ಸೆಪ್ಟೆಂಬರ್ 28, 2026

6 ರಾಜ್ಯಗಳ ಉಪಾಧ್ಯಕ್ಷ ಸ್ಥಾನಕ್ಕೆ ಧನರಾಜ್‌ ಈ ನೇಮಕ.

ಗಂಗಾವತಿ: ದೇಶದ ಎಲ್ಲಾ ಗ್ರಾಹಕ ಸಂಘಟನೆಗಳ ಉನ್ನತ ಮಹಾ ಮಂಡಳಿಯಾದ ಗ್ರಾಹಕರ ಸಮನ್ವಯ ಸಮಿತಿ (Consumer Co-ordination Cousil-CCC) ನವದೆಹಲಿಯ ದಕ್ಷಿಣ ಭಾರತದ ರಾಜ್ಯದ ಉಪಾಧ್ಯಕ್ಷರಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿಯಾದ ಧನರಾಜ್ ಈ. ಅವರು ನೇಮಕಗೊಂಡಿದ್ದಾರೆ.

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಪಾಂಡಿಚೇರಿ ಹಾಗೂ ಗೋವಾ ರಾಜ್ಯಗಳನ್ನು ಒಳಗೊಂಡ ಈ ಸಮಿತಿಯ ಡಾ|| ಎಸ್. ಚಕ್ರಪಾಣಿ, ಡಾ|| ಸುದರ್ಶನ, ಯಶ್ವಂತ್ ಕುಮಾರ ಹಾಗೂ ರಾಜಾರೆಡ್ಡಿಯಂತಹ ತಜ್ಞರ ಉಪಸಮಿತಿಯು ಜುಲೈ-24 ರಂದು ಸಭೆ ಸೇರಿ ವ್ಯಾಪಕ ಚರ್ಚೆಯ ನಂತರ ಈ ನೇಮಕಾತಿಯನ್ನು ಮಾಡಿದ್ದು, ಪ್ರಧಾನ ಕಾರ್ಯದರ್ಶಿಗಳಾದ ಡಾ|| ಮೊಗಲಚರ್ಲ ಸುದರ್ಶನ್ ರವರು ಈ ಕುರಿತು ಅಧಿಕೃತ ಆದೇಶವನ್ನು ಪ್ರಕಟಿಸಿದ್ದಾರೆ.

“ಭಾರತೀಯ ಗ್ರಾಹಕರ ನಂಬಿಕಾರ್ಹ ಹಾಗೂ ಕ್ರಿಯಾಶೀಲ ಸಂಘಟನೆಯಾದ ಸಿ.ಸಿ.ಸಿ ಯು 2500 ಸದಸ್ಯ ಸಂಘಟನೆಗಳನ್ನು ಹೊಂದಿದೆ. 1989ರ ಗ್ರಾಹಕ ಸುರಕ್ಷಾ ಕಾಯ್ದೆ ಹಾಗೂ 2019ರ ತಿದ್ದುಪಡಿ ಕಾಯ್ದೆಯ ಕುರಿತು ದಕ್ಷಿಣ ರಾಜ್ಯಗಳಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಹಾಗೂ ಸಂಘಟನೆಯ ರಚನೆ ಬಲಪಡಿಸುವ ಜವಾಬ್ದಾರಿಯನ್ನು ಧನರಾಜ್ ಈ ರವರಿಗೆ ವಹಿಸಲಾಗಿದ್ದು, ಇವರ ಕಾರ್ಯಾವಧಿ ಎರಡು ವರ್ಷಗಳವರೆಗೆ ಇರುತ್ತದೆ” ಎಂದು ಅವರು ತಿಳಿಸಿದರು.

‘ಕಳೆದ ವರ್ಷ ನನ್ನನ್ನು ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು, ಈಗ 6 ರಾಜ್ಯಗಳ ಉಪಾಧ್ಯಕ್ಷ ಸ್ಥಾನಕ್ಕೆ ನಾನು ಸಮರ್ಥ ಎಂದು ಭಾವಿಸಿ ಬಡ್ತಿ ನೀಡಿದ ಎಲ್ಲಾ ತಜ್ಞರಿಗೂ ಆಭಾರಿಯಾಗಿದ್ದು, ನನ್ನ ಕಾರ್ಯಾವಧಿಯಲ್ಲಿ ನನಗೆ ನೀಡಿದ ಎಲ್ಲಾ ಜವಾಬ್ದಾರಿಗಳನ್ನು ಯಶಸ್ವಿಯಾಗಿ ತಾರ್ಕಿಕ ಅಂತ್ಯ ಮುಟ್ಟಿಸುವ ಪ್ರಯತ್ನ ಮಾಡುತ್ತೇನೆ’ ಎಂದು ಧನರಾಜ್ ಈ ರವರು ಈ ಮೂಲಕ ತಿಳಿಸಿದ್ದಾರೆ.  https://aratt.ai/@vishwaroopa_news_blog

Leave a Reply

Optimized by Optimole

Discover more from VISHWAROOPA NEWS BLOG

Subscribe now to keep reading and get access to the full archive.

Continue reading