ಮೌನ ಸಾಧಕರಾಗಿ ಒಳಿತನ್ನು ಮಾಡಿ: ಹೆಚ್.ಎಸ್. ಪ್ರತಿಮಾ ಹಾಸನ್

ಮೌನ ಸಾಧಕರಾಗಿ ಒಳಿತನ್ನು ಮಾಡಿ: ಹೆಚ್.ಎಸ್. ಪ್ರತಿಮಾ ಹಾಸನ್

ಹಾಸನ: ಮಾರ್ಚ್‌-14 ರಂದು ಹಾಸನದ ಹೌಸಿಂಗ್ ಬೋರ್ಡ್, ಚನ್ನಪಟ್ಟಣದಲ್ಲಿ ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ (ರಿ) ವತಿಯಿಂದ ತಾಲೂಕು ಅಧ್ಯಕ್ಷರಾದ ರಮ್ಯಾರವರ ನಿವಾಸದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಹಾಸನದ ಹೆಮ್ಮೆಯ ಪುತ್ರಿಯಾಗಿರುವ ಸಾಹಿತಿ, ಸಮಾಜ ಸೇವಕಿ, ಶಿಕ್ಷಕಿ, ಪತ್ರಕರ್ತೆ, ಸಾಮಾಜಿಕ ಚಿಂತಕಿ, ನೂರಾರು ಪ್ರಶಸ್ತಿಗಳನ್ನು ಪಡೆದಿರುವ ಸಾಧಕಿ, ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ (ರಿ ) ಸಂಸ್ಥಾಪಕ ಅಧ್ಯಕ್ಷರಾಗಿರುವ ಶ್ರೀಮತಿ ಹೆಚ್.ಎಸ್. ಪ್ರತಿಮಾ ಹಾಸನ್ ರವರನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೀಡಿ ಅವರನ್ನು ಎಲ್ಲ ಮಹಿಳೆಯರು ಅರಿಶಿಣ ಕುಂಕುಮ, ಬಳೆ. ಸೀರೆ ಜೊತೆಗೆ ಬಾಗಿನ ನೀಡಿ ಅವರ ಸಾಧನೆಯ ಹಲವಾರು ಪ್ರಶಸ್ತಿ ಪಡೆದ ಭಾವಚಿತ್ರವಿರುವ ಫಲಕ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ನಂತರ ಬದುಕು ಎಂದ ಮೇಲೆ ಜೀವನದಲ್ಲಿ ಏರುಪೇರು ಸಹಜ. ಕಷ್ಟ ಸುಖ ಎಂಬುದು ಎಲ್ಲರ ಬದುಕಿನಲ್ಲಿ ಬರುತ್ತದೆ. ಕೈಲಾದಷ್ಟು ಸಹಾಯವನ್ನು ಕಷ್ಟದಲ್ಲಿ ಇರುವವರಿಗೆ, ಅಂಗವಿಕಲರು, ನೊಂದವರಿಗೆ, ನಿರ್ಗತಕರಿಗೆ ಮಾಡಬೇಕು ಮಾಡುವ ಕೆಲಸವಾಗಲಿ ಸಾಧನೆ ಆಗಲಿ ಮೌನದಲ್ಲಿ ಸಾಗಬೇಕು, ಎಂದಿಗೂ ಮೌನ ಸಾಧಕರಾಗಿ ಒಳಿತನ್ನು ಮಾಡುತ್ತಾ ಸಾಗಿದರೆ ಸಮಾಜ ನಮ್ಮನ್ನು ಗುರುತಿಸುತ್ತದೆ ಎಂದು ಹೇಳುತ್ತಾ ಮಹಿಳೆಯರು ಪ್ರಬಲರಾಗಿ ಬದುಕಬೇಕು, ಆರ್ಥಿಕವಾಗಿ ಎಷ್ಟೇ ಪ್ರಬಲರಾದರು ದುಡಿಮೆಯನ್ನು ಮಾಡುತ್ತ ಸಾಗಿದರೆ ಸಮಾಜಕ್ಕೆ ಮಾದರಿಯಾಗಬಹುದು. ಅಷ್ಟೇ ಅಲ್ಲ ಮಹಿಳೆಯು ಅಬಲೆಯಲ್ಲ ಸಬಲೇ ಎಂಬ ಮಾತಿಗೆ ಎಲ್ಲಾ ಮಹಿಳೆಯರು ಸಂಸ್ಕೃತಿಯನ್ನು ಉಳಿಸುತ್ತಾ ಉಡುಗೆ-ತೊಡುಗಿಗಳಲ್ಲಿ ಬದಲಾವಣೆಗಳನ್ನು ತೋರದೆ ನಮ್ಮ ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನವನ್ನು ನೀಡುತ್ತಾ ನಮ್ಮ ಸಂಸ್ಕೃತಿಗೆ ವಿರುದ್ಧ ನಡೆಯದೆ ಕಾರ್ಯವನ್ನು ನಿರ್ವಹಿಸುತ್ತಾ ಸಾಗಿದರೆ ನಮ್ಮ ಸಮಾಜ ಸುಭದ್ರವಾಗಿರುತ್ತದೆ. ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಅರಿತು ಸಾಗಬೇಕಿದೆ. ಒಟ್ಟಾರೆ ಮಹಿಳೆಯಿಂದ ಸಮಾಜ ಸುಭದ್ರತೆಯನ್ನು ಕಾಣಬಹುದಾಗಿದೆ. ಎಂದು ಹೆಚ್.ಎಸ್ ಪ್ರತಿಮಾ ಹಾಸನ್ ಅವರು ತಿಳಿಸಿದರು.

ನಂತರ ಹೆಚ್.ಎಸ್. ಪ್ರತಿಮಾ ಹಾಸನ್ ರವರ ಸಾಧನೆ ಬಹಳವಾಗಿದೆ, ಅವರು ನೂರಾರು ಮಹಿಳೆಯರಿಗೆ ಸ್ಪೂರ್ತಿದಾಯಕ ಹಾಗೂ ಮಾದರಿಯಾಗಿದ್ದಾರೆ. ನೊಂದ ಮಹಿಳೆಯರಿಗೆ ನ್ಯಾಯ ನೀಡುವುದಾಗಲಿ, ಕರಕುಶಲ ತರಬೇತಿಯಾಗಲಿ, ಸಾಹಿತಿಕವಾಗಿ ಕಾರ್ಯಕ್ರಮಗಳಾಗಲಿ ಗುರುತಿಸಿ ನಮ್ಮೆಲ್ಲರಿಗೂ ಪ್ರೋತ್ಸಾಹ ನೀಡುತ್ತಿರುವುದು ಅವರ ಸಾಧನೆಯಾಗಿ ಕಾಣುತ್ತದೆ. ಇವರು ಬಹುಮುಖ ಪ್ರತಿಭೆಯಾಗಿದ್ದು.ಯಾವುದೇ ನಿಷ್ಕಲ್ಮಶವನ್ನು ತೋರದೆ ನೇರ ನುಡಿಯ ಮಾತುಗಾರ್ತಿಯಾಗಿ ನಮ್ಮೆಲ್ಲರಿಗೂ ಗುರುವಿನಂತೆ. ಇವರನ್ನು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಾ ಇಂದು ನಮ್ಮಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್(ರಿ ) ವತಿಯಿಂದ ಗೌರವಿಸುತ್ತಿರುವುದು ನಮಗೆಲ್ಲ ಹೆಮ್ಮೆ ಎನ್ನಿಸುತ್ತದೆ. ಹೀಗೆ ಇವರ ಕಾರ್ಯವು ಸುಗಮವಾಗಿ ನಡೆಯಲೆಂದು ಆಶಿಸುತ್ತೇವೆ ಎಂದು ತಾಲೂಕು ಅಧ್ಯಕ್ಷರಾದ ರಮ್ಯಾ ತಿಳಿಸಿದರು.

ನಮ್ಮ ಟ್ರಸ್ಟ್ ನ ಕಾರ್ಯವು ಸುಗಮವಾಗಿ ಸಾಗುತ್ತಾ ಸಮಾಜಕ್ಕೆ ಒಳಿತನ್ನು ಮಾಡಿದರೆ ಸಾಕೆಂದು ಎಲ್ಲಾ ಟ್ರಸ್ಟ್ ನ ಸದಸ್ಯರು ತಿಳಿಸಿದರು.

ಕಾರ್ಯಕ್ರಮದಲ್ಲಿಸೌಮ್ಯ, ಅಭಿಲಾಷ, ಕಲ್ಪನಾ, ಸಂಗೀತ, ಜಯಮ್ಮ ಪ್ರವೀಣ್ ಗೌಡ, ಬೇಬಿ ರಶಿಕ,ಬೇಬಿ ದಿಯಾ ಗೌಡ ಕೆ ಆರ್. ಇನ್ನೂ ಹಲವರು ಇದ್ದರು.  https://aratt.ai/@vishwaroopa_news_blog

Leave a Reply

Discover more from VISHWAROOPA NEWS BLOG

Subscribe now to keep reading and get access to the full archive.

Continue reading