ಸೆಪ್ಟೆಂಬರ್ 28, 2026

ಗಂಗಾವತಿ: ಅಖಂಡ ಭಾರತ ಸಂಕಲ್ಪ ದಿನಾಚರಣೆ ಕಾರ್ಯಕ್ರಮದ ನಿಮಿತ್ಯ ಹಿಂದು ಜಾಗರಣ ವೇದಿಕೆ ಸಂಘಟನೆಯಿಂದ ನಗರದ ಚನ್ನಬಸವಸ್ವಾಮಿ ಯಾತ್ರಿ ನಿವಾಸದಲ್ಲಿ ಜುಲೈ-31 ರಂದು ಕಾರ್ಯಕರ್ತರ ಪೂರ್ವಭಾವಿ ಸಭೆಯು ಜರುಗಿತು.

ಈ ಸಭೆಯಲ್ಲಿ ಗ್ರಾಮ ವಿಕಾಸದ ರಾಜ್ಯ ಪ್ರಮುಖರಾದ ರಾಜಶೇಖರ ಜೀ ಅವರು ಮಾತನಾಡಿ ದೇಶ ವಿಭಜನೆಯ ಕರಾಳ ಸತ್ಯವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಹಾಗೂ ಸ್ವಾತಂತ್ರ್ಯ ಭಾರತದ ಮೌಲ್ಯವನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಹಿಂಜಾವೇ ಸಂಘಟನೆಯು ಕಳೆದ ಹತ್ತಾರು ವರ್ಷಗಳಿಂದ ಅಖಂಡ ಭಾರತ ಸಂಕಲ್ಪ ದಿವಸ ಎನ್ನುವ ಕಾರ್ಯಕ್ರಮ ಮಾಡುತ್ತಾ ಬಂದಿದ್ದು ಈ ವರ್ಷವೂ ಸಹ ಅದ್ದೂರಿಯಾಗಿ ಹಾಗೂ ವಿಭಿನ್ನವಾಗಿ ಕಾರ್ಯಕ್ರಮವನ್ನು ನಗರದ ಚನ್ನಬಸವಸ್ವಾಮಿ ಕಲ್ಯಾಣ ಮಂಟಪದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ದೇವಾಲಯಗಳ ಸಂವರ್ಧನ ಸಮಿತಿಯ ರಾಜ್ಯ ಸಂಯೋಜಕರಾದ ಮನೋಹರ ಮಠದ ಅವರು ಪ್ರಮುಖ ಭಾಷಣಕಾರರಾಗಿ ಆಗಮಿಸಲಿದ್ದಾರೆ. ನಗರದ ನಾಲ್ಕು ಭಾಗಗಳಿಂದ ತ್ರಿವರ್ಣ ಧ್ವಜ ಹಾಗೂ ಪಂಜಿನ ಮೆರವಣಿಗೆ ಹೊರಡಲಿದೆ. ಕಾರಣ ಮಹಿಳೆಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಕಾರ್ಮಿಕರು, ವಿವಿಧ ಸಮಾಜಗಳ ಪ್ರಮುಖರು ಸೇರಿದಂತೆ ನಗರದ ಎಲ್ಲಾ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಯೋಜನೆ ಮಾಡಲಾಗಿದ್ದು ಇದಕ್ಕೆ ಕಾರ್ಯಕರ್ತರು ಶ್ರಮವಹಿಸಿ ಕಾರ್ಯ ಪ್ರವೃತ್ತರಾಗಬೇಕೆಂದು ಕರೆ ನೀಡಿದರು.

ಈ ಸಭೆಯಲ್ಲಿ ಹಿಂಜಾವೇ ಉತ್ತರ ಪ್ರಾಂತ ಸಂಯೋಜಕ ಅಯ್ಯನಗೌಡ ಹೇರೂರು, ಸಹಸಂಯೋಜಕ ಶ್ರೀಕಾಂತ ಹೊಸ್ಕೆರಾ, ಪ್ರಮುಖರಾದ ನೀಲಕಂಠಪ್ಪ ನಾಗಶೆಟ್ಟಿ, ಮುಖಂಡ ಸಂತೋಷ ಕೇಲೋಜಿ, ನಗರ ಸಂಯೋಜಕ ಗಾದಿಲಿಂಗಪ್ಪ, ಕುಮಾರ ಹೂಗಾರ, ಸಂಗಮೇಶ ಅಯೋಧ್ಯಾ, ಜಗದೀಶ ಹೇರೂರು, ಚನ್ನು ಹೂಗಾರ, ಸಿದ್ದು ಗೌಳಿ, ಮಂಜುನಾಥ ಗಾಂಧಿನಗರ, ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.  https://aratt.ai/@vishwaroopa_news_blog

Leave a Reply

Optimized by Optimole

Discover more from VISHWAROOPA NEWS BLOG

Subscribe now to keep reading and get access to the full archive.

Continue reading