ಸೆಪ್ಟೆಂಬರ್ 28, 2026

ಹಾಸನ: ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಾಟ್ಯಕಲಾ ನಿವಾಸ್ ಆಯೋಜಿಸಿದ ೧೯ನೇ ವರ್ಷದ ವಾರ್ಷಿಕೋತ್ಸವದ ನೃತ್ಯೋತ್ಸವದಲ್ಲಿ ಸುಮಾರು ೧೫೦ ಮಕ್ಕಳು ಭಾಗವಹಿಸಿ ಯಶಸ್ವಿ ಪ್ರದರ್ಶನ ನೀಡಿದರು.

ಬೆಂಗಳೂರು ಡಿ. ಡಿ. ಚಂದನ ಕಾರ್ಯಕ್ರಮ ಮುಖ್ಯಸ್ಥರು ಎಚ್.ಎನ್. ಆರತಿ, ಕನ್ನಡ ಚಿತ್ರರಂಗದ ಪೋಷಕ ನಟರು ಸುಂದರ್ ವೀಣಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಎಚ್.ಪಿ ತಾರಾನಾಥ್, ಸ್ಕೌಟ್ಸ್ & ಗೈಡ್ ಹಾಸನ ವಿಭಾಗದ ಜಂಟಿ ಕಾರ್ಯದರ್ಶಿ ಸೋಫಿ ಫೆರ್ನಾಂಡಿಸ್ ಇವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ನಾಟ್ಯಕಲಾ ನಿವಾಸ್ ಸಂಸ್ಥೆ ನೀಡುವ ಸಮಾಜ ಸೇವಾ ತಿಲಕ ಪ್ರಶಸ್ತಿಯನ್ನು ಆರತಿ ಹಾಗು ಸೋಫಿ ಫೆರ್ನಾಂಡಿಸ್ ಸ್ವೀಕರಿಸಿ ಸಂಸ್ಥೆಯ ಮಕ್ಕಳನ್ನು ಉದ್ದೇಶಿಸಿ ಮಕ್ಕಳ ಮಾನಸಿಕ ಬೆಳವಣಿಗೆ ನೃತ್ಯಾಭ್ಯಾಸ ತುಂಬಾ ಫಲಕಾರಿ ಎಂದು ಅಭಿಪ್ರಾಯಪಟ್ಟರು.

ಸುಂದರ್ ತಮ್ಮ ಕಲಾಜೀವನದ ಅನುಭವ ಹಂಚಿಕೊಂಡರು. ಕಲೆಯಿಂದ ಅವರಿಗೆ ದೊರೆತ ಮನ್ನಣಿ ಲಾಭ ಪ್ರಯೋಜನೆಗಳನ್ನು ಹಂಚಿಕೊಂಡರು.

ನಂತರ ನಡೆದ ನೃತ್ಯ ಕಾರ್ಯಕ್ರಮವು ಮೈಸೂರು ಮಹಾರಾಜರ ಅಪರೂಪದ ರಚನೆ , ಚಿಂತಯೇ ಸದಾ ವರನ ವದನಂ ಎಂಬೋ, ಸಿಂಧೂನಾಮಕ್ರಿಯೆ ರಾಗದಲ್ಲಿ, ದೇಶಾದಿತಾಳದಲ್ಲಿ, ನಾಟ್ಯಕಲಾ ನಿವಾಸದ ಗುರುಗಳಾದ ಶ್ರೀ ವಿದ್ವಾನ್ ಉನ್ನತ್ ಇವರ ಹೊಸ ವಿಶಿಷ್ಟ ಸಂಯೋಜನೆಗಳು ಸಂಸ್ಥೆಯ ಮಕ್ಕಳಿಂದ ಉತ್ತಮ ಪ್ರದರ್ಶನ ಕಂಡಿತು.

ಗಾಯನದಲ್ಲಿ ಕೇರಳದ ಶ್ರೀ ವಿನೀತ್ ಪುರವಂಕರ, ಮೃದಂಗದಲ್ಲಿ ಮೈಸೂರು ವಿದ್ವಾನ್ ವಿಕ್ರಂ ಭಾರದ್ವಾಜ್, ಕೊಳಲಿನಲ್ಲಿ ಮೈಸೂರು ವಿದ್ವಾನ್ ಸಮೃದ್ದ್ ಶ್ರೀನಿವಾಸ್, ಪಿಟೀಲಿನಲ್ಲಿ ವಿದ್ವಾನ್ ಯಶಸ್ವೀ ತುಮಕೂರು ಹಾಗೂ ರಿದಮ್ ಪ್ಯಾಡ್ ನಲ್ಲಿ ವಿದ್ವಾನ್ ಶ್ರೀ ವಿನಯ್ ರಂಗದೊಳ್ ಸಹಕರಿಸಿದರು.

ಮೈಸೂರು ಆಸ್ಥಾನ ಕವಿ ಶ್ರೀ ಸದಾಶಿವ ರಾವ್ ಅವರ ಭೈರವಿ ರಾಗದ ಶ್ರೀ ಪಾರ್ಥಸಾರಥಿ ಶ್ರೀ ವಿದ್ವಾನ್ ಉನ್ನತ್ ಇವರ ಕ್ಲಿಷ್ಟಕರ ಸಂಯೋಜನೆಯ ನೃತ್ಯದಲ್ಲಿ ಮೈಸೂರು ವಿದ್ವಾನ್ ಪವನ್ ಕುಮಾರ್. ಆರ್ , ಶ್ರೀ ಭುವನ್ ಕುಮಾರ್ ಇವರುಗಳ ತ್ರಿವಳಿ ನೃತ್ಯ ಜನಮನ ಗೆದ್ದಿತು. ಮುತ್ತೈಯ್ಯ ಭಾಗವತರ ಕನ್ನಡದ ಪ್ರಪ್ರಥಮ ಕೃತಿ ಶ್ರೀ ದುರ್ಗಾದೇವಿ, ಸರಸಂಗಿ ರಾಗದ ಶ್ರೀ ಸಾಧಾಶಿವಮ್, ಮೈಸೂರು ವಾಸುದೇವಚಾರ್ಯರ ಶ್ರೀ ರಾಗದ ತಿಲ್ಲಾನ ಮನಮೋಹಕವಾಗಿತ್ತು  https://aratt.ai/@vishwaroopa_news_blog

Leave a Reply

Optimized by Optimole

Discover more from VISHWAROOPA NEWS BLOG

Subscribe now to keep reading and get access to the full archive.

Continue reading