುಖ್ಯಮಂತ್ರಿ ದಿ|| ಜೆ.ಎಚ್. ಪಟೇಲ್ ಅವರ ಪುತ್ರ ಹಾಗೂ ಪ್ರಾಮಾಣಿಕ ರಾಜಕಾರಣಿ, ಚಿಂತಕ ಮಹಿಮಾ ಪಟೇಲ್ ಅವರು ಭೇಟಿ ನೀಡಿದರು.
ಅವರ ಜೊತೆಗೆ ದಾವಣಗೆರೆಯ ಸರ್ವೋದಯ ಸಮುದಾಯದ ಪ್ರಧಾನ ಕಾರ್ಯದರ್ಶಿ ಹಾಗೂ ಸಾಹಿತಿಗಳಾದ ಶಿವನಕೆರೆ ಬಸವಲಿಂಗಪ್ಪ, ಖ್ಯಾತ ಹಾಸ್ಯ ಭಾಷಣಕಾರರಾದ ಗಂಗಾವತಿ ಪ್ರಾಣೇಶ, ಖ್ಯಾತ ಇತಿಹಾಸ ಸಂಶೋಧಕರಾದ ಡಾ. ಶರಣಬಸಪ್ಪ ಕೋಲ್ಕಾರ್, ಮುಖಂಡರಾದ ತಿಪ್ಪೇರುದ್ರಸ್ವಾಮಿ, ಹೆಚ್. ಗಿರೇಗೌಡ, ರಾಜು ನಾಯಕ, ಖ್ಯಾತ ವೈದ್ಯರಾದ ಡಾ. ಹೆಚ್. ಮಲ್ಲನಗೌಡ, ಅನಂತ ಪ್ಲೇಟ್ ಬ್ಯಾಂಕ್ ಸಂಚಾಲಕರಾದ ಡಾ|| ಶಿವಕುಮಾರ್ ಮಾಲಿಪಾಟೀಲ್, ಪ್ರಹ್ಲಾದ್ ಕುಲಕರ್ಣಿ, ಮೈಲಾರಪ್ಪ ಬೂದಿಹಾಳ, ಹರನಾಯಕ ಇತರರಿದ್ದರು.
ಇದೇ ಸಂದರ್ಭದಲ್ಲಿ ದಾನಿಗಳಾದ ಕೆ. ಪರಶುರಾಮ, ಡಾ. ಶರಣಬಸವ, ಡಾ. ಶಶಿಧರ, ಜಂಬಣ್ಣ ಐಲಿ, ರಾಮನಾಥ, ವೀರೇಶ ಅರಕೇರಿ, ಗುರುರಾಜ ಕಲ್ಬುರ್ಗಿ, ಟಿ. ಆಂಜನೇಯ ಅವರು ಪ್ಲೇಟ್ ಬ್ಯಾಂಕ್‌ಗೆ ದಾನ ಮಾಡಿದ ನೂರಕ್ಕೂ ಹೆಚ್ಚು ಸ್ಟೀಲ್ ಪ್ಲೇಟ್ಸ್, ಕಪ್ಸ್, ಸ್ಟೀಲ್ ಗ್ಲಾಸಸ್ ಗಳನ್ನು ಅತಿಥಿಗಳ ಸಮ್ಮುಖದಲ್ಲಿ ಪ್ಲೇಟ್ ಬ್ಯಾಂಕ್‌ಗೆ ಹಸ್ತಾಂತರಿಸಲಾಯಿತು.
ಪ್ಲೇಟ್ ಬ್ಯಾಂಕಿನ ಉಸ್ತುವಾರಿಗಳಾದ ಶಿವದೀಪಕ್ ಹಾದಿಮನಿ, ಆರ್. ಕೃಷ್ಣ ಬುಡ್ಗಜಂಗಮ, ಸಂದೇಶ ಹಿರೇಮಠ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಿಮಾ ಪಟೇಲ್ ಅವರು ನಿರ್ಮಲ ತುಂಗಭದ್ರಾ ಅಭಿಯಾನದ ಪಾದಯಾತ್ರೆ ಮಾಡಿದ್ದೆವು. ಅದರ ಮುಂದುವರಿದ ಭಾಗವಾಗಿ ಪ್ಲೇಟ್ ಬ್ಯಾಂಕ್ ಮಾಡಿ ಗಂಗಾವತಿ ನಗರದ ಪರಿಸರ ಕಾಪಾಡುವ ಮಹತ್ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಊರಿನ ಜನರು ತಮ್ಮ ಶುಭ ಸಮಾರಂಭಗಳಗೆ ಉಚಿತವಾಗಿ ಸಿಗುವ ಸ್ಟೀಲ್ ಪ್ಲೇಟ್ ಗಳನ್ನು ಬಳಸಲು ಮುಂದೆ ಬರಬೇಕೆಂದು ಕರೆ ನೀಡಿದರು. https://aratt.ai/@vishwaroopa_news_blog





