
ಸನಾತನಕ್ಕೆ ಅಂತ್ಯ ಎಂಬುದು ಇಲ್ಲವೇ ಇಲ್ಲ. ಅದು ನಿರಂತರ ಶಾಶ್ವತ ಅಜರಾಮರ: ಪರಮಪೂಜ್ಯ ಶ್ರೀ ವಿದುಶೇಖರ ಮಹಾಸ್ವಾಮಿಗಳು
ಗಂಗಾವತಿ: ಅವಸಾನದ ಅಂಚಿನಲ್ಲಿದ್ದ ಸನಾತನ ಹಿಂದೂ ಧರ್ಮದ ಸಂರಕ್ಷಣೆಗಾಗಿ ಜನ್ಮ ತಾಳಿದ ಆದಿ ಗುರು ಶಂಕರಾಚಾರ್ಯರು ದೇಶದ ನಾಲ್ಕು ಭಾಗಗಳಲ್ಲಿ ಪೀಠಗಳನ್ನು ಸ್ಥಾಪಿಸುವುದರ ಮೂಲಕ ಸನಾತನ ಧರ್ಮದ ಸಂರಕ್ಷಕರಾಗಿ ಶ್ರೀಮಠದ ಪರಂಪರೆ ಮುಂದುವರೆಯುತ್ತಿದ್ದು ಹೀಗಾಗಿ ಸನಾತನಕ್ಕೆ ಅಂತ್ಯವೇ ಇಲ್ಲ ಅದು ಶಾಶ್ವತ ಅಜರಾಮರ ಎಂದು ಶೃಂಗೇರಿಯ ಕಿರಿಯ ಪೀಠಾಧಿಕಾರಿಗಳಾದ ಶ್ರೀ ವಿದುಶೇಖರ ಭಾರತೀಯ ತೀರ್ಥ ಸ್ವಾಮಿಗಳು ಆಶೀರ್ವಚನದಲ್ಲಿ ನುಡಿದರು. ಅವರು ಶೃಂಗೇರಿಯ ಹಿರಿಯ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ಅವರ ಸನ್ಯಾಸ ಸ್ವೀಕಾರ ಸುವರ್ಣೋತ್ಸವ ಸಂಭ್ರಮಾಚರಣೆ…