ಸಾರ್ಥಕತೆಗೆ ಅಜ್ಞಾನದಲ್ಲಿದ್ದ ವ್ಯಕ್ತಿಗಳನ್ನು ಸನ್ಮಾರ್ಗಕ್ಕೆ ಕೊಂಡೊಯ್ಯುವವನೇ ನಿಜವಾದ ಗುರು.
ಗಂಗಾವತಿ: ಭಾರತ ವೈವಿಧ್ಯತೆಯಲ್ಲಿ ಏ ಕತೆಯನ್ನು ಹೊಂದಿರುವ ದೇಶವಾಗಿದ್ದರೂ ಸಹ ಭಾರತದ ಭವ್ಯ ಪರಂಪರೆಯಲ್ಲಿ ಗುರು ಸ್ಥಾನಕ್ಕೆ ತನ್ನದೇ ಆದ ಮಹತ್ವವನ್ನು ಹೊಂದಿದೆ ಎಂದು ಶಾರದಾ ಮಂದಿರದ ಧರ್ಮದರ್ಶಿ ನಾರಾಯಣರಾವ್ ಹೇಳಿದರು.
ಅವರು ಬುಧವಾರದಂದು ಶಂಕರಮಠದ ಶಾರದಾ ಮಂದಿರದಲ್ಲಿ ಗುರುಪೌರ್ಣಿಮಾ ನಿಮಿತ್ತ ಆಯೋಜಿಸಲಾಗಿದ್ದ ವಿಶೇಷ ಧಾರ್ಮಿಕ ಕಾರ್ಯಕ್ರಮದ ಧರ್ಮಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಯಿ ಮೊದಲ ಗುರು ಎಂಬಂತೆ, ಬದುಕಿನ ಜನ್ಮ ಸಾರ್ಥಕತೆಗೆ ಅಜ್ಞಾನದಲ್ಲಿದ್ದ ವ್ಯಕ್ತಿಗಳನ್ನು ಸನ್ಮಾರ್ಗಕ್ಕೆ ಕೊಂಡೊಯ್ಯುವವನೇ ನಿಜವಾದ ಗುರುವಾಗಿದ್ದು, ಮಹರ್ಷಿ ವೇದವ್ಯಾಸರ ಜನ್ಮದಿನವನ್ನು ಗುರು ಪೌರ್ಣಿಮೆಯನ್ನಾಗಿ ಆಚರಿಸಲಾಗುತ್ತಿದ್ದು, ದೇಶ ಪುಣ್ಯಭೂಮಿಯಾಗಿದ್ದು ಸಾಧು-ಸಂತರು. ಮುನಿಗಳು ಗುರುವರ್ಯದಿಂದಾಗಿ ಪ್ರತಿಯೊಬ್ಬರು ಸಂಸ್ಕಾರಯುತ ಜೀವನ ನಡೆಸಲು ಗುರುಗಳ ಆಶೀರ್ವಾದ ಅತ್ಯಗತ್ಯ ಎಂದು ತಿಳಿಸಿದರು. ಇದೇ ವೇಳೆ ಶೃಂಗೇರಿ ಜಗದ್ಗುರು ಭಾರತೀಯ ತೀರ್ಥ ಮಹಾಸ್ವಾಮಿಗಳವರ 48 ದಿನಗಳ ಚಾತುರ್ಮಾಸ ವ್ರತವು ಇಂದಿನಿಂದ ಆರಂಭಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಮುಖಂಡ ಸಂತೋಷ ಕೆಲೋಜಿ ಮಾತನಾಡಿ ಅವಸಾನದ ಅಂಚಿನಲ್ಲಿದ್ದ ಹಿಂದೂ ಧರ್ಮದ ಪುಣ್ಯಸ್ಥಾಪನೆಗೆ ಜಗದ್ಗುರು ಶ್ರೀ ಶಂಕರಾಚಾರ್ಯರ ಕೊಡುಗೆ ಅನನ್ಯವಾಗಿದೆ. ಧರ್ಮ ಸಂಕಷ್ಟದಲ್ಲಿದ್ದಾಗ ಅಂತಹ ಮಹಾನ್ ಪುರುಷರ ಜನನ ಸಾವಿರ ವರ್ಷಕ್ಕೊಮ್ಮೆ ಆಗುತ್ತದೆ. ಧರ್ಮದ ಸಾರ, ಜೀವನದ ಮೌಲ್ಯಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ದೇಶದ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಬೇಕೆಂದು ಕರೆ ನೀಡಿದರು.
ಶಾರದಾ ಶಂಕರ ಭಜನಾ ಮಂಡಳಿ, ಗಂಗಾಧರೇಶ್ವರ ಭಜನಾ ಮಂಡಳಿ, ಸತ್ಯದೇವ ಭಜನಾ ಮಂಡಳಿ, ಶ್ರೀ ಯೋಗೇಶ್ವರ ಯಜ್ಞವಲ್ಕ ಭಜನಾ ಮಂಡಳಿ ಸೇರಿದಂತೆ ಇತರ ಭಜನಾ ಮಂಡಳಿಯ ಸದಸ್ಯರು ಭಜನೆ, ಶಂಕರಾಚಾರ್ಯರು ರಚಿಸಿದ ಕಲ್ಯಾಣವೃಷ್ಟಿ ಮತ್ತಿತರ ಭಜನೆಯನ್ನು ಹಾಡಿ ಗಮನಸೆಳೆದರು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಘವೇಂದ್ರ ಮೇಗೂರ್, ಬಾಲಕೃಷ್ಣ ದೇಸಾಯಿ, ಮೋಹನ್ ಲೆಕ್ಕಿಹಾಳ, ರಾಘವೇಂದ್ರ ಅಳವಂಡಿಕರ್, ಸುನಿಲ್ ವೈದ್ಯ. ಪವನ್ ಜೋಶಿ ಸೇರಿದಂತೆ ಸೌಂದರ್ಯ ಲಹರಿ ಭಜನಾ ಮಂಡಳಿಯ ಸದಸ್ಯರುಗಳು ಪಾಲ್ಗೊಂಡಿದ್ದರು. ಬಳಿಕ ಮಹಾಮಂಗಳಾರತಿಯೊಂದಿಗೆ ಸಂಪನ್ನಗೊಂಡಿತು. https://aratt.ai/@vishwaroopa_news_blog





