2026-27ನೇ ವರ್ಷದ ವಿದ್ಯಾರ್ಥಿ ಒಕ್ಕೂಟದ ಸಾರ್ವತ್ರಿಕ ಚುನಾವಣೆ
ಗಂಗಾವತಿ: 2026-27ನೇ ವರ್ಷದ ವಿದ್ಯಾರ್ಥಿ ಒಕ್ಕೂಟದ ಸಾರ್ವತ್ರಿಕ ಪ್ರದಾನ ಕಾರ್ಯದರ್ಶಿ ಹಾಗೂ ಸಹ ಕಾರ್ಯದರ್ಶಿ ಹುದ್ದೆಗಳಿಗೆ ಚುನಾವಣೆ ಮಾದರಿಯಲ್ಲಿ ಸಂಕಲ್ಪ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಗಸ್ಟ್-01 ರಂದು ಮತದಾನ ನಡೆಯಿತು.
ಸಂಸ್ಥೆಯ ಕಾರ್ಯಾಧ್ಯಕ್ಷರಾದ ನಾಗರಾಜ್ ಗುತ್ತೇದಾರ್ ವಿದ್ಯಾರ್ಥಿನಿಯರು ತಮ್ಮ ಕಾಲೇಜು ದಿನಗಳಲ್ಲಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವದರ ಮೂಲಕ ಭವಿಷ್ಯದಲ್ಲಿ ಪ್ರಾಯೋಗಿಕ ಅರಿವಿನೊಂದಿಗೆ ಯಶಸ್ಸಿಗೆ ಸಹಾಯಕವಾಗುತ್ತದ್ದೆ ಎಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಸಂಸ್ಥೆಯ ಉಪಾಧ್ಯಕ್ಷರಾದ ಎಂ.ಆರ್ ಮಂಜುಸ್ವಾಮಿ ಯವರು ಚುನಾವಣೆಗಳಲ್ಲಿ ಸೋಲು-ಗೆಲವು ಸಹಜ ಇದ್ದು ಅನುಭವಕ್ಕಾಗ್ಗಿ ಮಾತ್ರ ಇದರಿಂದಾಗಿ ಯಾರೂ ಸ್ನೇಹ ಸಂಬಂಧಗಳನ್ನು ಕಳೆದುಕೊಳ್ಳುವದೇ ಖುಷಿಯಿಂದ ಫಲಿತಾಂಶ ಸ್ವೀಕರಿಸುವಂತೆ ಕರೆ ನೀಡಿದರು.
ಕಾಲೇಜಿನ ನಿರ್ದೇಶಕರಾದ ಡಾ. ಅಮಿತ್ ಕುಮಾರ್ ರೆಡ್ಡಿ ಈ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಹೊಸ ಹೊಸ ವಿಷಯಗಳನ್ನು ಕಲಿಯಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.
ಚುನಾವಣಾ ಅಧಿಕಾರಿಗಳಾಗಿ ವಿಶ್ವನಾಥ್ ಉಪನ್ಯಾಸಕರು ನಾಗರಾಜ್ ಹೆಚ್, ಬಸವರಾಜ್ ವೈ, ಶ್ರೀಮತಿ ಆಶಾ, ಶಂಕರ್ ಎನ್.ವಿ, ಚುನಾವಣಾ ಕರ್ತವ್ಯ ಅವಲೋಕನಾಧಿಕಾರಿಗಳಾಗಿ ಹಾಗೂ ಸುರೇಶ, ರಮೇಶ್, ಶ್ರೀಮತಿ ವಿದ್ಯಾ, ಅಶೋಕ್ ಹೆಚ್.ಎಂ., ರಮೇಶ್ ಪೂಜಾರ್, ಚುನಾವಣಾ ಕಾರ್ಯ ಸುಗಮಗೊಳ್ಳಲು ಸಹಕರಿಸಿದರು.
ಈ ಎಲ್ಲಾ ಪ್ರಕ್ರಿಯು ಪ್ರಾಚಾರ್ಯರಾದ ಬಸಪ್ಪ ಶಿರಿಗೇರಿ ಯವರ ಸಮುಖದಲ್ಲಿ ನಡೆದಿರುತ್ತದೆ. ಈ ಸಂದರ್ಭದಲ್ಲಿ ಇದೊಂದು ಮಾದರಿ ಕಾರ್ಯಕ್ರಮವಾಗಿದೆ ಎಂದು ಪ್ರಾಚಾರ್ಯರು ಪ್ರಶಂಸಿಸಿದರು. https://aratt.ai/@vishwaroopa_news_blog





