ಇಂದಿನಿಂದ ನಿರಂತರ ಶ್ರೀ ಕೊಟ್ಟೂರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.
ಗಂಗಾವತಿ: ನಗರದ ಸಪ್ತಸ್ವರ ಸಾಂಸ್ಕೃತಿಕ ಕಲಾಸಂಘವು ಫ್ರೆಂಡ್ಸ್ ಯೋಗ ಗ್ರೂಪ್ ಪ್ರಾರಂಭಿಸಿ, ಜುಲೈ-04 ರಿಂದ ನಿರಂತರವಾಗಿ ಪ್ರತಿದಿನ ಬೆಳಗ್ಗೆ 5:30 ರಿಂದ 7:00 ರವರೆಗೆ ನಗರದ ನೀಲಕಂಠೇಶ್ವರ ವೃತ್ತ ಹತ್ತಿರದ ಪಬ್ಲಿಕ್ ಕ್ಲಬ್ ಆವರಣದಲ್ಲಿರುವ ಶ್ರೀ ಕಲಾನಿಕೇತನ ಸಾಂಸ್ಕೃತಿಕ ವೇದಿಕೆಯಲ್ಲಿ ಯೋಗ ಶಿಬಿರವನ್ನು ನಡೆಸುತ್ತಾ ಬರಲಾಗುತ್ತಿತ್ತು, ಇನ್ನುಮುಂದೆ ಈ ಯೋಗ ಶಿಬಿರವನ್ನು ನಗರದ ನ್ಯಾಯಾಲಯ ಮುಂಭಾಗದ ಶ್ರೀ ಕೊಟ್ಟೂರೇಶ್ವರ ದೇವಸ್ಥಾನದ ಆವರಣದ ವೇದಿಕೆಯಲ್ಲಿ ನಿರಂತರವಾಗಿ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷರಾದ ಆರ್. ಕಣ್ಣನ್ ಅವರು ಪ್ರಕಟಣೆಯಲ್ಲಿ ತಿಳಿಸಿದರು.ಈ ಯೋಗ ಶಿಬಿರವು ಯೋಗ ಗುರುಗಳಾದ ಪರಸಪ್ಪ ಕುರುಗೋಡು, ಯಮನೂರಪ್ಪ ಶಿರಿಗೇರಿ, ಶ್ರೀಮತಿ ಪುಷ್ಪಾ ನೆವಣಕ್ಕಿ, ಜಯಶ್ರೀ ಹಳ್ಯಾಳ ಗಂಗಾವತಿ ಇವರುಗಳ ಸಾನಿಧ್ಯದಲ್ಲಿ ನಡೆಸಲಾಗುತ್ತಿದೆ. ಈ ಯೋಗ ಶಿಬಿರದಲ್ಲಿ ಯೋಗಭ್ಯಾಸಕ್ಕೆ ಆರ್. ಮರೇಗೌಡ ಹೊಸಳ್ಳಿ, ಶ್ಯಾಮಣ್ಣ ತಟ್ಟಿ, ವಿರೇಶ ಪಪ್ಪಿ, ರಾಮಕೃಷ್ಣ ಸಿ.ಡಿ., ವೆಂಕಟೇಶ ಕುರುಗೋಡು, ಗುರುಪ್ರಸಾದ LIC, ಸುರೇಶ ಸಂಗಪ್ಪ ಗಾಜಿ, ಭೀಮೇಶ ಹಡಪದ, ದೇವೆಂದ್ರ ಬಡಿಗೇರ, ಮಾರುತಿ ರಾಯಕರ್, ಮಂಜುನಾಥ ಮಸ್ಕಿ, ಸಣ್ಣ ಮಾರುತಿ ಐಲಿ, ಲಕ್ಷ್ಮೀ ಪಾಟೀಲ್, ಎಂ.ಎಸ್ ಸತ್ಯನಾರಾಯಣ ಇವರುಗಳು ಈಗಾಗಲೇ ಭಾಗವಹಿಸುತ್ತಾ ಯೋಗ ಕ್ಲಾಸ್‌ನ್ನು ಯಶಸ್ವಿಗೊಳಿಸುತ್ತಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಯೋಗಾಸಕ್ತರು ಭಾಗವಹಿಸಿ, ಈ ಯೋಗ ಕ್ಲಾಸ್ ಸದುಪಯೋಗ ಪಡೆದುಕೊಳ್ಳಬೇಕೆಂದು ಸಪ್ತಸ್ವರ ಸಾಂಸ್ಕೃತಿಕ ಕಲಾ ವೇದಿಕೆ ವಿನಂತಿಸಿದೆ.
ಈ ಸಂದರ್ಭದಲ್ಲಿ ಸಂಘದ ಗೌರವಾದ್ಯಕ್ಷ ಮಲ್ಲಿಕಾರ್ಜುನ ತಟ್ಟಿ, ಪ್ರಧಾನ ಕಾರ್ಯದರ್ಶಿ ವಿರೇಶ ಹಿರೇಮಠ ಸೇರಿದಂತೆ ಇತರರು ಹಾಜರಿದ್ದರು. https://aratt.ai/@vishwaroopa_news_blog





