ಗಂಗಾವತಿ: ನಗರದ ಶ್ರೀ ಶೃಂಗೇರಿ ಶಂಕರಮಠದಲ್ಲಿ ಋಗ್ವೇದಿಗಳಿಗಾಗಿ ಉತ್ಸರ್ಜನೋಪಾಕರ್ಮ (ಯಜ್ಞೋಪವೀತ ಧಾರಣ) ಹಾಗೂ ನೂತನೋಪಾಕರ್ಮ ಧಾರ್ಮಿಕ ಕಾರ್ಯಕ್ರಮವು ಬುಧವಾರ-26 ರಂದು ನಡೆಯಿತು.
ಶ್ರೀಮಠದ ವಿದ್ಯಾರಣ್ಯ ಸಭಾ ಭವನದಲ್ಲಿ ನಡೆದ ಧಾರ್ಮಿಕ ಸಮಾರಂಭದ ನೇತೃತ್ವವನ್ನು ಮಹೇಶ್ ಭಟ್ ಜೋಶಿ ಅವರು ವಹಿಸಿದ್ದರು. ಅವರು ಮಹಾಸಂಕಲ್ಪ, ಜನಿವಾರ ಧಾರಣೆ ಮತ್ತು ನೂತನ ಉಪಾಕರ್ಮ ವಿಧಿಯನ್ನು ಆಯೋಜಿಸಿದ್ದರು. ಹೋಮ ಹಾಗೂ ಇತರ ಕಾರ್ಯಕ್ರಮಗಳನ್ನು ಅವರು ಸಂಯೋಜಿಸಿದರು.
ಈ ಸಂದರ್ಭದಲ್ಲಿ ಧರ್ಮದರ್ಶಿ ನಾರಾಯಣರಾವ್ ವೈದ್ಯ ಮಾತನಾಡಿ, ಕಳೆದ 24 ವರ್ಷಗಳಿಂದ ವೇದಮೂರ್ತಿ ಮಹೇಶ್ ಭಟ್ಟ ಜೋಶಿ ನೇತ್ರತ್ವದಲ್ಲಿ ಜನಿವಾರ ಧಾರಣೆ ಹಾಗೂ ನೂತನ ಉಪಕರ್ಮವನ್ನು ನಡೆಸುತ್ತಾ ಬರಲಾಗಿದ್ದು. ಸಪ್ಟೆಂಬರ್-4 ರಂದು ಶೃಂಗೇರಿಯ ಉಭಯ ಜಗದ್ಗುರುಗಳ ಆದೇಶದ ಅನ್ವಯ ಶ್ರೀಮಠದಲ್ಲಿ ಹಾಗೂ ರಾಜ್ಯಾದ್ಯಂತ ಶಾಖಾಮಠಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲು ಆದೇಶಿಸಿದ್ದಾರೆ. ಜೊತೆಗೆ ಶ್ರಾವಣ ಸಂಭ್ರಮದ ಪ್ರಯುಕ್ತ ಪ್ರತಿ ಸೋಮವಾರ ಹಾಗೂ ನಾಲ್ಕನೆಯ ಸೋಮವಾರ ಶ್ರೀ ಚಂದ್ರಮೌಳೇಶ್ವರ ದೇವರಿಗೆ ತಿಲಕಾಷ್ಠ ಸಹಿತ ಬಿಲ್ವಾರ್ಚನೆ, ಭಸ್ಮಾರ್ಚನೆ, ಭಜನೆ ಮತ್ತಿತರ ಕಾರ್ಯಕ್ರಮಗಳು ಜರುಗಲಿದ್ದು, ಸಕಲ ಭಕ್ತಾದಿಗಳು ಭಾಗವಹಿಸಬೇಕೆಂದು ಮನವಿ ಮಾಡಿದರು.
ವೇದಮೂರ್ತಿ ಮಹೇಶ್ ಭಟ್ ಜೋಶಿ ಮಾತನಾಡಿ ಭಾರತೀಯ ಸಂಸ್ಕೃತಿಯಲ್ಲಿ ಆಚರಣೆಗಳಿಗೆ ತನ್ನದೇ ಆದ ಮಹತ್ವವಿದೆ. ಈ ಹಿಂದೆ ಗುರುಕುಲ ಪದ್ಧತಿಯಲ್ಲಿ ವೇದ ಉಪನಿಷತ್ತು ಕಲಿಯಲು ಉಪನಯನ ಅವಶ್ಯವಾಗಿದ್ದು, ವಿದ್ಯಾರ್ಥಿ ಬ್ರಹ್ಮಚರ್ಯ ಪ್ರವೇಶಕ್ಕೆ ಜನಿವಾರ ಧರಿಸುವಿಕೆ ಅವಶ್ಯವಾಗಿವೆ ಎಂದು ಅದರ ಮಹತ್ವ ಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ ರಾಘವೇಂದ್ರ ಅಳವಂಡಿಕರ್. ಬಾಲಚಂದ್ರರಾವ್, ಜಿತೇಂದ್ರ ಕುಲಕರ್ಣಿ, ಅನಿಲ್ ವೇಣುಗೋಪಾಲ್, ಪ್ರಕಾಶ್, ಜಗನ್ನಾಥ್ ಅಳವಂಡಿಕರ್, ಭೀಮಾಶಂಕರ ಹೊಸಳ್ಳಿ, ರಾಜು ಇತರರು ಪಾಲ್ಗೊಂಡಿದ್ದರು. https://aratt.ai/@vishwaroopa_news_blog





