ಗಂಗಾ
ವತಿ: ಪ್ರಸ್ತುತ ಈ ವರ್ಷ ನಡೆದ ಹಾನಗಲ್ಲ ಶ್ರೀ ಕುಮಾರೇಶ್ವರರ ೧೫೮ನೇ ಜಯಂತ್ಯೋತ್ಸವದ ಪ್ರಯುಕ್ತವಾಗಿ ಗಂಗಾವತಿ ನಗರದಲ್ಲಿ ಹಾನಗಲ್ಲ ಶ್ರೀ ಕುಮಾರೇಶ್ವರ ಭಜನಾ ಮಂಡಳಿ ಸ್ಥಾಪಿಸಬೇಕೆಂದು ಇಚ್ಛೆಯನ್ನು ಹೊಂದಿ, ನವೆಂಬರ್-೮ ಶನಿವಾರ, ಸಂಜೆ ೦೪:೦೦ ಗಂಟೆಗೆ ನಗರದ ಹೊಸಳ್ಳಿ ರಸ್ತೆಯಲ್ಲಿ ಬರುವ ಶ್ರೀ ಕೊಟ್ಟೂರೇಶ್ವರ ಸಿಟಿ ಸ್ಕ್ಯಾನಿಂಗ್ ಸೆಂಟರ್ ಹತ್ತಿರದ ಕನ್ನಡ ಜಾಗೃತಿ ಭವನದಲ್ಲಿ ಭಜನಾ ಮಂಡಳಿಯ ಪೂರ್ವ ಸಿದ್ಧತಾ ಸಭೆಯನ್ನು ಕರೆಯಲಾಗಿದೆ ಎಂದು ಶ್ರೀ ಹಾನಗಲ್ಲ ಕುಮಾರೇಶ್ವರ ವೇದ ಮತ್ತು ಸಂಸ್ಕೃತ ಪಾಠಶಾಲೆಯ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಶರಣಬಸವ ದೇವರು ಪ್ರಕಟಣೆಯಲ್ಲಿ ತಿಳಿಸಿದರು.
ಈ ಪೂರ್ವಸಿದ್ಧತಾ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಶರಣ ಬಂಧುಗಳು ಪಾಲ್ಗೊಂಡು ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದ ಅವರು ಪ್ರಸ್ತುತ ವರ್ಷದ ಶ್ರೀ ಹಾನಗಲ್ಲ ಕುಮಾರೇಶ್ವರರ ಜಯಂತಿ ಆಚರಣೆಯನ್ನು ಯಶಸ್ವಿಗೊಳಿಸಿದ ಎಲ್ಲ ಸದ್ಭಕ್ತರಿಗೆ ಧನ್ಯವಾದಗಳನ್ನು ತಿಳಿಸುವುದರ ಮುಖಾಂತರವಾಗಿ ಮುಂಬರುವ ದಿನಗಳಲ್ಲಿ ನಿರಂತರವಾಗಿ ಎಲ್ಲಾ ಶರಣರನ್ನು ಆಧ್ಯಾತ್ಮಿಕವಾಗಿ ಮುನ್ನಡೆಸುವ ಸಲುವಾಗಿ ಗಂಗಾವತಿ ನಗರದಲ್ಲಿ ಶ್ರೀ ಹಾನಗಲ್ಲ ಕುಮಾರೇಶ್ವರರ ಭಜನಾ ಮಂಡಳಿ ಸ್ಥಾಪನೆಗಾಗಿ ಸಹಕರಿಸಲು ತಿಳಿಸಿದ್ದಾರೆ.https://aratt.ai/@vishwaroopa_news_blog
