ಗಂಗಾವತಿ: ಗದುಗಿನ ಡಾ. ವ್ಹಿ.ಬಿ ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಶ್ವಿನಿ ಪ್ರಕಾಶನ ಗದಗ ಇವರ ಸಹಯೋಗದಲ್ಲಿ ನವೆಂಬರ್-೦೨ ರಂದು ಗದುಗಿನ ಕೆ.ಎಸ್.ಎಸ್ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ೭೦ನೇ ಕನ್ನಡ ರಾಜ್ಯೋತ್ಸವ ಹಾಗೂ ಡಾ. ವ್ಹಿ.ಬಿ ಹಿರೇಮಠರ ೧೩ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿದ್ದ ದೊರೆಸ್ವಾಮಿ ವಿರಕ್ತಮಠ ಭೈರನಹಟ್ಟಿಯ ಶಾಂತಲಿಂಗ ಮಹಾಸ್ವಾಮಿಗಳು ಹಾಗೂ ವಿಶ್ವನಾಥ ಮಹಾಸ್ವಾಮಿಗಳ ಮತ್ತು ಕಾರ್ಯಕ್ರಮದ ಅ
ಧ್ಯಕ್ಷತೆ ವಹಿಸಿದ್ದ ಶ್ರೀಮತಿ ವ್ಹಿ.ಬಿ ಹಿರೇಮಠ ಅವರುಗಳ ಅಭಯ ಹಸ್ತದಿಂದ ಗಂಗಾವತಿಯ ಹಗಲುವೇಷ ಕಲಾವಿದ ಕಲ್ಯಾಣಂ ನಾಗರಾಜ ಅವ
ರಿಗೆ ಸಂತ ಶ್ರೀ ಕನಕದಾಸರ ಕಾವ್ಯರತ್ನ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಅದೇರೀತಿ ನವೆಂಬರ್-೯ ರಂದು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತುವತಿಯಿಂದ ಹಮ್ಮಿಕೊಂಡ ಕನ್ನಡಿಗರ ಕನ್ನಡ ರಾಜ್ಯೋತ್ಸವ ಹಾಗೂ ಕನಕೋತ್ಸವ ಕಾರ್ಯಕ್ರಮದಲ್ಲಿಯೂ ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷರಾದ ಡಾ. ಲಿಂಗರಾಜ ಅಂಗಡಿ, ಬೆಳಗಾವಿಯ ಹಿರಿಯ ನ್ಯಾಯವಾದಿಗಗಳಾದ ಬಸವರಾಜ ಸಿ. ಯರಗಣವಿ, ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಅಕ್ಷರದೀಪ ಫೌಂಡೇಷನ್ ಅಧ್ಯಕ್ಷರಾದ ಪ್ರವೀಣಕುಮಾರ ಕನ್ಯಾಳ, ಶಿಕ್ಷಕರು ಹಾಗೂ ಸಾಹಿತಿಗಳಾದ ಗಣಪತಿ ಹೆಗಡೆ ಅವರುಗಳ ಅಮೃತ ಹಸ್ತದಿಂದ ಕಲ್ಯಾಣಂ ನಾಗರಾಜ್ ಅವರಿಗೆ ಧಾರವಾಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಹೀಗೆ ಹುಟ್ಟಿಂದಿನಿಂದಲೇ ಹಗಲುವೇಷ ಕಲೆಯನ್ನು ರೂಢಿಸಿಕೊಂಡು ಬಂದ ಕಲ್ಯಾಣಂ ನಾಗರಾಜ ಅವರು ಹಗಲುವೇಷ ಧರಿಸಿ ಸರ್ಕಾರದ ವಿವಿಧ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಮಾಯಣ ಮತ್ತು ಮಹಾಭಾರತಗಳಲ್ಲಿ ಬರುವ ಸುಮಾರು ೩೨ ಪಾತ್ರಧಾರಿ ವೇಷಗಳನ್ನು ಧರಿಸಿ ಅಭಿನಯಿಸುವುದರೊಂದಿಗೆ ಹಾರ್ಮೋನಿಯಂ, ತಬಲಾ ನುಡಿಸುವುದು ಸೇರಿದಂತೆ ಗಾಯನದೊಂದಿಗೆ ತಮ್ಮ ಕಲೆಯನ್ನು ಕನ್ನಡ ನಾಡಿನಲ್ಲಿ ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲಿಯೂ ಪ್ರದರ್ಶಿಸಿ ಜನಮನ್ನಣೆ ಗಳಿಸಿದ್ದು, ಸರ್ಕಾರದಿಂದ ಹಾಗೂ ಸರ್ಕಾರೇತರ ಸಂಸ್ಥೆಗಳಿ೦ದ ಸಾಕಷ್ಟು ಪ್ರಶಸ್ತಿ ಹಾಗೂ ಸನ್ಮಾನಗಳನ್ನು ಪಡೆದಿರುತ್ತಾರೆ.
ಇಂತಹ ಬಹುಮುಖಿ ಪ್ರತಿಭೆ ಹೊಂದಿದ ಕಲಾವಿದರಿಗೆ ಕರ್ನಾಟಕ ಸರ್ಕಾರ ಇದುವರೆಗೂ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದಿಲ್ಲ. ಮುಂದಿನ ದಿನಗಳಲ್ಲಿಯಾದರೂ ಸರ್ಕಾರ ಇವರ ಪ್ರತಿಭೆಯನ್ನು ಗುರುತಿಸಿ ಉನ್ನತ ಪ್ರಶಸ್ತಿಗಳನ್ನು ನೀಡಿ ಗೌರವಿಸಿ ಪ್ರೋತ್ಸಾಹಿಸಬೇಕಿದೆ.
