ಆಲೂರು ತಾಲ್ಲೂಕು ಕುಂದೂರು ಹೋಬಳಿ ಸುಳುಗೋಡು ಗ್ರಾಮದ ನಾಗರಾಜ್ ಕೆ. ವೃತ್ತಿಯಲ್ಲಿ ಕೆಇಬಿ ಇಲಾಖೆಯಲ್ಲಿ ಕಿರಿಯ ಇಂಜಿನಿಯರ್. ಪ್ರವೃತ್ತಿಯಲ್ಲಿ ಪೌರಾಣಿಕ ರಂಗಭೂಮಿ
ಯಲ್ಲಿ
ನಟರಾಗಿ ನಟಿಸುತ್ತಾ ಬಂದಿರುವರು. ಈ ಹಿಂದೆ ಇವರು ಹಾಸನದ ಕಲಾಭವನದಲ್ಲಿ ಎ.ಸಿ.ರಾಜು ನಿರ್ದೇಶನದಲ್ಲಿ ದೇವಿ ಮಹಾತ್ಮೆ ನಾಟಕದಲ್ಲಿ ರಂಬೇಶ್‌ನ ಪಾತ್ರ ನಿರ್ವಹಿಸಿದ್ದರು. ಆಗ ಇವರ ಅಭಿನಯ ನೋಡಿದ್ದೆ. ಮೊನ್ನೆ ನಾಗರಾಜ್‌ರಿಂದ ಪೋನ್ ಬಂತು. ಸಾರ್ ನಾನು ಪೌರಾಣಿಕ ನಾಟಕಗಳಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸಿರುವೆ. ನೀವು ರಂಗನಟರ ಬಗ್ಗೆ ಬರೆಯುವ ಲೇಖನಗಳನ್ನು ಓದಿರುವೆ…ಎಂದಾಗ ಇಂಜಿನಿಯರ್ ಮಾತಿನ ಇಂಗಿತ ತಿಳಿಯಿತು. ನಿಮ್ಮ ರಂಗಭೂಮಿ ಸೇವೆ ಕುರಿತಾಗಿ ಬರೆಯುವ, ಈ ದಿಶೆಯಲ್ಲಿ ಮಾಹಿತಿ ಕಳಿಸಿ ಎಂದೆ. ಅವರು ಒಂದಿಷ್ಟು ವಿಡಿಯೋ ಕಳಿಸಿದರು. ಡೌನ್‌ಲೋಡ್ ಮಾಡಿ ನೋಡಿದೆ. ನೀವು ರಂಗಕ್ಷೇತ್ರದ ಹಾದಿಯಲ್ಲಿ ಸಾಗಿಬಂದ ಮಾಹಿತಿ ಕಳಿಸಿ ಎಂದೆ. ಸಾರ್, ನೀವು ಹಾಸನದಲ್ಲಿ ಎಲ್ಲಿ ಸಿಗ್ತೀರಾ ಎಂದರು. ನಿಮ್ಮ ಮನೆ ಎಲ್ಲಿ ಎಂದೆ. ಹಾಸನದ ಚನ್ನಪಟ್ಟಣದಲ್ಲಿ ಎಂದರು. ಸರಿ, ನಾನು ಬೆಂಗಳೂರಿನಿಂದ ಬರುತ್ತಿರುವೆ ಬಸ್ ಸ್ಟ್ಯಾಂಡ್‌ನಲ್ಲಿ ನನ್ನ ಬೈಕ್ ಇದೆ. ನೀವು ಅಲ್ಲಿಗೆ ಬನ್ನಿ ಎಂದೆ, ಬಂದಿದ್ದರು. ಇಬ್ಬರು ಬೈಕ್‌ನಲ್ಲಿ ಹೊರಟು ಹಾಸನದ ಹೋಟೆಲ್ ಹೊಕ್ಕೆವು. ಕಾಫಿ ಕುಡಿಯುತ್ತಾ ಮಾತಿಗೆಳೆದೆ. ನಾನು ೨೫ ವರ್ಷಗಳಿಂದ ರಂಗಭೂಮಿಯಲ್ಲಿದ್ದೇನೆ. ನನ್ನ ಜನ್ಮ ದಿನಾಂಕ ೩೦-೫-೧೯೭೩. ನನ್ನ ಪ್ರೈಮರಿ ವಿದ್ಯಾಭ್ಯಾಸ ಸುಳಗೋಡು ಗ್ರಾಮದಲ್ಲಿ, ಪಕ್ಕದ ಗಂಜಿಗೆರೆಯಲ್ಲಿ ಮಿಡಲ್ ಸ್ಕೂಲ್. ಆಲೂರು ಕಲಿವೀರ್ ವಸತಿ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ವ್ಯಾಸಂಗ. ಡಿಪ್ಲೋಮ ಮಾಡಿದ್ದು ಹಾಸನದ ಎಲ್.ವಿ.ಪಾಲಿಟೆಕ್ನಿಕ್‌ನಲ್ಲಿ. ತಂದೆ ಹೆಸರು ಕರಿಯಯ್ಯ. ತಾಯಿ ದೇವಮ್ಮ. ೨೦೦೦ರಲ್ಲಿ ಕೆಲಸಕ್ಕೆ ಸೇರಿದೆ. ೧೯೮೪-೮೫ರಲ್ಲಿ ಸುಳಗೋಡಿನಲ್ಲಿ ಹತ್ತರ ಪ್ರಾಯದಲ್ಲಿ 
ಮೊ: ೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ-೫೭೩೨೦೧.








