ವಿದ್ಯಾರ್ಥಿಗಳಿಗೆ ಸಂಸತ್ತಿನ ಅರಿವು ಅವಶ್ಯಕತೆ: ಶರಣಯ್ಯ
ಗಂಗಾವತಿ: ಭಾರತದ ಸಂವಿಧಾನ ಪ್ರಜಾಪ್ರಭುತ್ವದ ವ್ಯವಸ್ಥೆ ಹಾಗೂ ಸಂಸತ್ತಿನ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ ಎಂದು ಸರಕಾರಿ ಜೂನಿಯರ್ ಕಾಲೇಜಿನ ಮುಖ್ಯೋಪಾಧ್ಯಾಯರಾದ ಶರಣಯ್ಯ ಹೇಳಿದರು.
ಅವರು ನಗರದ ಹೆಚ್.ಆರ್ ಸರೋಜಮ್ಮ ಪ್ರೌಢಶಾಲೆಯಲ್ಲಿ ಶನಿವಾರದಂದು ಜರುಗಿದ ಶಾಲಾ ಸಂಸತ್ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಶಾಲಾ ಸಂಸತ್ತಿನ ಪ್ರಧಾನಿಯಾಗಿ ಉಳಿದಂತೆ ಸಚಿವರುಗಳಾಗಿ ತಮ್ಮ ತಮ್ಮ ಜವಾಬ್ದಾರಿ ಕರ್ತವ್ಯ ಪಾಲನೆ ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದು ಪ್ರಸ್ತುತ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ತಿಳಿಸಿದರು.
ಸಂಸತ್ ರಚನೆ. ಶಿಸ್ತು. ಚುನಾವಣೆ ಆಯೋಗ ಅವರ ಕರ್ತವ್ಯ ಆಯ್ಕೆಯ ಪ್ರಕ್ರಿಯೆ ಇವುಗಳ ಕುರಿತು ವಿದ್ಯಾರ್ಥಿಯ ಜೀವನ ನಾಯಕತ್ವ ಮೌಲ್ಯವನ್ನು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಯು.ಎಂ ಬಸವರಾಜ್ ಹೇಳಿದರು.
ಸಂಸತ್ ಕಾರ್ಯಾಧ್ಯಕ್ಷರಾದ ಶ್ರೀಧರ್, ನದಾಫ್, ಪುನೀತ್, ರಾಮಗೆರೆಪ್ಪ, ದೀಪಾ, ಶ್ರೀದೇವಿ, ಜ್ಯೋತಿ, ಸಹನಾ ಹಿರೇಮಠ ಭಾಗವಹಿಸಿದ್ದರು.
ನಿರೂಪಣೆ ವಿಜಯಲಕ್ಷ್ಮಿ ನಾರಿನಾಳ ಮಾಡಿದರು. ಶಾಲಾ ಸಂಸತ್ತಿನ ಪ್ರಧಾನಿ ಉಪ ಪ್ರಧಾನಮಂತ್ರಿ ವಿದ್ಯಾರ್ಥಿನಿಯರು ವೇದಿಕೆ ಮೇಲೆ ಉಪಸ್ಥಿತರಿದ್ದರು. https://aratt.ai/@vishwaroopa_news_blog





